ಪರಂಪರೆ ರಕ್ಷಣೆಗೆ ಮನವಿ

ಗದಗ:  ಶಬರಿಮಲೈ ದೇವಸ್ಥಾನದ ಧರ್ಮ ಪರಂಪರೆ ರಕ್ಷಣೆಗೆ ಕಾನೂನು ರೂಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಹಿಂದು ಆಂದೋಲನ ಸಂಘಟನೆ ಕಾರ್ಯಕರ್ತರು ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾದ ಅಂದಾಜು 3500ಕ್ಕೂ ಹೆಚ್ಚು ಹಿಂದುಗಳ ಮೇಲೆ ಪ್ರಕರಣ ದಾಖಲಾಗಿದೆ. ಕೂಡಲೇ ಕೇರಳ ಸರ್ಕಾರ ಹಿಂದುಗಳ ಮೇಲಿನ ಕೇಸ್​ಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ದಕ್ಷಿಣ ಭಾರತದ ವೀರಾಂಗನೆ ವೀರಮ್ಮಾದೇವಿಯ ಜೀವನಾಧಾರಿತ ಚಲನಚಿತ್ರದಲ್ಲಿ ನಟಿ ಸನ್ನಿ ಲಿಯೋನ್ ನಟಿಸುವ ಮೂಲಕ ಧಾರ್ವಿುಕ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ಕೂಡಲೇ ಈ ಚಿತ್ರದ ಚಿತ್ರೀಕರಣ ತಡೆಯಬೇಕು ಎಂದು ಒತ್ತಾಯಿಸಿದರು. ನಂತರ ಗಾಂಧಿ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ತೆರಳಿದ ರಾಷ್ಟ್ರೀಯ ಹಿಂದು ಆಂದೋಲನ ಕಾರ್ಯಕರ್ತರು ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ರತ್ನಾ ನಂದಿಕೋಲಮಠ, ಲಕ್ಷ್ಮಿ ಪಸಲದಿ, ಜಯಶ್ರೀ ಹೆಬಸೂರ, ನಾಗರತ್ನ ಪಿಂಡಕೂರ, ಮಂಜುನಾಥ ಕಂಕಣವಾಡಿ ಸೇರಿ ಅನೇಕರು ಪ್ರತಿಭಟನೆಯಲ್ಲಿದ್ದರು.