ಪ್ರಯತ್ನಕ್ಕಿಂತ ಪ್ರಾರ್ಥನೆಯ ಫಲ ಹೆಚ್ಚಾಗಿ ದೊರೆಯುತ್ತದೆ. ಅದಕ್ಕಾಗಿಯೇ ನಾನು ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರಯಾಗರಾಜ್‌ನಲ್ಲಿ ಸ್ನಾನ ಮಾಡಿದ್ದಕ್ಕೂ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಕ್ಕೂ ವ್ಯತ್ಯಾಸವೇನೂ ಕಾಣಲಿಲ್ಲ. ತ್ರಿವೇಣಿ ಸಂಗಮದ ನೀರು ಪರಿಶುದ್ಧ ಹಾಗೂ ಪವಿತ್ರವಾಗಿದೆ ಎಂದರು.
ನಾನು ಬರಲಾಗುವುದಿಲ್ಲ, ನೀನು ಹೋಗಿ ಬಾ ಎಂದು ಮುಖ್ಯಮಂತ್ರಿ ಹೇಳಿದ್ದರು. ಅದಕ್ಕಾಗಿ ಕುಂಭಮೇಳಕ್ಕೆ ಬಂದು ಸ್ನಾನ ಮಾಡಿದ್ದೇನೆ. ತಲಕಾಡು ಗಂಗರು ಆಳಿದ ನಾಡಿದು. ಆದ್ದರಿಂದ ಈ ಸ್ಥಳವನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತೇವೆ ಎಂದು ತಿಳಿಸಿದರು.