ಪವರ್ ಮೆಕ್ ತೆಕ್ಕೆಗೆ ವೈಟಿಪಿಎಸ್

ರಾಯಚೂರು: ರಾಜ್ಯಸರ್ಕಾರವು ಸಾವಿರಾರು ಕೋಟಿ ರೂ. ಸಾಲಮಾಡಿ ನಿರ್ಮಿಸಿದ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರವನ್ನು ಇದೀಗ ಖಾಸಗಿ ಕಂಪನಿಗೆ ಅದರ ಉತ್ಪಾದನೆ ಮತ್ತು ನಿರ್ವಹಣೆ ಗುತ್ತಿಗೆ ನೀಡಲು ಮುಂದಾಗಿದ್ದು, ಹೈದರಾಬಾದ್ ಮೂಲದ ಪವರ್ ಮೆಕ್ ಸಂಸ್ಥೆಯು ಜ.30ರಿಂದ ವಹಿಸಿಕೊಳ್ಳಲಿದೆ.

ಪವರ್ ಮೆಕ್ ಸಂಸ್ಥೆ ತಮಗೆ ಅನುಕೂಲಕರವಾದ ಕಾರ್ಮಿಕರನ್ನು ಮಾತ್ರ ನೇಮಕ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈಗಿರುವ ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ. ಸಿವಿಲ್ ಸೇರಿ ಇತರೆ ಕಾಮಗಾರಿಗಳನ್ನು ಗುತ್ತಿಗೆ ನೀಡಲಿ, ಆದರೆ, ಉತ್ಪಾದನೆ ಮತ್ತು ನಿರ್ವಹಣೆ ಗುತ್ತಿಗೆ ನೀಡಬಾರದು ಎನ್ನುವ ಒತ್ತಾಯ ಕೇಳಿ ಬಂದಿದೆ. ಸಂಸ್ಥೆಯು ಈಗಾಗಲೇ ಗುತ್ತಿಗೆ ಕಾರ್ಮಿಕರ ಸಂದರ್ಶನ ಕಾರ್ಯ ಆರಂಭಿಸಿದೆ.

ಆಯ್ಕೆಯಾದ ಕಾರ್ಮಿಕರೊಂದಿಗೆ ಕೇವಲ ಆರು ತಿಂಗಳ ಮಾತ್ರ ಕೆಲಸ ನೀಡುವ ಒಪ್ಪಂದ ಮಾಡಿಸಿಕೊಳ್ಳುತ್ತಿದೆ. ಜತೆಗೆ ಕೆಲಸ ಸಮರ್ಪಕ ಎನ್ನಿಸದಿದ್ದಲ್ಲಿ ತೆಗೆದು ಹಾಕುವುದಾಗಿ ಒಪ್ಪಂದ ಪತ್ರದಲ್ಲಿ ಕರಾರು ಹಾಕಲಾಗುತ್ತಿದೆ. ಈ ಬೆಳವಣಿಗೆಯಿಂದ ಈಗಿರುವ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ.

(ಪೂರ್ಣ ವಿವರವನ್ನು ಜನವರಿ 27ರ ವಿಜಯವಾಣಿ ಸಂಚಿಕೆ ನೋಡಿ)