ಪಾಕ್ ಸೇನೆ ಪರ ಸ್ಟೇಟಸ್ ಇಟ್ಟಿದ್ದವನ ಸೆರೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಫೇಸ್ಬುಕ್ನಲ್ಲಿ ಪಾಕಿಸ್ತಾನ ಪರವಾಗಿ ಸ್ಟೇಟಸ್ ಹಾಕಿಕೊಂಡ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಲಾದಪುರ ಗ್ರಾಮದ ಯುವಕನೊಬ್ಬ ಶನಿವಾರ ಪೊಲೀಸರ ಅತಿಥಿಯಾಗಿದ್ದಾನೆ.

ದೇಶಾದ್ಯಂತ ಪಾಪಿರಾಷ್ಟ್ರ ಪಾಕ್ ವಿರುದ್ಧ ಕೆಂಡದ ಸುರಿಮಳೆ ಸುರಿಯುತ್ತಿರುವ ವೇಳೆ ಸಲಾದಪುರದ ಬುರಾನ್ ರಾಜೇಸಾಬ್ ಬಡಿಗೇರ (25) ಎಂಬಾತ `ಐ ಸಾ್ಟೃಂಡ್ ವಿತ್ ಪಾಕಿಸ್ತಾನ ಆರ್ಮಿ’ ಎಂಬ ಸ್ಟೇಟಸ್ ಇರುವ ಪ್ರೋಫೈಲ್ ಫೋಟೋ ತನ್ನ ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದ.

ಇದು ವೈರಲ್ ಆಗುತ್ತಿದ್ದಂತೆ ಸ್ಟೇಟಸ್ ಅಳಿಸಿ ಇಂಡಿಯನ್ ಆರ್ಮಿ ಎಂದು ಬರೆದುಕೊಂಡಿದ್ದಾನೆ. ತಕ್ಷಣವೇ ಇದನ್ನು ಗಮನಿಸಿದ ಭೀಮರಾಯನ ಗುಡಿ ಪೊಲೀಸರು, ಬುರಾನ್ನನ್ನು ಬಂಧಿಸಿದ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಇಂಥ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಜಿಲ್ಲಾದ್ಯಂತ ಕೇಳಿ ಬರುತ್ತಿದೆ.