ಸಿನಿಮಾ

ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಆಹ್ವಾನ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 18ನೇ ಘಟಿಕೋತ್ಸವವು ಜೂನ್ ತಿಂಗಳಿನಲ್ಲಿ ನಡೆಯಲಿದ್ದು, 2018-19, 2019-20 ಹಾಗೂ 2020-21 ನೇ ಸಾಲಿನ ಸ್ನಾತಕ, ಸ್ನಾತಕೋತ್ತರ ಹಾಗೂ ವಿದ್ಯಾರ್ಥಿಗಳಿಂದ ಪದವಿ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ಡಿಡಿಡಿ.ಟ್ಠ್ಞಞಠ್ಠ್ಟ್ಠಚ್ಚ.ಜ್ಞಿ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಆನ್ಲೈನ್ ಮುಖಾಂತರವೇ ಸಲ್ಲಿಸಬಹುದು. ಬಳಿಕ ಉಪಸ್ಥಿತಿಯಲ್ಲಿ ಅಥವಾ ಅನುಪಸ್ಥಿತಿಯಲ್ಲಿ ಪದವಿ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಪದಕ ಮತ್ತು ನಗದು ಬಹುಮಾನ ಪಡೆದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಸ್ನಾತ್ತಕೋತ್ತರ ಅಭ್ಯರ್ಥಿಗಳು ಹಾಗೂ ಪಿಹೆಚ್‌ಡಿ ಪದವೀಧರರು ವಾರ್ಷಿಕೋತ್ಸವದಲ್ಲಿ ಉಪಸ್ಥಿತರಾಗಲು ಅರ್ಹರಾಗಿರುತ್ತಾರೆ. ಇವರು ಅರ್ಜಿ ಸಲ್ಲಿಸಲು ಜೂ. 9 ಕಡೆಯ ದಿನವಾಗಿದ್ದು, ರೂ.100 ದಂಡ ಶುಲ್ಕದೊಡನೆ ಜೂ. 15 ರವರೆಗೆ ಶುಲ್ಕ ಪಾವತಿಸಬಹುದು ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್