ಪರಿವರ್ತನೆಯಿಂದ ಜಗತ್ತು ಬದಲಾವಣೆ

ಸೂಲಿಬೆಲೆ: ಪ್ರತಿಯೊಬ್ಬರೂ ಜೀವನದಲ್ಲಿ ಪರಿವರ್ತನೆ ಹೊಂದುವ ಮೂಲಕ ಜಗತ್ತನ್ನು ಬದಲಾಯಿಸಲು ಸಾಧ್ಯ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ರಾಮಾಯಣ ರಚಿಸಿದ ವಾಲ್ಮೀಕಿ ಜೀವನೋಪಯಕ್ಕಾಗಿ ಬೇಟೆ ಹಾಗೂ ದರೋಡೆ ಮಾಡುತ್ತಿದ್ದಂತಹ ವ್ಯಕ್ತಿ. ನಂತರ ಪರಿವರ್ತನೆಗೊಂಡು ರಾಮಾಯಣ ರಚಿಸಿ ಜಗದ್ವಿಖ್ಯಾತಿಯಾದವರು. ಆದ್ದರಿಂದ ಪ್ರತಿಯೊಬ್ಬರೂ ಜೀವನದಲ್ಲಿ ಪರಿವರ್ತನೆ ಮೈಗೂಡಿಸಿಕೊಂಡರೆ ಜಗತ್ತನ್ನು ಅಭಿವೃದ್ಧಿಯತ್ತ ಮುನ್ನಡೆಸಲು ಸಾಧ್ಯ ಎಂದರು.

ಗ್ರಾಪಂ ಅಧ್ಯಕ್ಷ ಮರುವೆ ಕೃಷ್ಣಪ್ಪ ಮಾತನಾಡಿ, ಲೋಕೋದ್ಧಾರಕ್ಕೆ ಕನಕದಾಸ, ಬಸವಣ್ಣ, ಅಕ್ಕಮಹಾದೇವಿ, ಬುದ್ಧ ಹತ್ತಾರು ಸಂತರು, ಶಿವಶರಣರು ಶ್ರಮಿಸುವ ಮೂಲಕ ಜಗತ್ತಿಗೆ ಕೊಡುಗೆ ನೀಡಿದ್ದಾರೆ. ಅವರ ಜ್ಞಾನ ಮಾರ್ಗ ಅರಿವು ಜೀವನ ನಡೆಸಬೇಕು. ಆಗ ಮಾತ್ರ ಜೀವನ ಸಾರ್ಥಕತೆ ಕಾಣಲು ಸಾಧ್ಯ ಎಂದರು.

ಮುಖಂಡರಾದ ಶಾಂತಪ್ಪ, ರಾಘವೇಂದ್ರ, ಸುಬ್ರಹ್ಮಣ್ಯ ಮತ್ತಿತರರಿದ್ದರು.

ಬೆಳ್ಳಿ ಪಲ್ಲಕ್ಕಿ ಉತ್ಸವ: ಸೂಲಿಬೆಲೆಯಲ್ಲಿ ವಾಲ್ಮೀಕಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಬೆಳ್ಳಿ ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಡಿ.ಕ್ರಾಸ್ ವೃತ್ತದಲ್ಲಿ ಚಾಲನೆ ನೀಡಿದ ಎಂಟಿಬಿ ನಾಗರಾಜ್ ಮೆರವಣಿಗೆಯಲ್ಲಿ ಡೊಳ್ಳು ಕುಣಿತಕ್ಕೆ ಸ್ಟೆಪ್ ಹಾಕಿ ಕುಣಿಯುವ ಮೂಲಕ ಕಾರ‌್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಈ ಹಿಂದೆಯು ಹುಲಿ ಡಾನ್ಸ್, ನಿಂಬೆಹಣ್ಣು ಡಾನ್ಸ್, ನಾಗಿಣಿ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.

Leave a Reply

Your email address will not be published. Required fields are marked *