ಕಲಬುರಗಿ: ನಂದಿಕೂರದ ಮಲ್ಲಯ್ಯ ಸ್ವಾಮಿ ಅಪಹರಣ, ೨೦ ಲಕ್ಷ ರು. ದರೋಡೆ ಪ್ರಕರಣದಲ್ಲಿ ಪೊಲೀಸರ ವೈಲ್ಯ ಖಂಡಿಸಿ, ನಗರ ಪೊಲೀಸ್ ಆಯುಕ್ತರ ಕಚೇರಿಗೆ ಶ್ರೀರಾಮ ಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಯತ್ನಿಸಿ, ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರಕರಣದ ತನಿಖೆ ಮಾಹಿತಿ ನೀಡಬೇಕು. ಹಣ ಜಪ್ತಿಯ ಬಗ್ಗೆ ಮಾಹಿತಿ ನೀಡಬೇಕು. ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸೋಮವಾರ ನೂರಾರು ಶ್ರೀರಾಮ ಸೇನೆ ಕರ‍್ಯರ‍್ತರು ಹಾಗೂ ಮಲ್ಲಯ್ಯ ಸ್ವಾಮಿ ಕುಟುಂಬ ಸದಸ್ಯರು ಸೇರಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸೋಮವಾರ ಮುತ್ತಿಗೆಗೆ ಯತ್ನಿಸಿ, ಪೊಲೀಸ್ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್ ರ‍್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
೨೦ ಲಕ್ಷ ರೂ. ಕಳೆದುಕೊಂಡ ಮಲ್ಲಯ್ಯ ಸ್ವಾಮಿಗೆ ಹಣ ಪೊಲೀಸರು ರಿಕವರಿ ಮಾಡಿಕೊಟ್ಟಿಲ್ಲ. ಪ್ರಕರರಣದ ಹಲವು ಆರೋಪಿಗಳನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಸಚಿವ ಪ್ರಿಯಾಂಕ್ ರ‍್ಖಗೆ ಆದೇಶದ ಹಿನ್ನೆಲೆ ಬಂಧಿಸುತ್ತಿಲ್ಲ. ಪೊಲೀಸ್ ಇಲಾಖೆಯೇ ದರೋಡೆಕೋರರನ್ನು ರಸುತ್ತಿದೆ. ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಆರೋಪಿಸಿದರು.
ಶ್ರೀರಾಮ ಸೇನೆ ರಾಷ್ಟ್ರೀಯ ಗೌರವ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಲ್ಲಯ್ಯ ಸ್ವಾಮಿಯನ್ನು ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಆಪ್ತರು, ನಾಲ್ಕೆ$ದು ಗುಂಡಾಗಳನ್ನು ಅಪಹರಿಸಿ, ೨೦ ಲಕ್ಷ ಹಣ ದರೋಡೆ ಮಾಡಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ. ಘಟನೆ ನಡೆದು ಮೂರು ತಿಂಗಳಾದರೂ ಪೊಲೀಸರು ನಿರಾಸಕ್ತ ತೋರಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ನೀಡುತ್ತಿಲ್ಲ. ಬಂಧನ, ಹಣ ಜಪ್ತಿ ಸತ್ಯಾಸತ್ಯತೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಅಶೋಕ್ ಬಗಲಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಾಕೇಶ ಜಮಾದಾರ, ಜೇರ‍್ಗಿ ತಾಲೂಕಾಧ್ಯಕ್ಷ ಮಲ್ಕಣ್ಣ ಹಿರೇಪೂಜಾರಿ, ಈಶ್ವರ ಹಿಪ್ಪರಗಾ, ಮಡಿವಾಳ ಇತರರಿದ್ದರು.
