ಪೊಲೀಸರ ದಾಳಿ: ಮಟಕಾ ಬುಕ್ಕಿಗಳು ಅಂದರ್

blank

ಪೊಲೀಸರ ದಾಳಿ: ಮಟಕಾ ಬುಕ್ಕಿಗಳು ಅಂದರ್

ಬೆಳಗಾವಿ
ನಗರದಲ್ಲಿ ನಡೆದ ಮೂರು ಪ್ರತ್ಯೇಕ ದಾಳಿಯಲ್ಲಿ ಮಟಕಾ ಅಂಕಿ ಆಟದಲ್ಲಿ ತೊಡಗಿದ್ದ ಹಲವರನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಲ್ಲಿನ ಕ್ಯಾಂಪ್ ಪ್ರದೇಶ ವ್ಯಾಪ್ತಿಯ ಹಾಜಾಪೀರ ರಸ್ತೆಯಲ್ಲಿ ಮಟಕಾ ಅಂಕಿ ಸಂಖ್ಯೆ ವ್ಯವಹಾರದಲ್ಲಿ ತೊಡಗಿದ್ದ ವೇಳೆ ಕ್ಯಾಂಪ್ ಪೊಲೀಸರು ದಾಳಿ ನಡೆಸಿ ಓರ್ವನನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಕ್ಯಾಂಪ್ ಪ್ರದೇಶದ ತೆಲಗು ಕಾಲನಿಯ ನಿವಾಸಿ ಪ್ರಸನ್ ಹನುಮಂತ ಉಪ್ಪಾರ( 46) ಬಂಧಿತ.ದಾಳಿ ವೇಳೆ ಆರೋಪಿಯಿಂದ 2300 ನಗದು ಹಣ ಮತ್ತು ಮಟಕಾ ಬರೆಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ದಾಳಿಯಲ್ಲಿ ನಗರದ ಕಲ್ಯಾನಟ್ಟಿ-ರಂಗದೋಳಿ ರಸ್ತೆಯ ಪಕ್ಕದಲ್ಲಿ ಮಟಕಾ ಚೀಟಿ ವ್ಯವಹಾರದಲ್ಲಿ ತೊಡಗಿದ್ದ ಆರು ಜನರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ತೀರ್ಥಕುಂಡೆ ನಿವಾಸಿ ಶ್ಯಾಮ ಲಕ್ಷ್ಮಣ ಮುತ್ಯಾ‌ನಟ್ಟಿ ,ಬಾಮನವಾಡಿಯ ಕಿರಣ ಸೋಮನಾಥ ಕೆಂಗಣ್ಣವರ ,ಸಂತ್ತಿಬಸ್ತವಾಡದ ಪರಶುರಾಮ ಬಾಬು ದೇಸೂರಕರ,ನಾಮದೇಶ ಯಶವಂತ ಕಿಲ್ಲೆಕರ,ನಾಗಪ್ಪ ಲಕ್ಷ್ಮಣ ಬಡ್ರಿ,ವಾಘೆವಾಡಿಯ ರಾಜು ಬಾಬು ಶಿಂಧೆ ಬಂಧಿತ ಆರೋಪಿಗಳು.
ದಾಳಿ ವೇಳೆ 2470 ರೂ.ನಗದು,ಮಟಕಾ ಬರೆಯಲು ಬಳಸುತ್ತಿದ್ದ ಸಾಮಗ್ರಿಗಳು ಹಾಗು 5 ಮೊಬೈಲ್ ಪೋನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ದಾಳಿಯಲ್ಲಿ ಸುಳೆಬಾವಿ ಗ್ರಾಮದ ದುರ್ಗಾ ಮಂದಿರ ಹತ್ತಿರ ಮಟಕಾ ಬರೆದುಕೊಳ್ಳುವ ವ್ಯವಹಾರದಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ಮಾರಿಹಾಳ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಸುಳೆಬಾವಿ ನಿವಾಸಿ ಅರ್ಜುನ ಫಕಿರಪ್ಪ ಗಡಗಿ(23),ರಾಜು ಫಕಿರಪ್ಪ ಗಡಗಿ ಬಂಧಿತ ಸಹೋದರು.
ದಾಳಿ ವೇಳೆ 2300 ನಗದು ಹಣ ಮತ್ತು ಮಟಕಾ ಬರೆಯಲು ಬಳಸುತ್ತಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

ಸ್ನಾನದ ನಂತರವೂ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆಯೇ? ಹೀಗೆ ಮಾಡಿ ನೋಡಿ…. life style

life style: ಕೆಲವರಿಗೆ ದೇಹದಿಂದ ವಾಸನೆ ಬರುವುದನ್ನು ನೀವು ಗಮನಿಸಿರಬಹುದು. ಅದು ಚಳಿಯಾಗಿರಬಹುದು, ಮಳೆಯಾಗಿರಬಹುದು, ಸಣ್ಣ…

ವಕ್ರ ದಂತ ಸಮಸ್ಯೆಗೆ ಸೂಕ್ತ ಪರಿಹಾರ ಅಲೈನರ್

ಹಲ್ಲು ಅಡ್ಡಾದಿಡ್ಡಿ ಇದ್ದರೆ ಅಂಥವರು ಮುಜುಗರದಿಂದ ಮನಬಿಚ್ಚಿ ನಗದಿರುವುದೇ ಹೆಚ್ಚು. ಆದರೆ ಈಗ ಅಷ್ಟಕ್ಕೆಲ್ಲ ಚಿಂತೆ…