ಕಡೂರು: ಪಟ್ಟಣದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಎನ್.ಮೋಹನ್‌ನಾಯ್ಕ ಬುಧವಾರ ಅವಿರೋಧ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತ್ರಿವೇಣಿ ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷ ಎನ್.ಮೋಹನ್‌ನಾಯ್ಕ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬ್ಯಾಂಕ್ ಇತಿಹಾಸದಲ್ಲಿ ಅತಿ ಹಿಂದುಳಿದ ವರ್ಗವಾಗಿರುವ ಬಂಜಾರ ಸಮುದಾಯಕ್ಕೆ ಆದ್ಯತೆ ನೀಡಿದ ನಿರ್ದೇಶಕರು ಅವಿರೋಧ ಆಯ್ಕೆ ಮಾಡಲಾಗಿದೆ. ರೈತರ ಹಿತಕಾಯುವುದರ ಜತೆಗೆ ಉಳಿದ ಅವಧಿಯಲ್ಲಿ ಬ್ಯಾಂಕಿನ ಪ್ರಗತಿಗೆ ಒತ್ತು ನೀಡಲಾಗುವುದು ಎಂದರು.
ಬ್ಯಾಂಕ್ ಉಪಾಧ್ಯಕ್ಷ ನಂಜುಂಡಪ್ಪ, ನಿರ್ದೇಶಕರಾದ ಸಾಣೇಹಳ್ಳಿ ವಿರೂಪಾಕ್ಷಪ್ಪ, ಸಿ.ಎನ್.ಕಲ್ಲೇಶಪ್ಪ, ಎಚ್.ಎಂ.ರೇವಣ್ಣಯ್ಯ, ಕೆ.ಎಚ್.ರಂಗನಾಥ್, ಎಂ.ಎನ್.ನಟರಾಜ್, ಓಂಕಾರಮೂರ್ತಿ, ಶ್ರೀನಿವಾಸಮೂರ್ತಿ, ಸಿ.ವಿ.ಯತೀಶ್, ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ, ಬ್ಯಾಂಕ್ ವ್ಯವಸ್ಥಾಪಕ ಹನುಮಂತರಾಯಪ್ಪ, ಲೆಕ್ಕಾಧಿಕಾರಿ ಶಿವಾಜಿ ಲಂಬಾಣಿ ಇತರರಿದ್ದರು.