ಚಿಕ್ಕಮಗಳೂರು: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‌ಗೆ ಬಿಜೆಪಿ ಬೆಂಬಲಿತ ಮೂರನೇ ಬಾರಿ ಅಧ್ಯಕ್ಷರಾಗಿ ಸಿ.ಎಸ್.ರಂಗನಾಥ್ ಮತ್ತು ಉಪಾಧ್ಯಕ್ಷರಾಗಿ ವಿ.ಎನ್.ರಮೇಶ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣದಿಂದ ಚುನಾವಣಾಧಿಕಾರಿ ತ್ರಿವೇಣಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಸಿ.ಎಸ್.ರಂಗನಾಥ್, ಬ್ಯಾಂಕ್‌ನಲ್ಲಿ ಈ ಹಿಂದೆ ಅನೇಕ ಹಿರಿಯರು ಅಧ್ಯಕ್ಷರಾಗಿ ತದನಂತರ ಹಲವಾರು ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ರೈತರ ಬೆಳೆ ನಷ್ಟ ಅಥವಾ ಇನ್ನಿತರೆ ಸಮಸ್ಯೆಗಳಿಗೆ ಸಿಲುಕಿಕೊಂಡಾಗ ಬ್ಯಾಂಕ್ ಮೊದಲು ಸಾಲಸೌಲಭ್ಯ ವ್ಯವಸ್ಥೆ ಕಲ್ಪಿಸಿ ಆಧಾರವಾಗಿದೆ ಎಂದರು.
ರೈತರ ಹಾಗೂ ಬಿಜೆಪಿ ಬೆಂಬಲಿತ ನಿರ್ದೇಶಕರ ಸಹಕಾರದಿಂದ ಬ್ಯಾಂಕ್‌ಗೆ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಗೊಂಡಿz್ದೆÃನೆ. ಕಳೆದ ೨೦೧೯-೨೫ನೇ ಸಾಲಿನಲ್ಲಿ ರಾಜ್ಯಶಾಖೆಯಿಂದ ಸುಮಾರು ೧೦.೧೫ ಕೋಟಿ ರೂ.ಗಳನ್ನು ಜಿಲ್ಲಾ ಶಾಖೆಗೆ ಹಸ್ತಾಂತರಿಸುವ ಮೂಲಕ ರೈತಾಪಿ ವರ್ಗಕ್ಕೆ ಸಾಲದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ರಾಜ್ಯದ ೧೭೭ ಬ್ಯಾಂಕ್‌ಗಳ ಪೈಕಿ ಚಿಕ್ಕಮಗಳೂರಿನ ಬ್ಯಾಂಕ್ ಅತ್ಯುತ್ತಮ ವ್ಯವಹಾರ ನಡೆಸುವ ಮುಖಾಂತರ ಮೊದಲ ಸ್ಥಾನ ಪಡೆದುಕೊಂಡಿದೆ. ರೈತರ ಶ್ರೇಯೋಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಒದಗಿಸಿ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ನೂತನ ನಿರ್ದೇಶಕರಾಗಿ ದಾನಿಹಳ್ಳಿ ಮಂಜುನಾಥ್, ಈ.ಆರ್.ಮಹೇಶ್, ಎ.ಎನ್.ರವೀಶ್, ಕೆ.ಪಿ.ಸತೀಶ್ ಗೌಡ, ಎಂ.ಟಿ.ಸುನೀಲ್, ಎಂ.ಈ.ರಾಜು, ಗೌರಮ್ಮ, ಶಶಿ ಚಂದ್ರೇಗೌಡ, ಟಿ.ಆರ್.ದಿನೇಶ್, ಹೇ ಮಾವತಿ, ಎ.ಎಲ್.ದಿನೇಶ್, ಎಲ್.ಆರ್.ಈಶ್ವರಪ್ಪ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕಿ ಎಂ.ಕೆ.ಗೀತಾ, ಸಹಾಯಕ ಚೇತನ್ ಮತ್ತಿತರರಿದ್ದರು.