Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಪುಟಾಣಿ ಸಫಾರಿ ಜಂಬೂ ಸವಾರಿ

Tuesday, 01.08.2017, 3:00 AM       No Comments

ಬೆಂಗಳೂರು: ಚಿತ್ರಮಂದಿರಗಳ ಕೊರತೆಯಿಂದಾಗಿಯೇ ಕನ್ನಡದ ಅನೇಕ ಸಿನಿಮಾಗಳು ಬಿಡುಗಡೆಯಾದ ಒಂದೆರಡು ದಿನಕ್ಕೆ ಥೇಟರ್​ಗಳಿಂದ ಕಾಣೆಯಾಗಿ ಬಿಡುತ್ತವೆ. ಇನ್ನು ಮಕ್ಕಳ ಚಿತ್ರಗಳ ಬಿಡುಗಡೆಗೆ ಥಿಯೇಟರ್​ಗಳು ಸಿಗುವುದೇ ಕಷ್ಟ. ಆದರೆ, ಇಲ್ಲೊಂದು ಮಕ್ಕಳ ಚಿತ್ರ ಮೂರನೇ ವಾರವೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಜು. 14ರಂದು ತೆರೆಕಂಡಿರುವ ಬಿ.ಎಸ್. ಚಂದ್ರಶೇಖರ್ ನಿರ್ವಣದ ‘ಪುಟಾಣಿ ಸಫಾರಿ’ ಸಿನಿಮಾ ಈಗಲೂ ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಅಂದಹಾಗೆ ಇದು ಎರಡು ಕುಟುಂಬದಲ್ಲಿನ ಇಬ್ಬರು ಬಾಲಕರ ಸುತ್ತ ಹೆಣೆದ ಕಥೆ. ಒಂದು ಕುಟುಂಬದ ಹುಡುಗನಿಗೆ ಓದಲು ಇಷ್ಟವಿದ್ದರೂ ಪಾಲಕರ ನಿರೀಕ್ಷೆ ಹಾಗೂ ಚೆನ್ನಾಗಿ ಓದು ಎಂಬ ಒತ್ತಡ ವಿಪರೀತ ಇರುತ್ತದೆ. ಇನ್ನೊಂದು ಕುಟುಂಬದ ಬಾಲಕನಿಗೆ ಓದಲು ಇಷ್ಟವಿದ್ದರೂ ಮನೆಯವರು ಶಾಲೆಗೆ ಕಳುಹಿಸುವುದಿಲ್ಲ. ಹೀಗೆ ಈ ಇಬ್ಬರು ಬಾಲಕರು ಒಮ್ಮೆ ಕಾಡಿನಲ್ಲಿ ಸಿಕ್ಕಿ ಹಾಕಿಕೊಂಡಾಗ ಅವರಿಬ್ಬರು ಅಲ್ಲಿನ ಪರಿಸ್ಥಿತಿ ನಿಭಾಯಿಸಿ ಹೇಗೆ ಹೊರಬರುತ್ತಾರೆ ಎಂಬುದು ‘ಪುಟಾಣಿ ಸಫಾರಿ’ ಎನ್ನುತ್ತಾರೆ ನಿರ್ದೇಶಕ ರವೀಂದ್ರ ವಂಶಿ.

ಸುಂಕದಕಟ್ಟೆಯ ಮೋಹನ್, ಕಾಮಾಕ್ಷಿಪಾಳ್ಯದ ವಿಶಾಲ್ ಹಾಗೂ ಉಳ್ಳಾಲ ಉಪನಗರದ ವಜ್ರೇಶ್ವರಿ ಚಿತ್ರಮಂದಿರಗಳಲ್ಲಿ ‘ಪುಟಾಣಿ ಸಫಾರಿ‘ಯ ಜಂಬೂ ಸವಾರಿ ನಡೆಯುತ್ತಿದೆ, ಅರ್ಥಾತ್ ಉತ್ತಮ ಪ್ರದರ್ಶನ ಕಾಣುತ್ತಿದೆ.

Leave a Reply

Your email address will not be published. Required fields are marked *

Back To Top