More

    ಪಿಎಫ್ ವಂಚನೆ ಜಾಲದಲ್ಲಿ ಕಾರ್ವಿುಕರು!

    ಸಿದ್ದಾಪುರ: ಹುಬ್ಬಳ್ಳಿ ನವನಗರದ ಕಾರ್ವಿುಕರ ಭವಿಷ್ಯ ನಿಧಿ (ಇಪಿಎಫ್​ಒ) ನೌಕರನೊಬ್ಬ ಸಹೊದ್ಯೋಗಿಯೊಬ್ಬರ ಯೂಸರ್ ಐಡಿ ಬಳಸಿ ಅರ್ಹರಲ್ಲದ ತಾಲೂಕಿನ 77 ಕಾರ್ವಿುಕರಿಗೆ 16.16 ಲಕ್ಷ ರೂ. ವರ್ಗಾಯಿಸಿದ್ದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕೆಲ ಕಾರ್ವಿುಕರಿಗೆ ಶೇ.20, 25ರಷ್ಟು ಕಮಿಷನ್ ಷರತ್ತು ಹಾಕಿ ಅಕ್ರಮವಾಗಿ ಹಣ ಲಪಟಾಯಿಸಲು ಯತ್ನಿಸಿದ್ದರು ಎಂಬ ಮಾಹಿತಿ ಬಹಿರಂಗಗೊಂಡಿದೆ.

    ತಾಲೂಕಿನ ಕವಂಚೂರಿನಲ್ಲಿದ್ದ ಕರ್ನಾಟಕ ರಾಜ್ಯ ವೀನರ್ಸ್ ಲಿ. ದಾಂಡೇಲಿ ಎಸ್ಟಾಬ್ಲಿಶ್​ವೆುಂಟ್ ಕಂಪನಿಯಲ್ಲಿ 170 ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಕಾರಣಾಂತರಗಳಿಂದ ಕಂಪನಿ ಬಂದ್ ಆಗಿತ್ತು. ಬಳಿಕ ಕಾರ್ವಿುಕರಿಗೆ ಬರಬೇಕಾದ ಬಾಕಿ ವೇತನ, ಪಿಎಫ್ ತಕ್ಷಣ ದೊರೆತಿರಲಿಲ್ಲ. ನಿರಂತರ ಹೋರಾಟದ ಮೂಲಕ ಕಾರ್ವಿುಕರು ಹಂತ ಹಂತವಾಗಿ ಬಾಕಿ ಹಣ ಪಡೆದುಕೊಂಡಿದ್ದರು.

    ಇದೇ ಸಂದರ್ಭವನ್ನು ಬಳಸಿಕೊಂಡ ಇಬ್ಬರು ಕಾರ್ವಿುಕರು, ನಮಗೆ ಮತ್ತಷ್ಟು ಪಿಎಫ್ ಹಣ ಬರಬೇಕಿದೆ ಎಂದು ಉಳಿದ ಆಯ್ದ ಕಾರ್ವಿುಕರಿಗೆ ಜುಲೈ 23, 2015ರಂದು ಪತ್ರ ಬರೆದಿದ್ದರು. ಈ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ನಮ್ಮ ಷರತ್ತಿಗೆ ಒಪ್ಪಿದವರು ಕೂಡಲೇ ತಿಳಿಸಬೇಕು ಎಂದು ಕೋರಿದ್ದರು.

    ಹೀಗೆ ಹುಬ್ಬಳ್ಳಿ ನವನಗರ ಕಾರ್ವಿುಕರ ಭವಿಷ್ಯ ನಿಧಿ ಕಚೇರಿಯ ನೌಕರ (ಎಫ್​ಡಿಸಿ) ಮನೋಜಕುಮಾರ್ ಕೆಲ ಕಾರ್ವಿುಕರೊಟ್ಟಿಗೆ ಒಳ ಒಪ್ಪಂದ ಮಾಡಿಕೊಂಡು ಅರ್ಹರಲ್ಲದ 77 ಕಾರ್ವಿುಕರಿಗೆ ಹಣ ಜಮಾ ಮಾಡಿಸಿಕೊಂಡು ಕಮಿಷನ್ ಹೊಡೆದಿದ್ದಾರೆ. ಕೆಲ ಕಾರ್ವಿುಕರು ಬ್ಯಾಂಕ್​ಗೆ ಸಂದಾಯವಾಗಿದ್ದ ಹಣವನ್ನು ವಾಪಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಈಗಾಗಲೇ ಹುಬ್ಬಳ್ಳಿ ನವನಗರ ಭವಿಷ್ಯ ನಿಧಿ ಕಚೇರಿಯ ನೌಕರ ಮನೋಜಕುಮಾರ್ ತಮ್ಮ ಸಹೋದ್ಯೋಗಿಯೊಬ್ಬರ ಯೂಸರ್ ಐಡಿ ಬಳಸಿ ಅರ್ಹರಲ್ಲದ 77 ನಿವೃತ್ತ ಕಾರ್ವಿುಕರ ಖಾತೆಗಳಿಗೆ 16.16 ಲಕ್ಷ ರೂ. ಸಂದಾಯ ಮಾಡಿರುವ ಕುರಿತು ಹುಬ್ಬಳ್ಳಿ ಎಪಿಎಂಸಿ- ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

    ಷರತ್ತಿನಲ್ಲಿ ಏನಿತ್ತು?: ಎಪ್ಪತ್ತು ಸಾವಿರ ರೂ.ಗಿಂತ ಕಡಿಮೆ ಹಣ ಬರಬೇಕಾದವರು ಶೇ. 20ರಷ್ಟು ಕಮಿಷನ್, 71 ಸಾವಿರ ರೂ. ಮೇಲ್ಪಟ್ಟವರಿಗೆ ಶೇ.25ರಷ್ಟು ಹಾಗೂ 1 ಲಕ್ಷ ರೂ. ಮೇಲ್ಪಟ್ಟು ಬರಬೇಕಿದ್ದವರು ಶೇ. 30ರಷ್ಟು ಕಮಿಷನ್ ನೀಡಬೇಕು ಎಂದು ಮೊದಲೇ ತಿಳಿಸಿದ್ದರು. ಇದಕ್ಕೆ ಒಪ್ಪಿದವರಿಗೆ 1 ತಿಂಗಳೊಳಗೆ ಹಣ ಸಂದಾಯವಾಗುತ್ತದೆ. ಬಳಿಕ ತಕ್ಷಣ ಕಮಿಷನ್ ಹಣ ಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿದು ಬಂದಿದೆ.

    ಮನೋಜಕುಮಾರ್ ಸೆರೆ: ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಎಪಿಎಂಸಿ- ನವನಗರ ಠಾಣೆ ಪೊಲೀಸರು ಮನೋಜಕುಮಾರ್​ರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಭವಿಷ್ಯ ನಿಧಿ ಕಚೇರಿಯ ಹಿರಿಯ ಸಾಮಾಜಿಕ ಭದ್ರತಾ ಸಹಾಯಕರಾಗಿದ್ದ ಪಿ. ಮನೋಜಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಅವರನ್ನು ಕಲಬುರಗಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಕಲಬುರಗಿಯಲ್ಲಿ ಬುಧವಾರ ಬಂಧಿಸಿ ಕರೆತಂದಿದ್ದಾರೆ.

    ಅರ್ಹರಲ್ಲದ ನಿವೃತ್ತ ಕಾರ್ವಿುಕರ ಬ್ಯಾಂಕ್ ಖಾತೆಗೆ ಹಣ ಸಂದಾಯವಾದ ಕುರಿತು ಸೂಕ್ತ ತನಿಖೆ ನಡೆಯಬೇಕು. ಅಧಿಕಾರಿಗಳೊಂದಿಗೆ ಶಾಮೀಲಾದ ಕಾರ್ವಿುಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. | ಮೋಹನ ಮಡಿವಾಳ, ದಾಂಡೇಲಿ ಎಸ್ಟಾಬ್ಲಿಶ್​ವೆುಂಟ್ ಕಾರ್ವಿುಕ ಸಂಘದ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts