ಸರ್ಜಾಪುರ: ತಿಗಳ ಚೌಡದೇನಹಳ್ಳಿಯಲ್ಲಿ ನಿರ್ಮಾಣ ಹಂತದ ಕಡ್ಡದ ಮೇಲಿಂದ ಪತಿಯೇ ಪತ್ನಿಯನ್ನು ಕೆಳಗೆ ತಳ್ಳಿದ್ದು, ಗಂಭೀರ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.ತಿಗಳ ಚೌಡದೇನಹಳ್ಳಿಯ ಮಂಜುಳಾ (40) ಮೃತೆ. ಆಕೆಯ ಪತಿ ಮಂಜುನಾಥ್(45) ಆರೋಪಿ.ಮಂಜುಳಾ ಮಾನಸಿಕ ಅಸ್ವಸ್ಥೆಯಾಗಿದ್ದರು ಎನ್ನಲಾಗಿದ್ದು, ಈ ಕಾರಣದಿಂದಲೇ ಪತಿ ಮಂಜುನಾಥ್ ಖಿನ್ನತೆಗೆ ಒಳಗಾಗಿದ್ದ. ಶನಿವಾರ ಇಬ್ಬರ ನಡುವೆ ಜಗಳವಾಗಿದ್ದು, ಕೋಪಗೊಂಡಿದ್ದ ಆತ ಪತ್ನಿಯನ್ನು ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಿಂದ ಕೆಳಗೆ ತಳ್ಳಿದ್ದಾನೆ. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಇನ್‌ಸ್ಪೆಕ್ಟರ್ ಪಿ.ಜಿ.ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದೆ.
TAGGED:#Crime