ಪರಿಹಾರ ದೊರಕಿಸಿ ಕೊಡಲು ಮುಂದಾಗಿ

1 Min Read
ಪರಿಹಾರ ದೊರಕಿಸಿ ಕೊಡಲು ಮುಂದಾಗಿ


ಯಾದಗಿರಿ: ಅತಿವೃಷ್ಟಿಯಿಂದ ಜನ-ಜಾನುವಾರು ಜೀವಹಾನಿ ಸಂಭವಿಸಿದಲ್ಲಿ ಶೀಘ್ರದಲ್ಲೇ ಪರಿಹಾರ ದೊರಕಿಸಿ ಕೊಡಲು ಅಕಾರಿ ವರ್ಗ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸಂಬಂಸಿದ ಅಕಾರಿಗಳ ಖಡಕ್ ಸೂಚನೆ ಕೊಟ್ಟಿದ್ದಾರೆ.

ಶನಿವಾರ ನಗರದ ಸರ್ಕಿಟ್ ಹೌಸ್ ನಲ್ಲಿ ಕರೆದಿದ್ದ ಜಿಲ್ಲಾ ಮಟ್ಟದ ಅಕಾರಿಗಳ ಸಭೆಯಲ್ಲಿ ಸಕರ್ಾರ ಈಗ ಬೆಳೆಹಾನಿ ಬಗ್ಗೆ ಸಂಪೂರ್ಣ ಸೆರ್ವೇ ನಡೆಸುತ್ತಿದೆ. ರೈತರು ಸಹ ತಮ್ಮ ಜಮೀನುಗಳ ಸೆರ್ವೇ ನಂ., ಹಿಸ್ಸಾವಾರು ಬೆಳೆದ ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಇನ್ನಿತರೆ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವತಃ ತಾವೇ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ದಾಖಲಿಸಬಹುದು ಎಂದು ತಿಳಿಸಿದರು.

ಬೆಳೆಹಾನಿ ಸಂಪೂರ್ಣ ಸಮೀಕ್ಷೆ ಮಾಡಿದ ಮಾಹಿತಿ ಪೋರ್ಟಲ್ಗೆ ಎಂಟ್ರಿ ಆಗುತ್ತಿದೆ. ಈ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆ ಅಕಾರಿಗಳು ಗ್ರಾಮೀಣ ಭಾಗದಲ್ಲಿ ರೈತರಿಗೆ ಮಾಹಿತಿ ನೀಡಬೇಕು. ಎನ್.ಡಿ.ಆರ್‍.ಎಫ್‍ಯೋಜನೆಯಡಿ ನಿಯಮಾನುಸಾರ ಮನೆಹಾನಿ ಪ್ರಮಾಣ ಆಧರಿಸಿ ತಕ್ಷಣವೇ ಪರಿಹಾರ ನೀಡಲಾಗುವುದು ಎಂದರು.

ಈಗಾಗಲೇ ಜಿಲ್ಲೆಗೆ ಎನ್.ಡಿ.ಆರ್‍.ಎಫ್‍ ತಂಡ ಬಂದು ಹೋಗಿದೆ, ಜಿಲ್ಲೆಯ ಅಕಾರಿಗಳು ಕೂಡ ಸೆರ್ವೇ ಮಾಡಿ ವರದಿ ಕೊಟ್ಟಿದ್ದಾರೆ. ಜಿಲ್ಲಾದ್ಯಂತ ಶೇ.50ರಷ್ಟು ಅಂದರೆ 37 ಸಾವಿರ ಹೆಕ್ಟೇರ್ ಹಾನಿ ಎಂದು ವರದಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ 938 ಮನೆಗಳು ಹಾನಿಯಾಗಿವೆ. ಇಲ್ಲಿಯವರೆಗೆ ಬಹುತೇಕ ಎಲ್ಲರಿಗೂ ಪರಿಹಾರ ಒದಗಿಸಲಾಗಿದೆ. 1132 ವಿದ್ಯುತ್ ಕಂಬಗಳು ಹಾಗೂ 42 ಟಿಸಿ ಹಾಳಾಗಿದ್ದವು ಎಲ್ಲವನ್ನೂ ಸರಿಪಡಿಸಿದ್ದೇವೆ ಎಂದು ಜೆಸ್ಕಾಂ ಇಲಾಖೆ ಅಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಶಾಸಕ ವೆಂಕಟರಡ್ಡಿ ಮುದ್ನಾಳ್, ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರನಾಥ ನಾದ್, ಜಿಲ್ಲಾಕಾರಿ ಸ್ನೇಹಲ್ ಆರ್., ಜಿಪಂ ಸಿಇಒ ಅಮರೇಶ ಆರ್. ನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂತರ್ಿ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್ ಇದ್ದರು.

See also  ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ
Share This Article