ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ(ಗ್ರಾ)
ಪರವಾನಗಿ ಇಲ್ಲದೆ ಸಿಂಗಲ್ ಬ್ಯಾರಲ್ ಬಂದೂಕು ಹೊಂದಿದ್ದ ಆರೋಪಿಯನ್ನು ಶಿಗ್ಗಾಂವಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ತಾಲೂಕಿನ ಕೋಣನಕೇರಿ ಗ್ರಾಮದ ಸುರೇಶ ಹಣಮಂತಪ್ಪ ದಾವಣಗೇರಿ ಬಂಧಿತ ಆರೋಪಿ. ಸುರೇಶ ಬೈಕಿನಲ್ಲಿ ಶುಕ್ರವಾರ ಕೋಣನಕೇರಿಯಿಂದ ಶಿವಪೂರ ತಾಂಡಾ ಕಡೆಗೆ ಕೈಚೀಲದಲ್ಲಿ ಬಂದೂಕು ಇಟ್ಟುಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿಗ್ಗಾಂವಿ ಠಾಣೆ ಪಿಎಸ್ಐ ಸಂಪತ್ ಆನೆಕಿವಿ ಅವರು ಆರೋಪಿಯನ್ನು ಬಂಧಿಸಿ, ಸಿಂಗಲ್ ಬ್ಯಾರಲ್ ಬಂದೂಕು, ಬೈಕ್ ಜಪ್ತಿ ಮಾಡಿದ್ದಾರೆ. ಅಲ್ಲದೆ, ಸುರೇಶನಿಗೆ ಬಂದೂಕು ಮಾರಾಟ ಮಾಡಿದ್ದ ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ದೀಪಕ ಮದನರಾಯ ಶೇಟ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಶಿಗ್ಗಾಂವಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಶಿಗ್ಗಾಂವಿ ಠಾಣೆ ಸಿಬ್ಬಂದಿ ಬೀರಪ್ಪ ಕಳ್ಳಿಮನಿ, ಮಂಜು ಲಮಾಣಿ, ಕಾಶಿನಾಥ ಗಾಮನಗಟ್ಟಿ, ಮಾರುತಿ ಹಿತ್ಲರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.