More

  ಪಹಣಿ ದರ ಹೆಚ್ಚಳ ಕೇಳಿ ಶಾಕ್

  ಕಲಬುರಗಿ: ಬಿಜೆಪಿ ಸರ್ಕಾರದಲ್ಲಿ ರೈತರಿಗೆ ಪಹಣಿ, ಜಮೀನಿನ ನಕಾಶೆ ಮತ್ತು ವಂಶಾವಳಿಯನ್ನು ಉಚಿತವಾಗಿ ರೈತರ ಮನೆ ಮನೆಗೆ ತಲುಪಿಸಿದ್ದೇವೆ. ಆದರೆ ಪ್ರಸ್ತುತ ಸರ್ಕಾರ ಪಹಣಿಯ ದರವನ್ನು ೧೦ ರೂ.ನಿಂದ ೨೫ ರೂ.ಗೆ ಹೆಚ್ಚಿಸಿ, ವಸೂಲಿಗೆ ಇಳಿದಿದೆ. ದರ ಹೆಚ್ಚಳ ಕೇಳಿ ಶಾಕ್ ಆಗಿದೆ. ರಾಜ್ಯ ಸರ್ಕಾರ ಈ ಮಟ್ಟಕ್ಕೆ ಇಳಿದು ಗ್ಯಾರಂಟಿ ಯೋಜನೆ ಕೊಡುತ್ತಿರುವುದು ದುರಂ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.

  ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಅಧಿಕಾರಿಗಳ ಪ್ರಕಾರ ಶೇ.೯೮ ಮುಂಗಾರು ಬಿತ್ತನೆಯಾಗಿದ್ದು, ಮಳೆ ಇಲ್ಲದೆ ಬೆಳೆ ಮೇಲೆ ಎದ್ದಿಲ್ಲ. ಕಾಯಿ ಬರ್ತಾ ಇಲ್ಲ. ಜಿಲ್ಲೆಯಲ್ಲಿ ೨.೩೫ ಲಕ್ಷ ರೈತರಿದ್ದಾರೆ. ಎರಡು ಎಕರೆ ಮೇಲ್ಪಟ್ಟು ೪೦ ಸಾವಿರ ರೈತರಿದ್ದಾರೆ. ಆದರೆ ಸರ್ಕಾರದಿಂದ ನಯಾ ಪೈಸೆ ಹಣ ಬಂದಿಲ್ಲ. ದೊಡ್ಡದಾಗಿ ತೃಪ್ತಿ, ಸಂತೃಪ್ತಿ ಎಂದು ಜಾಹೀರಾತು ನೀಡುವವರಿಗೆ ಇಲ್ಲಿ ೪೦ ಸಾವಿರದ ಟಿಸಿ ೨ ಲಕ್ಷಕ್ಕೆ ಏರಿಸಿದ್ದು ಕಾಣುತ್ತಿಲ್ಲ. ರೈತರನ್ನು ವಸೂಲಿಗೆ ಇಳಿದಿದ್ದು, ಜನರೇ ಎರಡು ಸಾವಿರ ಬೇಡ ಅಂತಿದ್ದಾರೆ ಎಂದು ಕಿಡಿ ಕಾರಿದರು.

  ನಾವು ಕೊಟ್ಟಿದ್ದೀವಿ ನೀವು ಕೊಡಿ: ನಮ್ಮ ಸರ್ಕಾರದ ವೇಳೆ ಅತಿವೃಷ್ಟಿಯಾದಾಗ ನಾನೇ ಕಂದಾಯ ಸಚಿವನಾಗಿದ್ದೆ. ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ೧೨ ಸಾವಿರದ ಪರಿಹಾರ ೨೪ ಸಾವಿರ ರೂ.ಗೆ ಹೆಚ್ಚಿಸಿ ನೀಡಿದ್ದೇವು. ಕೇಂದ್ರ ಸರ್ಕಾರದ ಹಣ ಬರುವ ಮುನ್ನವೇ ನೀಡಿದ್ದೇವು. ಈ ಸರ್ಕಾರವೂ ಮೊದಲು ಪರಿಹಾರ ಹಣ ನೀಡಬೇಕು. ಆಮೇಲೆ ನಿಯಮದಂತೆ ಬರುತ್ತದೆ. ಮಧ್ಯಪ್ರದೇಶ ತೆಲಂಗಾಣಕ್ಕೆ ಹಣ ಒಯ್ತಾ ಇದ್ದೀರಾ? ಹಿಂದಿನ ದಾಖಲೆ ತೆಗೆದು ನೋಡಲಿ. ರೈತರಿಗೆ ಹಣ ಕೊಡಲು ಇವರಿಗೆ ಏನು ದಾಡಿಯಾಗಿದೆ ಎಂದು ಸಿಡಿಮಿಡಿಗೊಂಡರು.

  ಸದನದ ಚರ್ಚೆಗೆ ಸಾಲು ಸಾಲು ಅಸ್ತ್ರ ನೀಡಿದ ಕೈ: ನಮಗೆ ಸದನದಲ್ಲಿ ಚರ್ಚಿಸಲು ಕಾಂಗ್ರೆಸ್‌ನವರೇ ಸಾಲು ಸಾಲು ಅಸ್ತ್ರಗಳನ್ನು ನೀಡಿದ್ದಾರೆ. ಸಿಎಂ ಪುತ್ರನ ದರ್ಬಾರ್, ಜಮೀರ್ ಅಹ್ಮದ್ ಹೇಳಿಕೆ, ನೀರಾವರಿ ಅಪೂರ್ಣ, ಪರಿಹಾರ ಒದಗಿಸದಿರುವುದು, ಆರು ತಿಂಗಳಿಂದ ರೇಷನ್ ಕಾರ್ಡ್ ನೀಡುತ್ತಿಲ್ಲ. ಈ ಎಲ್ಲ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಹೋರಾಟ ಮಾಡುತ್ತೇವೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts