ಪಾವಗಡ:– ಪಟ್ಟಣದ ಪಿನಾಕಿನಿ ಬಡಾವಣೆಯ ಬಳಿ ಬಾಲಕನನ್ನು ಕೊಲೆ ಮಾಡಿರುವ ಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ಆಮಿದಾಲ ಗೊಂದಿ ಗ್ರಾಮದ 8ನೇ ತರಗತಿಯ ಚೇತನ್ ಮೃತ. ಸಂಬಂಧಿ ಅಶೋಕ್ ಗುರುವಾರ ಸಂಜೆ ಶಾಲೆಯಿಂದ ಚೇತನ್ನನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ. ಪಟ್ಟಣದ ಪಿನಾಕಿನಿ ಬಡಾವಣೆ ಸಮೀಪ ಮಧ್ಯರಾತ್ರಿ ಕರೆತಂದು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಅಶೋಕ್ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪಟ್ಟಣದ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿನ್ನಾಭರಣ ಕಳವು ಮಾಡಿದ್ದವನ ಬಂಧನ: ಶಿರಾ ತಾಲೂಕಿನ ಮೊಸರುಕುಂಟೆಯಲ್ಲಿ 108 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ತಾವರೆಕೆರೆ ಪೊಲೀಸರು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಅದೇ ಗ್ರಾಮದ ಭೂತರಾಜು ಕರಡಿ (30)ಬಂಧಿತ. ಶ್ರೀರಂಗಪ್ಪ ಮನೆಗೆ ಬೀಗ ಹಾಕಿ ಜಮೀನಿನ ಕೆಲಸಕ್ಕೆ ಹೋಗಿದ್ದಾಗ ಮನೆಯ ಬಾಗಿಲು ತೆಗೆದು ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ. ಈ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿರಾ ಉಪ-ವಿಭಾಗ ಉಪಾಧೀಕ್ಷಕ ಬಿ.ಕೆ.ಶೇಖರ್, ಶಿರಾ ಗ್ರಾಮಾಂತರದ ವೃತ್ತ ನಿರೀಕ್ಷಕ ಬಿ.ಕೆ.ರಾಘವೇಂದ್ರ ಮಾರ್ಗದರ್ಶನದಲ್ಲಿ ತಾವರೆಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಂ.ಎಸ್.ಚಂದ್ರಶೇಖರ್ ಹಾಗೂ ಸಿಬ್ಬಂದಿ ಅಂಜನಪ್ಪ ಹಾಗೂ ಭೀಮೇಶ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಬೆರಳಚ್ಚು ವಿಭಾಗದ ಸಬ್ ಇನ್ಸ್ಪೆಕ್ಟರ್ ಆದ ಸತೀಶ್ ಕುಮಾರ್ ಬಿ, ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯೂಸಫ್ ಅಲೀ, ಸಿಬ್ಬಂದಿ ಯೋಗೇಶ್ ಹಾಗೂ ಕಿರಣ್ ಕುಮಾರ್ ಕಾರ್ಯಚರಣೆ ನಡೆಸಿದ್ದು ಇವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಶ್ಲಾಘಿಸಿದ್ದಾರೆ.