ಪದ್ಮನಾಭನಗರ ಸಂಕ್ರಾಂತಿ ಉತ್ಸವ

ಬೆಂಗಳೂರು: ಅಕ್ಷಯಾ ಸೇವಾ ಫೌಂಡೇಷನ್ ಪದ್ಮನಾಭನಗರದ ಕಾರ್ವೆಲ್ ಶಾಲಾ ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ ’ಸಂಕ್ರಾಂತಿ ಉತ್ಸವ’ ಶನಿವಾರ ಆರಂಭವಾಗಿದ್ದು, ಸೋಮವಾರದವರೆಗೆ (ಜ.14) ನಡೆಯಲಿದೆ.

ಈ ಹಿನ್ನೆಲೆಯಲ್ಲಿ 35ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಖಾದ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮ್ಯಾಜಿಕ್ ಶೋ ಮತ್ತು ಕೋಟಿ ರೂ. ಬೆಲೆ ಬಾಳುವ ಶ್ವಾನಗಳ ಪ್ರದರ್ಶನಕ್ಕೆ ಉತ್ಸವ ಸಾಕ್ಷಿಯಾಗಲಿದೆ. ನಗರದ ಜನತೆ ಒಟ್ಟಾಗಿ ಬೆರೆತು, ಎಳ್ಳು-ಬೆಲ್ಲ ಸವಿದು, ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಹಬ್ಬವನ್ನು ಸಂಭ್ರಮಿಸಬೇಕೆಂಬ ನಿಟ್ಟಿನಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ದೀಪಕ್ ಶೆಣೈ ತಿಳಿಸಿದ್ದಾರೆ.

ಉತ್ಸವದ 2ನೇ ದಿನವಾದ ಭಾನುವಾರ (ಜ.12) ಬೆಳಗ್ಗೆ 10ರಿಂದ ಶ್ವಾನ ಪ್ರದರ್ಶನ ನಡೆಯಲಿದೆ. ಕೋಟ್ಯಂತರ ರೂ. ಬೆಲೆ ಬಾಳುವ ನಾಯಿಮರಿಗಳನ್ನು ಸಾಕಿರುವ ಖ್ಯಾತ ಡಾಗ್ ಬ್ರೀಡರ್ ಸತೀಶ್ ವಿವಿಧ ತಳಿಗಳ ನಾಯಿಗಳನ್ನು ಪ್ರದರ್ಶಿಸಲಿದ್ದಾರೆ. ಗೋಪೂಜೆ ಮತ್ತು ಕಿಚ್ಚು ಹಾಯಿಸುವುದು ಸೇರಿ ಹಲವು ಕಾರ್ಯಕ್ರಮಗಳು ಸೋಮವಾರ (ಜ.13)ನಡೆಯಲಿವೆೆ.

Leave a Reply

Your email address will not be published. Required fields are marked *