ಪೀತಾಂಬರ ಸೀರೆ ಸಮರ್ಪಣೆಯ ಮೆರವಣಿಗೆ

blank

ಬಾಗಲಕೋಟೆ: ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಂಪಿ ಶ್ರೀಗಾಯತ್ರಿ ಪೀಠದಿಂದ ಬನಶಂಕರಿ ಕ್ಷೇತ್ರಕ್ಕೆ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಮೂಲಕ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಸಮರ್ಪಣೆಯ ಮೆರವಣಿಗೆಯೂ ಭಾನುವಾರ ಜಿಲ್ಲೆಯ ಇಳಕಲ್ಲ ತಾಲೂಕಿನ ಗುಡೂರ ಎಸ್.ಸಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.

ಬನಶಂಕರಿ ದೇವಾಲಯದಲ್ಲಿ ಬೆಳಗಿನ ಜಾವ ದೇವಿಗೆ ಅಭಿಷೇಕ ಮಾಡಿ ಆಭರಣಗಳನ್ನು ಹಾಕಿ ಮಹಾ ಮಂಗಳಾರತಿ ಮಾಡಲಾಯಿತು. ನಂತರ ಪೀತಾಂಬರ ಸೀರೆ ಹೊತ್ತ ಪಲ್ಲಕ್ಕಿಯ ಮೆರವಣಿಗೆಯೂ ಹಂಪಿ ಹೇಮಕೂಟ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮಿಜಿ ನೇತೃತ್ವದಲ್ಲಿ ಸಾಗಿತು.

ಪಿತಾಂಬರ ಸೀರೆ ಸಮರ್ಪಣೆ ಕಾರ್ಯ ದೇವಾಂಗ ಸಮಾಜದ ಕುಲದೇವತೆ ನಾಡಿನ ಶಕ್ತಿ ಸ್ವರೂಪಿಣಿ ಬನಶಂಕರಿ ದೇವಿಗೆ ಬನದಹುಣ್ಣಿಮೆಯೆಂದು ದೇವಾಂಗ ಸಮಾಜದ ಮೂಲ ಕುಲಕಸಬಿನ ವೃತ್ತಿ, ಕಾಯಕ ನೇಕಾರಿಕೆಯಾಗಿದ್ದರಿಂದ ಸೇವಾ ರೂಪದಲ್ಲಿ ತಿಂಗಳುಗಳ ಕಾಲ ಮಡಿಯಿಂದ ನೈದ ಪೀತಾಂಬರ ಸೀರೆ ಬನದಹುಣ್ಣಿಮೆಯಂದು ಸಮರ್ಪಿಸಿ ಸದ್ಭಕ್ತರನ್ನು ಕರುಣಿಸು ಎಂದು ಪ್ರಾರ್ಥಿಸಲಾಗುತ್ತದೆ.

ಮಳಿಯಪ್ಪಜ್ಜನ ದೇವಸ್ಥಾನದಿಂದ ಹೋರಟ ಪಾದಯಾತ್ರೆ ಮೆರವಣಿಗೆ ಬಸ್ ನಿಲ್ದಾಣ, ಪೊಲೀಸ್ ಹೊರ ಠಾಣೆ, ಹು¯್ಲೆÃಶ್ವರ ದೇವಾಲಯ, ನಾಗಪ್ಪನ ಕಟ್ಟಿ, ವಿಜಯ ಮಾಂತೇಶ್ವರ ಬ್ಯಾಂಕ್, ಕಾಯಿಪಲ್ಯ ಮಾರುಕಟ್ಟೆ., ಮಾಬುಸಾಬನ ಕಟ್ಟೆಯ ಮಾರ್ಗವಾಗಿ ಬನಶಂಕರಿ ದೇವಿ ದೇವಾಲಯ ತಲುಪಿತು. ನಂತರ ದೇವಾಂಗ ಸಮಾಜದ ವತಿಯಿಂದ ಭಕ್ತರು ಹಾಗೂ ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು, ಆರತಿ ಹಾಗು ಕುಂಬ ಹೊತ್ತ ಮಹಿಳೆಯರು ಮೆರವಣಿಗೆ ಸಾಕ್ಷಿಯಾಯಿತು.

ಬನಶಂಕರಿ ದೇವಿ ಜಾತ್ರೆಗಾಗಿ ವಿವಿಧ ಭಾಗದಿಂದ ಭಕ್ತರು ಪಾದಯಾತ್ರೆ ಮೂಲಕ ಸಂಚರಿಸುತಿದ್ದು. ಇಲ್ಲಿ ಮಕ್ಕಳಿಂದ ವೃದ್ಧರವರೆಗೂ ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಗುಡೂರ ಎಸ್.ಸಿ ಗ್ರಾಮದ ಮಾರ್ಗವಾಗಿ ಸಂಚರಿಸುವ ಪಾದಯಾತ್ರಿಗಳಿಗೆ ಮದ್ಯದಲ್ಲಿ ಗ್ರಾಮದ ಭಕ್ತರಿಂದ ಪಾದಯಾತ್ರಿಗಳಿಗೆ ಉಚಿತ ಪ್ರಸಾದ, ತಂಪು ಪಾನಕ, ವಿಶ್ರಾಂತಿ ಕೊಠಡಿ, ಸಿಹಿ ವಿತರಣೆ ಮಾಡಲಾಯಿತು.

ಬನಶಂಕರಿ ದೇವಿ ಕ್ಷೇಮಾಭಿವೃದ್ಧಿ ಸಂಘ. ದೇವಲ ಮಹರ್ಷಿ ತರುಣ ಸಂಘ, ಬನಶ್ರೀ ಮಹಿಳಾ ಸಂಘ ಸೇರಿದಂತೆ ಇತರರು ಇದ್ದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…