ಪಾದಚಾರಿಗಳ ಸಂಚಾರಕ್ಕೆ ಸಂಕಷ್ಟ

blank

ಕೊಳ್ಳೇಗಾಲ: ಪಟ್ಟಣದಲ್ಲಿ ಹಾದು ಹೋಗಿರುವ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿ ಭಾರಿ ವಾಹನಗಳ ನಿಲುಗಡೆಯಾಗುತ್ತಿದ್ದು. ಪಾದಚಾರಿಗಳು ರಸ್ತೆಯ ಮೇಲೆ ಜೀವ ಕೈಯಲ್ಲಿಡಿದು ಸಂಚರಿಸಬೇಕಿದೆ.

ಪಟ್ಟಣದ ಎಂಜಿಎಸ್‌ವಿ ಕಾಲೇಜು ಮುಂಭಾಗದ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಲಾರಿ, ಜೆಸಿಬಿ, ಬಸ್‌ಗಳು ಹಗಲು, ರಾತ್ರಿ ಪಾರ್ಕಿಂಗ್ ಮಾಡಲಾಗುತ್ತಿದೆ. ವಾಹನಗಳು ಇಡೀ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡು ನಿಲ್ಲುವುದರಿಂದ ಜನ ಸಾಮಾನ್ಯರ ಸಂಚಾರಕ್ಕೆ ಅಡಚಣೆಯಾಗಿದೆ. 2018ರಲ್ಲಿ ನಗರಸಭೆ ವ್ಯಾಪ್ತಿಗೆ ಬರುವ ಮುಡಿಗುಂಡದಿಂದ ಅಣಗಳ್ಳಿಯವರೆವಿಗೂ ಚತುಷ್ಪಥ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಿಂದ ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ದಿಂಡಿಗಲ್ ಸಂಪರ್ಕಿಸಬಹುದಾದ ರಸ್ತೆಯೂ ಇದಾಗಿದ್ದು. ಇದು ರಾಷ್ಟ್ರೀಯ ಹೆದ್ದಾರಿಯಾದರೂ ಪಟ್ಟಣದೊಳಗೆ ಹಾದು ಹೋಗುವುದರಿಂದ ನಗರಸಭೆಯ ಸುಪರ್ದಿಗೆ ಬರಲಿದೆ.

ಅಲ್ಲದೆ, ಬೆಂಗಳೂರು ಮಾರ್ಗವಾಗಿ ಮಹದೇಶ್ವರಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಹೊಗೇನಕಲ್ ಫಾಲ್ಸ್ ಸೇರಿದಂತೆ ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸುವ ಪ್ರತಿಯೊಂದು ವಾಹನ ಈ ರಸ್ತೆಯಲ್ಲಿಯೇ ಸಂಚರಿಸಬೇಕಿದೆ. ಹಗಲಿರುಳು ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಇಂತಹ ಮುಖ್ಯರಸ್ತೆಯಲ್ಲಿ ಬಾರಿ ವಾಹನಗಳ ಪಾರ್ಕಿಂಗ್ ಸ್ಥಳವಾಗಿರುವುದರಿಂದ ಜನರಿಗೆ ತೊಂದರೆಯಾಗಿದೆ. ಮುಖ್ಯರಸ್ತೆಯಲ್ಲಿ ವಾಹನಗಳು ವೇಗವಾಗಿ ಹೋಗುವುದರಿಂದ ಜನರಿಗೆ ಪಾದಚಾರಿ ಮಾರ್ಗದ ಸಂಚಾರ ಸುರಕ್ಷಿತವಾಗಿರುತ್ತದೆ. ಆದರೆ, ಪಾದಚಾರಿ ಮಾರ್ಗದಲ್ಲೇ ವಾಹನಗಳು ನಿಲುಗಡೆಯಾದರೆ ಜನರು ಎಲ್ಲಿ ಸಂಚಾರ ಮಾಡುವುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಆತಂಕದಲ್ಲಿಯೇ ವಿದ್ಯಾರ್ಥಿಗಳ ಸಂಚಾರ:
ಪ್ರಮುಖ ವಿಚಾರವೇನೆಂದರೆ ಎಂಜಿಎಸ್‌ವಿ ಕಾಲೇಜು ರಸ್ತೆಯ ಎರಡು ಬದಿಯಲ್ಲೂ ಶಾಲಾ, ಕಾಲೇಜು ಸಂಖ್ಯೆ ಹೆಚ್ಚಿದೆ. ಎಡಭಾಗಕ್ಕೆ ವಾಸವಿ ವಿದ್ಯಾಸಂಸ್ಥೆ, ನ್ಯಾಷನಲ್ ಶಾಲೆ, ಬಲ ಭಾಗಕ್ಕೆ ಎಂಜಿಎಸ್‌ವಿ ಕಾಲೇಜು, ಜಿ.ವಿ.ಗೌಡ ಕಾಲೇಜು, ಮಾನಸ ಶಿಕ್ಷಣ ಸಂಸ್ಥೆ, ವಿಶ್ವಚೇತನ ವಿದ್ಯಾಸಂಸ್ಥೆಯಿದೆ. ಬೆಳಗ್ಗೆ 8ರಿಂದ 10 ಹಾಗೂ ಸಂಜೆ 4 ರಿಂದ 6 ಗಂಟೆಯವರೆವಿಗೂ ವಿದ್ಯಾರ್ಥಿಗಳ ಸಂಚಾರವಿರುತ್ತದೆ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಂದ, ಕಾಲೇಜು ಹಂತದ ಮಕ್ಕಳು ಹೆಚ್ಚಾಗಿ ಈ ರಸ್ತೆಯಲ್ಲಿಯೇ ಸಂಚರಿಸುತ್ತಾರೆ. ಗ್ರಾಮೀಣ ಭಾಗದಿಂದ ಬರುವ ಮಕ್ಕಳು ಬಸ್ ನಿಲ್ದಾಣಕ್ಕೆ ಈ ರಸ್ತೆಯ ಬದಿಯಲ್ಲಿಯೇ ಬರಬೇಕಿದೆ. ಈ ವೇಳೆ ಜನದಟ್ಟಣೆ ಹೆಚ್ಚಾಗಲಿದೆ. ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳಿಂದ ಮಕ್ಕಳು ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಈ ವೇಳೆ ಅವಘಡಗಳು ಸಂಭವಿಸಿದರೆ ಯಾರು ಹೊಣೆ, ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸೂಚನಾ ಫಲಕವಿಲ್ಲ:
ಈ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ವೇಗವಾಗಿರುತ್ತದೆ. ಅದರಲ್ಲೂ ಬೈಕ್‌ಗಳು ವೇಗ ಹೆಚ್ಚಿರುತ್ತವೆ. ಮುಡಿಗುಂಡದಿಂದ ಅಣಗಳ್ಳಿವರೆವಿಗೂ ಹಲವು ಪ್ರಕರಣಗಳು, ಸಾವು ನೋವುಗಳು ಸಂಭವಿಸಿವೆ. ಅಜಾಗರೂಕತೆ ಚಾಲನೆಯಿಂದ ಜೀವ ಹೋಗುತ್ತಿದೆ. ಹಿಂದಿನಿಂದಲೂ ಈ ರಸ್ತೆಯಲ್ಲಿ ಸುರಕ್ಷತೆ ಹಿತದೃಷ್ಟಿಯಿಂದ ರಸ್ತೆ ಸೂಚನಾಫಲಕಗಳ ಅಳವಡಿಕೆ ಮಾಡಿಲ್ಲ.

