ಪೈಪ್ ಒಡೆದು ಜೀವಜಲ ಪೋಲು

ಹುಬ್ಬಳ್ಳಿ: ಒಂದೆಡೆ ಕುಡಿಯುವ ನೀರಿಗೆ ಹಾಹಾಕಾರ, ಮತ್ತೊಂದೆಡೆ ನೀರು ಪೂರೈಸುವ ಪೈಪ್ ಒಡೆದರೂ ದುರಸ್ತಿ ಕೈಗೊಳ್ಳಲು ನಿರ್ಲಕ್ಷ್ಯನ !

ಇಲ್ಲಿನ ದೇಸಾಯಿ ವೃತ್ತದ ಬಳಿಯ ಜಿಮ್ಖಾನಾ ಕ್ಲಬ್​ನ ರಾಯಕರ ಪೆಟ್ರೋಲ್ ಪಂಪ್ ಎದುರು ಕೇಶ್ವಾಪುರ ಭಾಗಕ್ಕೆ ಕುಡಿಯುವ ನೀರು ಪೂರೈಸುವ ಪೈಪ್ ಒಡೆದು ಕೆಲ ದಿನಗಳಾದರೂ ದುರಸ್ತಿಗೊಳಿಸಿಲ್ಲ.

ಒಡೆದ ಪೈಪ್​ನಿಂದ ಕುಡಿಯುವ ನೀರು ಪೋಲಾಗುತ್ತಿದೆ. ಪೈಪ್ ಸುತ್ತಲೂ ಕೊಳಚೆ ನೀರು ನಿಂತಿದ್ದು, ಪೈಪ್ ಒಳಗೆ ನುಸುಳುತ್ತಿದೆ. ಕೊಳಚೆ ನೀರು ಮಿಶ್ರಿತ ನೀರು ಕುಡಿಯುವ ದುಸ್ಥಿತಿ ಇಲ್ಲಿಯ ಜನರದ್ದು.

ಸಕಾಲಕ್ಕೆ ಕುಡಿಯುವ ನೀರು ಪೂರೈಸುವುದಕ್ಕಾಗಿ ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಇಂಥದ್ದರಲ್ಲಿ ಒಡೆದ ಪೈಪ್​ಗಳ ದುರಸ್ತಿಯ ಸಣ್ಣಪುಟ್ಟ ಕಾಮಗಾರಿಗಳ ಬಗ್ಗೆ ಜಲಮಂಡಳಿ ನಿರ್ಲಕ್ಷ ತೋರುತ್ತಿದೆ.

ಜಲಮಂಡಳಿಯ ಈ ಬೇಜವಾಬ್ದಾರಿ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದ್ದು, ಇನ್ನಾದರೂ ಒಡೆದ ಪೈಪ್ ದುರಸ್ತಿ ಮಾಡುವ ಮೂಲಕ ಕುಡಿಯುವ ನೀರು ಪೋಲಾಗದಂತೆ ಜಲಮಂಡಳಿ ಎಚ್ಚರಿಕೆ ವಹಿಸಬೇಕಿದೆ.

Leave a Reply

Your email address will not be published. Required fields are marked *