More

    ಪರಂಪರೆ ಮರುಕಳಿಸಲಿ

    ಬಾಗಲಕೋಟೆ: ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃಧಿ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಾಗಿದ್ದು, ಇವುಗಳ ಮುಖೆನ ನಮ್ಮ ಪ್ರಾಚಿನ ಪರಂಪರೆ ಮರುಕಳಿಸಲಿ ಎಂದು ಸಿ.ಎ. ಸೀಮಾ ಮನ್ನೂರ ಹೇಳಿದರು.

    ಅವರು ನಗರದ ಪ್ರತಿಷ್ಟೀತ ಬಿ.ವ್ಹಿ.ವ್ಹಿ.ಸಂಘ ಅಕ್ಕಮಹಾದೇವಿ ಮಹಿಳಾ ಕಲಾ.,ವಿಜ್ಞಾನ,ವಾಣಿಜ್ಯ ಮಹಾವಿದ್ಯಾಯದ ನೂತನ ಸಭಾ ಭನದಲ್ಲಿ ನೆಡೆದ ೨೦೨೩-೨೪ ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಹಾಗೂ ಎನ್.ಎನ್.ಎಸ್, ಸ್ಕೌಟ್ಸ, ಕ್ರೀಡಾ ಚಟುವಟಿಕೆಗಳ ಉಧ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

    ವಿದ್ಯಾರ್ಥೀನಿಯರು ದೈಹಿಕವಾಗಿ ಮಾನಸಿಕವಾಗಿ ಸಡೃದವಾಗಲು ಈ ಕ್ರೀಡೆ ಹಾಗೂ ಸಾಂಸ್ಕತಿಕ ಚಟುವಟಿಕೆಗಳು ಸಹಕಾರಿಯಾಗಲಿದ್ದು ,ವಿದ್ಯಾರ್ಥಿನಿಯರು ಹೆಚಿನ ಸಂಖ್ಯೆಯಲ್ಲಿ ಪಾಲ್ಘೊಳ್ಳಬೇಕು, ವಿದ್ಯಾರ್ಥಿನಿಯರು ಶಿಕ್ಷಣ ಪಡೆದುಕೊಂಡು ಭಾರತದ ಉತ್ತಮ ಪ್ರಜೆಗಳಾಗಿರಿ. ಕೌಶಲ್ಯ ಹೊಂದಿದ ಮಹಿಳೆಯರ ಸ್ವ ಉದ್ಯೋಗಕ್ಕೆ ಸರಕಾರವು ಸಾಲಸೌಲಭ್ಯ ನೀಡುತ್ತಿದ್ದು ಅದರ ಸ್ವದೂಪಯೋಗ ಪಡಿಸಿಕೊಳ್ಳಬೇಕು. ನಮ್ಮ ಪ್ರಾಚಿನ ಪರಂಪರೆ ಸಾಂಸ್ಕೃತಿಕ ಚಟುವಟಿಕೆಗಳಿಂದ ಮರುಕಳಿಸಲಿ ಎಂದರು.

    ವಿದ್ಯಾಗಿರಿಯ ಕಲಾ,ವಿಜ್ಞಾನ,ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಟಿ.ಬಿ.ಕೋರಿಶೇಟ್ಟಿಯವರು ಕ್ರೀಡಾ ಹಾಗೂ ಸಾಂಕೃತಿಕ ಚಟುವಟಿಕೆಗಳಿಗೆ ಜ್ಯೋತಿ ಬೇಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಪಠ್ಯದ ಜೋತಗೆ ಸ್ಕೌಟ್ಸ್,ಎನ್.ಎನ್.ಎಸ್, ಹಾಗೂ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಘೋಳ್ಳಬೇಕು ಇದರಿಂದ ವಿದ್ಯಾರ್ಥಿಗಳ ದೈಹಿಕ ಮಾನಸಿಕ ಗಟ್ಟಿತನಕ್ಕೆ ಇವುಗಳು ಪ್ರೇರಣೆ ನೀಡುತ್ತವೆ ಅಲ್ಲದೆ ಸಾಂಕೃತಿ ಚಟುವಟಿಕಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳುವುದು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ.ಒಡೆಯರ ಸ್ತಿçà ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾದರೆ ಕುಟುಂಬ ಹಾಗೂ ಸಮಾಜಕ್ಕೆ ಕೊಡುಗೆ ನೀಡಲು ಸಾದ್ಯವಿದೆ, ಇಂದಿನ ಆಧುನಿಕ ಜಗತ್ತಿನಲ್ಲಿ ಸ್ತಿçà ತನ್ನ ಕೌಶಲಯ್ಯ ಅಭಿವೃದ್ಧಿಯೊಂದಿಗೆ ಜೀವನವನ್ನು ನಡೆಸುವ ಉದ್ದೇಶದಿಂದ ಮಹಾವಿದ್ಯಾಲಯದಲ್ಲಿ ವಿದ್ಯಾಥಿಗಳ ಕೌಶಲ್ಯ ವಿಕಾಸಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದು, ವಿದ್ಯಾರ್ಥಿ ಬದುಕು ಕಟ್ಟಿಕೊಂಡು ಉತ್ತಮ ಪ್ರಜೆಯನ್ನಾಗಿ ಮಾಡಲು ನಾವು ಗುಣಮಟ್ಟದ ಶಿಕ್ಷಣ ನಿಡುತ್ತಿದ್ದೆವೆ, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವೋತ್ತಮ ಅಭಿವೃದ್ಧಿಗೆ ಬಿ.ವ್ಹಿ.ವ್ಹಿ.ಸಂಘ ಹಾಗೂ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಶ್ರಮಿಸುತ್ತಿದೆ ಎಂದರು.

    ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಸಾಂಸ್ಕೃತಿಕ ವಿಭಾಗ ಸಂಯೋಜಕಿ ಎ.ಎ.ಕುಂದರಿಗಮಠ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥೀಗಳ ಸಾಧನೆಯನ್ನು ಕುರಿತು ಮಾಹಿತಿ ನೀಡಿದರು. ಐಕ್ಯೂಎಸಿ ಸಂಯೋಜಕಿ ಪಿ.ಕೆ.ಚೋಗಲಾ ಸ್ವಾಗತಿಸಿದರು.ವಿದ್ಯಾರ್ಥಿ ಕಾವ್ಯಾ ಮಠ ಪ್ರಾರ್ಥಿಸಿದರು, ಎನ್.ಎಸ್.ಎಸ್.ಅಧಿಕಾರಿ ಅನಿಲ ಬಡಿಗೇರ,ದೈಹಿಕ ನಿರ್ದೇಶಕ ಡಾ.ಎಮ್.ವಿ.ಬಜಪ್ಪನ್ನವರ, ಇದ್ದರು, ಭಾರತ ಸ್ಕೌಟ್ಸ್ ಗೈಡ್ಸನ ರೆಂಜ ಅಧಿಕಾರಿ ವಿ.ಎಮ್.ಸತ್ತಿಗೇರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts