ದಾಂಡೇಲಿ: ನಗರದಲ್ಲಿ ಎಲ್ಲವೂ ಸ್ಥಬ್ಧಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರದಿಂದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಗೆ ಕಚ್ಚಾ ವಸ್ತು ತುಂಬಿಕೊಂಡು ಬರುವ ಕೇರಳ ಮತ್ತು ಮಹಾರಾಷ್ಟ್ರದ ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ದಿನಕ್ಕೆ ಕೇವಲ 15 ಟ್ರಕ್ಗಳಿಗೆ ಮಾತ್ರ ಕಚ್ಚಾ ವಸ್ತು ಖಾಲಿಮಾಡಲು ಅನುಮತಿ ನೀಡಲಾಗಿದೆ.
ಕಚ್ಚಾ ವಸ್ತು ಇಳಿಸುವ ಪೂರ್ವದಲ್ಲಿ ಪ್ರತಿ ಟ್ರಕ್ ಅನ್ನು ಸ್ಯಾನಿಟೈಸರ್ ಬಳಿಸಿ ತೊಳೆಸಲಾಗುತ್ತಿದೆ. ಎರಡು ಗೇಟ್ಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾರೆ. ಟ್ರಕ್ ಚಾಲಕನನ್ನು ಹೊರೆತು ಪಡಿಸಿ ಕಾರ್ಖಾನೆಯ ಒಳಗೆ ಯಾರಿಗೂ ಪ್ರವೇಶ ನೀಡಲಾಗುತ್ತಿಲ್ಲ.
ಸರಳ ಅಂತ್ಯಕ್ರಿಯೆ: ವಯೋ ಸಹಜವಾಗಿ ಇಬ್ಬರು ವೃದ್ಧರು ನಗರದಲ್ಲಿ ಭಾನುವಾರ ಮೃತ ಪಟ್ಟ ಕಾರಣ ನಗರದ ಕಂದಾಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಷರತ್ತು ವಿಧಿಸಿ ಅಂತ್ಯ ಕ್ರಿಯೆಗೆ ಅವಕಾಶ ಮಾಡಿಕೊಟ್ಟರು.