ಎಂಜಿಎಸ್‌ವಿ ಎದುರಿನ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಯಿಂದ ಪಾದಚಾರಿಗಳಿಗೆ ತೀವ್ರ ಸಮಸ್ಯೆ ಆಗಿದೆ. ಶಾಲೆ, ಕಾಲೇಜಿಗೆ ಹೋಗುವ ಮಕ್ಕಳು ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದಾರೆ. ಈ ನಡುವೆ ವಾಹನಗಳು ಅತಿ ವೇಗವಾಗಿ ಸಂಚಾರ ಮಾಡುವುದರಿಂದ ಅಪಘಾತ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ನಿಲುಗಡೆಗೆ ಅವಕಾಶ ನೀಡಬಾರದು.
ಎಸ್.ಮಹದೇವಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ನಿರ್ದೇಶಕ

Share This Article

ಉಪ್ಪಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಿದ ಪಾಕವಿಧಾನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಉಪ್ಪಿನಕಾಯಿ ಭಾರತದಲ್ಲಿ…

ಟಾಯ್ಲೆಟ್​​ನ ಕೊಳಕು ವಾಸನೆ, ಹಳದಿ ಕಲೆ ತೆಗೆದುಹಾಕುವುದೇಗೆ?; ಇಲ್ಲಿದೆ ಸಿಂಪಲ್​ ವಿಧಾನ | Tips

ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಲಂಕರಿಸಲು ಜನರು ಶ್ರಮಿಸುತ್ತಾರೆ. ಹೊರಗಿನಿಂದ ಅವರ ಮನೆಯು ಸಾಕಷ್ಟು ಐಷಾರಾಮಿಯಾಗಿ ಕಾಣುತ್ತದೆ.…

ಚಳಿಗಾಲದಲ್ಲಿ ಬಿಸಿ ಚಹಾ ಮತ್ತು ಕಾಫಿ ಸೇವಿಸುತ್ತಿದ್ದೀರಾ; ಅಪಾಯ ತಪ್ಪಿದಲ್ಲ.. ಎಚ್ಚರದಿಂದಿರಿ | Health Tips

ಚಳಿಗಾಲ ಬಂದ ಕೂಡಲೆ ಟೀ, ಕಾಫಿ ಸೇವನೆ ಹೆಚ್ಚುತ್ತದೆ. ಈ ಬಿಸಿ ಪಾನೀಯವು ದೇಹಕ್ಕೆ ಶಾಖವನ್ನು…