ಪುದುಪಾಡಿಯಲ್ಲಿ ವೈದಿಕ ಶಿಬಿರಕ್ಕೆ ಚಾಲನೆ

blank

ವಿರಾಜಪೇಟೆ : ಸಮೀಪದ ಬೇಟೋಳಿ ರಾಮನಗರದ ಪುದುಪಾಡಿ ಅಯ್ಯಪ್ಪ ಸಭಾಭವನದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ವೈದಿಕ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಶ್ರೀ ಗಣಪತಿ ಹಾಗೂ ಶ್ರೀ ಪುದುಪಾಡಿ ಅಯ್ಯಪ್ಪ ದೇವಸ್ಥಾನದ ಸಭಾ ಭವನದಲ್ಲಿ ಆಯೋಜಿಸಿದ್ದ ಶಿಬಿರವನ್ನು ಪುದುಪಾಡಿ ಅಯ್ಯಪ್ಪ ದೇವಸ್ಥಾನದ ಉಪಾಧ್ಯಕ್ಷ ಬಿ. ಜಿ. ನಂದ ಬೋರ್ಕರ್ ಹಾಗೂ ಗೀತಾ ಬೋರ್ಕರ್ ದಂಪತಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಅರ್ಚಕ ರಾಜೇಶ್ ಭಟ್ ಅವರು ಶಿಬಿರದ ದಿನಚರಿ ಹಾಗೂ ಶಿಬಿರಾರ್ಥಿಗಳು ಪಾಲಿಸ ಬೇಕಾದ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವೈದಿಕ ವಿಧಾನಗಳನ್ನು ವಿವರಿಸಿದರು.
ಒಟ್ಟು ಹದಿನೈದು ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್, ವೇಣುಗೋಪಾಲ್ ಭಟ್, ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಪಿ.ಸಂತೋಷ್, ಶೈಲೇಶ್ ಕಾಮತ್, ಶಾಂತಿಭೂಷಣ್ ಬೋರ್ಕರ್, ಜ್ಯೋತಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಪಾಲಕರು ಉಪಸ್ಥಿತರಿದ್ದರು.

blank
Share This Article
blank

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

blank