ಪಾಳು ಬಿದ್ದ ಮನೆಯಲ್ಲಿ ನಿಧಿ ಶೋಧ

ಹೊಸಕೋಟೆ: ಜಡಿಗೇನಹಳ್ಳಿ ಹೋಬಳಿ ಹರಳೂರಿನಲ್ಲಿ ಪಾಳು ಬಿದ್ದ ಮನೆಯಲ್ಲಿ ನಿಧಿಗಾಗಿ ಮಂಗಳವಾರ ರಾತ್ರಿ ಗುಂಡಿ ಅಗೆದು ಕೋಳಿ ಬಲಿಕೊಡಲಾಗಿದೆ. ಪೂಜೆಗೆ ಬಳಸಿದ ವಸ್ತು, ಕೋಳಿಯ ರಕ್ತ, ಪುಕ್ಕ ಸ್ಥಳದಲ್ಲಿ ಬಿದ್ದಿವೆ.

ಅಪರಿಚಿತರು ವಾರದಿಂದ ಈ ಮನೆ ಸುತ್ತ ಓಡಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಪ್ರಶ್ನಿಸಿದಾಗ ಮನೆ ಖರೀದಿಗೆ ಬಂದಿದ್ದೇವೆ. ಪರಿಚಯಸ್ಥರು ಬರಬೇಕು ಕಾಯುತ್ತಿದ್ದೇವೆ ಎಂದು ಸಬೂಬು ಹೇಳಿದ್ದಾರೆ.

ಮಂಗಳವಾರ ರಾತ್ರಿ ಅಪರಿಚಿತರು ನಿಧಿಗಾಗಿ ಹಳ್ಳ ತೋಡಿರುವುದು ಅರಿತ ಪಕ್ಕದ ಮನೆಯವರು, ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.

ಹರಳೂರು ಗೋಪಾಲಪ್ಪ ಎಂಬುವರಿಗೆ ಸೇರಿದ್ದ ಹಳೇ ಮನೆಯನ್ನು ಅದೇ ಗ್ರಾಮದ ರಾಮಪ್ಪಗೆ ಮಾರಿದ್ದರು. ರಾಮಪ್ಪ ಪಾಳು ಬಿದ್ದ ಮನೆ ಕೆಡವಿ ಹೊಸ ಮನೆ ಕಟ್ಟಲು ಖರೀದಿಸಿದ್ದರು ಎನ್ನಲಾಗಿದೆ.

 

ಕೆಲ ವರ್ಷಗಳ ಹಿಂದೆ ನಮ್ಮ ಮಾವನವರೇ ಈ ಮನೆ ಮಾರಿದ್ದಾರೆ. ಮಾವನ ಅಜ್ಜಿ, ಮನೆಯಲ್ಲಿ ನಿಧಿ ಇದೆ ಎಂದು ಸುಮಾರು 40 ವರ್ಷಗಳ ಹಿಂದೆ ಹೇಳಿದ್ದರಂತೆ. ನಮ್ಮ ಮನೆಯ ಪಕ್ಕದಲ್ಲಿಯೇ ನಿಧಿ ಶೋಧ ನಡೆದಿದ್ದು, ನಮಗೆ ತಿಳಿಯಲಿಲ್ಲ. ರಾತ್ರಿ ಯಾರಾದರೂ ಹೊಸಬರು ಮನೆಕಡೆ ಬಂದರೆ ನಾಯಿಗಳು ಬೊಗಳುತ್ತವೆ. ಆದರೆ, ನಿನ್ನೆ ರಾತ್ರಿ ಅಂತಹ ಯಾವುದೇ ಘಟನೆ ನಡೆದಿಲ್ಲ.

| ವಿಮಲಾ, ಗೃಹಿಣಿ

 

 

Leave a Reply

Your email address will not be published. Required fields are marked *