ಪುರವ ಕ್ಯಾಷ್ ಪರಿಚಯಿಸಿದ ಪುರವಂಕರ

ಬೆಂಗಳೂರು: ದೇಶದ ಪ್ರತಿಷ್ಠಿತ ರಿಯಾಲ್ಟಿ ಕಂಪನಿ ಪುರವಂಕರ ಲಿಮಿಟೆಡ್ ಇದೇ ಮೊದಲ ಬಾರಿಗೆ ರಿಯಲ್​ಎಸ್ಟೇಟ್ ವರ್ಚ್ಯುವಲ್ ಕರೆನ್ಸಿ ‘ಪುರವ ಕ್ಯಾಷ್’ ಪರಿಚಯಿಸಿದೆ.

ಪುರವಂಕರದ ಫ್ಲಾ್ಯಗ್​ಶಿಪ್ ಎಕ್ಸ್​ಪೋ ಆದ ಬಿಗ್ 72 ಅವರ್ಸ್ ಅಂಗವಾಗಿ ಕರೆನ್ಸಿ ಪರಿಚಯಿಸಿದೆ. ಕಂಪನಿ ಸೆ.27ರಿಂದ 29ರವರೆಗೆ ಲಲಿತ್ ಅಶೋಕ್ ಹೋಟೆಲ್​ನಲ್ಲಿ ನಡೆಯಲಿರುವ ಎಕ್ಸ್​ಪೋದಲ್ಲಿ ಮನೆ ಖರೀದಿಸುವ ಗ್ರಾಹಕರಿಗೆ ಕರೆನ್ಸಿಯಿಂದ ಆಕರ್ಷಕ ದರ ಹಾಗೂ ಪಾವತಿ ಯೋಜನೆಗಳು ದೊರೆಯಲಿವೆ ಎಂದು ಕಂಪನಿ ತಿಳಿಸಿದೆ.

ಮನೆ ಖರೀದಿಸುವವರು ಕಂಪನಿಯ ವೆಬ್​ಸೈಟ್, ಪುರವಂಕರ ಫೇಸ್​ಬುಕ್ ಅಥವಾ ಇನ್​ಸ್ಟಾಗ್ರಾಂನಲ್ಲಿ ನೋಂದಣಿ ಮಾಡಿಸಿದರೆ 50 ಸಾವಿರ ರೂ. ಮೌಲ್ಯದ ಪುರವ ಕ್ಯಾಷ್ ಪಡೆಯಬಹುದು. ಮನೆ ಖರೀದಿಸಿ ನೋಂದಾಯಿಸಿಕೊಂಡವರು ಮತ್ತೊಬ್ಬ ಖರೀದಿದಾರರನ್ನು ಪರಿಚಯಿಸಿದರೆ 10 ಸಾವಿರ ರೂ. ಬೋನಸ್ ಲಭ್ಯ. ಯೋಜನೆಯ ಆಯ್ಕೆಗೆ ಅನುಗುಣವಾಗಿ ಒಬ್ಬ ವ್ಯಕ್ತಿ 5 ಲಕ್ಷ ರೂ.ವರೆಗೆ ಪ್ರಯೋಜನವನ್ನು ಪಡೆಯಬಹುದು. ಪರವಂಕರ ಹಾಗೂ ಪ್ರಾವಿಡೆಂಟ್ ಯೋಜನೆಗಳಿಗೆ ಈ ಸೌಲಭ್ಯ ಲಭ್ಯ ಇದೆ. ಪುರವ ಕ್ಯಾಷ್ ವಿನಿಮಯ ಮಾಡಿಕೊಳ್ಳಲು ಸೆ.29 ಕೊನೆಯ ದಿನವಾಗಿದೆ.ವರ್ಗಾಯಿಸಬಹುದಾದ ರಿವಾರ್ಡ್ ವ್ಯವಸ್ಥೆ ಇದಾಗಿದೆ. ಖರೀದಿದಾರರು ಹೆಚ್ಚುವರಿ ಪುರವ ಕ್ಯಾಷ್​ಅನ್ನು ಸಂಬಂಧಿಕರು ಹಾಗೂ ಸ್ನೇಹಿತರಿಗೆ ವರ್ಗಾಯಿಸಬಹುದು. ಅಲ್ಲದೆ, ಪುರವಂಕರ ಅಥವಾ ಪ್ರಾವಿಡೆಂಟ್ ಹೋಂ ಖರೀದಿ ಮೂಲಕ ಪುರವ ಕ್ಯಾಷ್ ನಗದೀಕರಿಸಿಕೊಳ್ಳಬಹುದು.

ನಂಬಿಕೆಗೆ ಅರ್ಹ ಯೋಜನೆ

ಪರವಂಕರ ಪರಿಚಯಿಸಿರುವ ‘ಪುರವ ಕ್ಯಾಷ್’ ನಂಬಿಕೆಗೆ ಅರ್ಹವಾಗಿದೆ. ನಮ್ಮಯೋಜನೆ ಯಾವಾಗಲೂ ಗ್ರಾಹಕರ ಪರ ಹಾಗೂ ಖರೀದಿದಾ ರರಿಗೆ ಹೆಚ್ಚುವರಿ ಅನುಕೂಲ ಒದಗಿಸುತ್ತದೆ ಎಂದು ಪುರವಂಕರ ಕಂಪನಿ ಎಂಡಿ ಆಶಿಶ್ ಆರ್. ಪುರವಂಕರ ಹೇಳಿದರು. ಹೆಚ್ಚು ಗ್ರಾಹಕರನ್ನು ಪರಿಚಯಿಸಿದರೆ ಹೆಚ್ಚು ಹಣ ಪಡೆಯಬಹುದು ಎಂದು ತಿಳಿಸಿದರು.

  • ಸ್ಥಳದಲ್ಲೇ ಕಾದಿರಿಸುವವರಿಗೆ ಆಕರ್ಷಕ ಕೊಡುಗೆ ಲಭ್ಯ
  • ಪುರವ ಕ್ಯಾಷ್ ರಿಡೀಮ್ ಮಾಡಿಕೊಳ್ಳಲು ಸೆ.29 ಕೊನೆಯ ದಿನ.
  • ವಿವರ ಮತ್ತು ನೋಂದಣಿಗಾಗಿ ಟೋಲ್ ಫ್ರೀ ನಂ: 1860 208 0000 ಸಂರ್ಪಸಬಹುದು.
  • ವೆಬ್​ಸೈಟ್: www.puravankara.com/big72-season3

Leave a Reply

Your email address will not be published. Required fields are marked *