ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ

ಹಿರೇಕೆರೂರ: ಪರಿಸರ ವಿನಾಶದತ್ತ ಸಾಗಿದ್ದು, ಇದರಿಂದಾಗಿ ಕಾಲಕ್ಕೆ ತಕ್ಕಂತೆ ಮಳೆ-ಬೆಳೆಯಾಗುತ್ತಿಲ್ಲ. ಹೀಗಾಗಿ ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಕ್ಷತ್ರೀಯ ಒಕ್ಕೂಟದ ತಾಲೂಕಾಧ್ಯಕ್ಷ ಹರೀಶ ಕಲಾಲ್ ಹೇಳಿದರು.

ತಾಲೂಕು ಕ್ಷತ್ರೀಯ ಒಕ್ಕೂಟದ ವತಿಯಿಂದ ಪಟ್ಟಣದ ದುರ್ಗಾಮಾತಾ ವಿದ್ಯಾಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ಜರುಗಿದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಭೂಮಿಯಲ್ಲಿ ಉಷ್ಣಾಂಶತೆ ಹೆಚ್ಚಾಗುತ್ತಿದ್ದು, ಅನೇಕ ಅವಘಡಗಳು ಸಂಭವಿಸುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಸ್ವಚ್ಛ, ಶುದ್ಧ ಗಾಳಿ, ನೀರು ಸಿಗದೆ, ಜನರು ರೋಗಕ್ಕೆ ಬಲಿಯಾಗಲಿದ್ದಾರೆ. ಕಾರಣ ಪ್ರತಿಯೊಬ್ಬರು ಸಸಿ ನೆಟ್ಟು, ಪೋಷಿಸಬೇಕು’ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸುಭಾಸ ಗೊಲ್ಲರ್ ಮಾತನಾಡಿ, ‘ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಲ್ಲಿ ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸಬೇಕು’ ಎಂದರು.

ತಾಲೂಕು ಕ್ಷತ್ರೀಯ ಒಕ್ಕೂಟದಿಂದ ವಿದ್ಯಾ ಸಂಸ್ಥೆಯ ಮಕ್ಕಳಿಗೆ ವಿವಿಧ ಬಗೆಯ 150 ಸಸಿಗಳನ್ನು ವಿತರಿಸಲಾಯಿತು.

ರಾಜು ಖಾಂಡ್ಕೆ, ರಾಘು ಮದೂರಕರ, ಹನುಮಂತ ಡಾಂಗೆ, ಸರೋಜಾ ಮರಡಿ, ಗಿರೀಶ ಬೆನ್ನೂರು, ಸಚಿನ ರೇವಣಕರ್, ಡಾ. ಮಂಜುನಾಥ ಕಲಾಲ್, ನಾರಾಯಣಸಿಂಗ್ ರಜಪೂತ್, ಹಾಲೇಶರಾವ್

ಹಲಗೇರಿ, ಸಂತೋಷ ಪ್ರಭಾಳಕರ್, ಸಂತೋಷ ಭೋಸ್ಲೆ ಹಾಗೂ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *