ಪಾಕ್ ತಂಡದಲ್ಲಿ ಮೂಡಿದ ಒಡಕು!

ಕರಾಚಿ: ಭಾರತ ತಂಡದ ವಿರುದ್ಧ ಸೋತ ಬೆನ್ನಲ್ಲಿಯೇ ಪಾಕ್ ತಂಡದ ಆಂತರಿಕ ಭಿನ್ನಾಭಿಪ್ರಾಯಗಳು ಬಹಿರಂಗವಾಗಿವೆ. ಪಾಕ್ ಪತ್ರಿಕೆಗಳು ಹಾಗೂ ವಾಹಿನಿಗಳು ಈ ಕುರಿತಾಗಿ ವರದಿ ಪ್ರಸಾರ ಮಾಡಿದ್ದು, ಸರ್ಫ್ರಾಜ್ ಅಹ್ಮದ್ ನಾಯಕತ್ವದ ಬಗ್ಗೆ ತಂಡದ ಹೆಚ್ಚಿನ ಅಟಗಾರರಿಗೆ ಅಸಮಾಧಾನವಿದ್ದು, ಅವರನ್ನು ನಾಯ ಕತ್ವದಿಂದ ಕೆಳಗಿಳಿ ಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿವೆ.

‘ಸರ್ಫ್ರಾಜ್ ತಾವು ಔಟಾದೊಡನೆ ಡ್ರೆಸಿಂಗ್ ರೂಮ್​ಗೆ   ಬಂದು, ಇಮಾದ್ ವಾಸಿಂ ಹಾಗೂ ಇಮಾನ್ ಉಲ್ ಹಕ್​ರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಟಗಾರರು ತಮ್ಮ ವಿರುದ್ಧ ಗುಂಪಿನ ನೇತೃತ್ವ ವಹಿಸಿಕೊಂಡಿದ್ದು, ಪಂದ್ಯದಲ್ಲಿ ತಮಗೆ ಬೆಂಬಲ ನೀಡಿಲ್ಲ ಎಂದು ಆರೋಪಿಸಿದ್ದಾರೆ’ ಎಂದು ಸ್ಥಳೀಯ ಸಮ್ಮಾ ನ್ಯೂಸ್ ಚಾನೆಲ್ ವರದಿ ಮಾಡಿದೆ. ದುನಿಯಾ ಚಾನೆಲ್ ಕೂಡ ಇದೇ ರೀತಿಯ ವರದಿ ಮಾಡಿದ್ದು, ತಂಡದಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪಿಗೆ ಮೊಹಮದ್ ಆಮೀರ್ ನಾಯಕರಾಗಿದ್ದರೆ, ಇನ್ನೊಂದು ಗುಂಪಿಗೆ ಇಮಾದ್ ವಾಸಿಂ ನಾಯಕ ರಾಗಿದ್ದಾರೆ. ಇದು ಸರ್ಫ್ರಾಜ್​ರ ಹಿನ್ನಡೆಗೆ ಕಾರಣವಾಗಿದೆ ಎಂದು ವರದಿ ಮಾಡಿದೆ.

ತಂಡದಲ್ಲಿ ಭಿನ್ನಾಭಿಪ್ರಾಯವಿಲ್ಲ: ತಂಡದ ಹಿರಿಯ ಆಟಗಾರರಾದ ಹಫೀಜ್, ಶೋಯೆಬ್ ಮಲಿಕ್​ಗೆ ನಿಮ್ಮ ನಾಯಕತ್ವದ ಬಗ್ಗೆ ಸಹಮತ ಇಲ್ಲವಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸರ್ಫ್ರಾಜ್, ‘ಡ್ರೆಸಿಂಗ್ ರೂಮ್ಲ್ಲಿ ಇಂಥ ಸಮಸ್ಯೆಗಳಿಲ್ಲ. ಪ್ರತಿಯೊಬ್ಬರು ಇನ್ನೊಬ್ಬರ ಯಶಸ್ಸಿಗೆ ಸಂತಸಪಡುತ್ತಿದ್ದಾರೆ. ಹಫೀಜ್ ಹಾಗೂ ಮಲಿಕ್​ಗೆ ಒಂದಕ್ಕಿಂತ ಹೆಚ್ಚಿನ ಓವರ್ ನೀಡದೇ ಇರಲು ಕಾರಣ, ಅಲ್ಲಿ ಅದರ ಅಗತ್ಯವಿರಲಿಲ್ಲ. ಅದಾಗಲೇ ಭಾರತದ ಬ್ಯಾಟ್ಸ್​ಮನ್​ಗಳು ಕ್ರೀಸ್​ಗೆ ಅಂಟಿ ಕೊಂಡಿದ್ದರು ಹಾಗೂ ಮೊದಲ ಓವರ್​ನಲ್ಲಿಯೇ ಇವರಿಬ್ಬರು ತಲಾ 11 ರನ್ ಬಿಟ್ಟುಕೊಟ್ಟಿದ್ದರು’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *