Friday, 16th November 2018  

Vijayavani

Breaking News

ಪೈಲ್ವಾನ್​ಗೆ ಲಾರ್ನೆಲ್ ಸ್ಟಂಟ್ಸ್!

Thursday, 13.09.2018, 2:04 AM       No Comments

ಬೆಂಗಳೂರು: ಕಳೆದ ಕೆಲ ದಿನಗಳಿಂದ ಕೆಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಬಿಜಿಯಾಗಿದ್ದ ನಟ ‘ಕಿಚ್ಚ’ ಸುದೀಪ್ ಪುನಃ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಅವರ ಅಭಿನಯದ ‘ಪೈಲ್ವಾನ್’ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗಿದೆ. ಈ ಮಧ್ಯೆ ‘ಪೈಲ್ವಾನ್’ ಸೆಟ್​ನಿಂದ

ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಹಾಲಿವುಡ್ ಸಾಹಸ ನಿರ್ದೇಶಕ ಲಾರ್ನೆಲ್ ಸ್ಟೊವೆಲ್ ‘ಪೈಲ್ವಾನ್’ಗೆ ಸ್ಟಂಟ್ ಪಾಠ ಹೇಳಿಕೊಡಲಿದ್ದಾರೆ.

‘ಕ್ಯಾಪ್ಟನ್ ಅಮೆರಿಕ; ಸಿವಿಲ್ ವಾರ್’, ‘ಕಿಕ್ ಬಾಕ್ಸರ್’, ‘ಡ್ರಾಗನ್ ಐಯ್್ಸ, ‘ದಿ ಹಂಗರ್ ಗೇಮ್್ಸ’ ಸೇರಿ ಸಾಕಷ್ಟು ಹಾಲಿವುಡ್ ಸಿನಿಮಾಗಳು ಮತ್ತು ಟಿವಿ ಶೋಗಳಿಗೆ ಸಾಹಸ ನಿರ್ದೇಶನ ಮಾಡಿರುವ ಕೀರ್ತಿ ಲಾರ್ನೆಲ್​ಗೆ ಇದೆ. ಅಂದಹಾಗೆ, ಭಾರತೀಯ ಸಿನಿಮಾಗಳಿಗೆ ಅವರು ಸಾಹಸ ನಿರ್ದೇಶನ ಮಾಡಿರುವುದು ಇದೇ ಮೊದಲೇನಲ್ಲ. ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಮತ್ತು ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಸರಣಿಗೂ ಲಾರ್ನೆಲ್ ಕೆಲಸ ಮಾಡಿದ್ದರು. ಇದೀಗ ‘ಪೈಲ್ವಾನ್’ ಮೂಲಕ ಕನ್ನಡಕ್ಕೂ ಈ ಹಾಲಿವುಡ್ ಪ್ರತಿಭೆಯ ಆಗಮನವಾಗಿದೆ. ಎಸ್. ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದ್ದು, ಹೈದರಾಬಾದ್​ನಲ್ಲಿ ಎರಡನೇ ಹಂತದ ಚಿತ್ರೀಕರಣಕ್ಕೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಇನ್ನು, ಅಕ್ಟೋಬರ್​ನಲ್ಲಿ ಭಾರತಕ್ಕೆ ಆಗಮಿಸಲಿರುವ ಲಾರ್ನೆಲ್, ಒಂದಷ್ಟು ತಯಾರಿ ಮಾಡಿಕೊಳ್ಳಲಿದ್ದಾರೆ. ಡ್ಯೂಪ್ ಕಲಾವಿದರನ್ನಿಟ್ಟುಕೊಂಡು ಸಿದ್ಧತೆ ಮಾಡಿಕೊಳ್ಳಲಿರುವ ಅವರು, ನಂತರ ಸುದೀಪ್​ಗೆ ಫೈಟ್ ಹೇಳಿಕೊಡಲಿದ್ದಾರೆ. ‘ಪೈಲ್ವಾನ್’ಗೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಸ್ವಪ್ನಾ ಕೃಷ್ಣ ನಿರ್ವಣದ ಹೊಣೆ ಹೊತ್ತುಕೊಂಡಿದ್ದಾರೆ.

ಅ.18ಕ್ಕೆ ವಿಲನ್ ಆಗಮನ!

ಕನ್ನಡ ಸಿನಿಪ್ರಿಯರು ಬಹುದಿನಗಳಿಂದ ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆ; ‘ದಿ ವಿಲನ್’ ಬಿಡುಗಡೆ ಯಾವಾಗ? ಅದಕ್ಕೆ ಕಡೆಗೂ ಉತ್ತರ ಸಿಕ್ಕಿದೆ. ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ನಿರ್ದೇಶಕ ಪ್ರೇಮ್ ರಿಲೀಸ್ ದಿನಾಂಕ ಘೋಷಿಸಿದ್ದಾರೆ. ಈ ಮೂಲಕ ಅಕ್ಟೋಬರ್ 18ಕ್ಕೆ ‘ದಿ ವಿಲನ್’ ಆಗಮಿಸುವುದು ಖಚಿತ ಎಂದಿದ್ದಾರೆ. ಶಿವರಾಜ್​ಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಜತೆಯಾಗಿ ನಟಿಸಿರುವುದರಿಂದ ಸಹಜವಾಗಿಯೇ ಅಭಿಮಾನಿಗಳ ವಲಯದಲ್ಲಿ ಭಾರಿ ನಿರೀಕ್ಷೆ ಮನೆ ಮಾಡಿದೆ. ಚಿತ್ರದ ಕಥೆ ಬಗ್ಗೆಯಂತೂ ‘ವಿಲನ್’ ಬಳಗ ಕಿಂಚಿತ್ತೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಇಲ್ಲಿ ಹೀರೋ ಯಾರು, ವಿಲನ್ ಯಾರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಕಾರಣಕ್ಕಾಗಿ ಅ.18 ಯಾವಾಗ ಬರುತ್ತೋ ಎಂದು ಕಾಯುತ್ತಿದ್ದಾರೆ ಅಭಿಮಾನಿಗಳು. ಬಹುನಿರೀಕ್ಷಿತ ಚಿತ್ರವಾದ್ದರಿಂದ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಮಾಡುವುದು ನಿರ್ವಪಕ ಸಿ.ಆರ್. ಮನೋಹರ್ ಯೋಜನೆ. ಏಕಕಾಲಕ್ಕೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ದಿ ವಿಲನ್’ ಅಬ್ಬರಿಸಲಿದ್ದು, 15 ದಿನ ಮುಂಚಿತವಾಗಿ ಬುಕ್ಕಿಂಗ್ ಶುರುವಾಗುವ ಸಾಧ್ಯತೆ ಇದೆ. ಚಿತ್ರದಲ್ಲಿ ನಾಯಕಿಯಾಗಿ ಆಮಿ ಜಾಕ್ಸನ್ ಬಣ್ಣ ಹಚ್ಚಿದ್ದಾರೆ.

Leave a Reply

Your email address will not be published. Required fields are marked *

Back To Top