ಪಾಕ್ ಬೆಂಬಲಿಸಿದ ಆರು ಮಂದಿ ಅರೆಸ್ಟ್

ಬೆಂಗಳೂರು: ರಾಜ್ಯದ ವಿವಿಧೆಡೆ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಪರವಾಗಿ ಪೋಸ್ಟ್ ಮಾಡಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಮಡಿವಾಳ ಪೊಲೀಸರು ಬೇಕರಿ ಮಾಲೀಕ ಅಬ್ದುಲ್ ಸಲೀಂ ಎಂಬಾತನ ಮೇಲೆ ಎಫ್​ಐಆರ್ ದಾಖಲಿಸಿದ್ದು, ಈಗಾಗಲೇ ಅಬ್ದುಲ್ ಮತ್ತು ಆತನ ಸಹೋದರರನ್ನು ಕೇರಳ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಉಗ್ರರ ನೆಲೆ ಮೇಲೆ ಭಾರತದ ವಾಯು ಸೇನೆ ನಡೆಸಿದ ದಾಳಿ ನಂತರ ಅಬ್ದುಲ್, ತನ್ನ ಫೇಸ್​ಬುಕ್​ನಲ್ಲಿ ‘ಐ ಸ್ಟಾಂಡ್ ವಿತ್ ಪಾಕಿಸ್ತಾನ್’ ಎಂದು ಸ್ಟೇಟಸ್ ಅಪ್​ಲೋಡ್ ಮಾಡಿದ್ದ. ಜತೆಗೆ ಪಾಕಿಸ್ತಾನ ಸೇನೆ ಸಮವಸ್ತ್ರ ಧರಿಸಿದ್ದ ವ್ಯಕ್ತಿಯ ಫೋಟೋವನ್ನು ಪ್ರೊಫೈಲ್​ಗೆ ಹಾಕಿಕೊಂಡಿದ್ದ.

ಬೆಳಗಾವಿಯ ಮಾರುಕಟ್ಟೆ ಠಾಣೆ ಪೊಲೀಸರು ಕಲೈಗಾರಗಲ್ಲಿ ನಿವಾಸಿ ಅಯೂಬ್​ಬಷೀರ್ ಮುಲ್ಲಾ ಮತ್ತು ವೀರಭದ್ರನಗರದ ನಿವಾಸಿ ಮಹ್ಮದ್​ಸಹೇಪ್ ಅಯೂಬ್ ಪಟೇಲ್​ನನ್ನು ಬಂಧಿಸಿದ್ದಾರೆ. ಇವರು ಪಾಕಿಸ್ತಾನಕ್ಕೆ ಜೈ ಎಂದು ಸಾರ್ವಜನಿಕವಾಗಿಯೇ ಹಲವು ಬಾರಿ ಘೋಷಣೆ ಕೂಗಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ‘ಐ ಸ್ಟಾ್ಯಂಡ್ ವಿತ್​ಪಾಕಿಸ್ತಾನ ಆರ್ವಿು’ ಎಂದು ಪೋಸ್ಟ್ ಮಾಡಿದ್ದ ಮುಳಗುಂದ ಪಟ್ಟಣದ ಸಮೀರ್ ಸಯೀದಬಡೆ, ಭಾಷೇಸಾಬ ಕಲ್ಕುಟ್ರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.