17 C
Bangalore
Friday, December 13, 2019

ಪತಿಯಂದಿರ ಯಶಸ್ಸಿಗೆ ಪರಿಶ್ರಮ!

Latest News

ಸಂಭ್ರಮದ ಅಮೃತೇಶ್ವರ ರಥೋತ್ಸವ

ಅಣ್ಣಿಗೇರಿ: ಪಟ್ಟಣದ ಆರಾಧ್ಯದೈವ ಶ್ರೀ ಅಮೃತೇಶ್ವರ ಮಹಾರಥೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಜಯಘೊಷಗಳ ಮಧ್ಯ ಸಡಗರ, ಸಂಭ್ರಮದಿಂದ ಜರುಗಿತು.

ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೇಡ

ವಿಜಯವಾಣಿ ಸುದ್ದಿಜಾಲ ಧಾರವಾಡ 2020ರ ಜ. 26ರ ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರೆಜಿಲ್ ಪ್ರಧಾನಿ ಬೊಲ್ಸೇನಾರೋ ಬರುತ್ತಿರುವುದನ್ನು ರೈತ ಸಂಘ...

ಡಿಸಿಪಿಯಾಗಿ ಬಿ.ಎಸ್. ನೇಮಗೌಡ ಅಧಿಕಾರ ಸ್ವೀಕಾರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್​ನ ಅಪರಾಧ ಮತ್ತು ಸಂಚಾರ ವಿಭಾಗಕ್ಕೆ ವರ್ಗವಾಗಿ ಬಂದಿರುವ ಉಪ ಪೊಲೀಸ್ ಆಯುಕ್ತ(ಡಿಸಿಪಿ) ಬಿ.ಎಸ್. ನೇಮಗೌಡ ಗುರುವಾರ...

ಸೇವೆ ಸ್ಥಗಿತಗೊಳಿಸಿ ಧರಣಿ

ವಿಜಯವಾಣಿ ಸುದ್ದಿಜಾಲ ಕುಂದಗೋಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ತಾಲೂಕಾಸ್ಪತ್ರೆ ಡಿ ದರ್ಜೆ ಗುತ್ತಿಗೆ ನೌಕರರು ಗುರುವಾರ ಸೇವೆ...

ಜ್ಞಾನ ಸಂಸತ್ ಅಧಿವೇಶನ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್​ನಿಂದ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಡಿ. 14ರಂದು ಸಂಜೆ 4ಕ್ಕೆ...

ಹಾವೇರಿ: ಸ್ಥಳೀಯ ಲೋಕಸಭಾ ಕ್ಷೇತ್ರದಲ್ಲಿರುವ 17,02,618 ಮತದಾರರಲ್ಲಿ 8,33,317ಮಹಿಳಾ ಮತದಾರರಿದ್ದು, ಪ್ರಮುಖ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರರಾಗಿ ಒಬ್ಬ ಮಹಿಳೆಯೂ ಚುನಾವಣೆ ಕಣಕ್ಕಿಳಿದಿಲ್ಲ. ಆದರೆ, ಕಣಕ್ಕಿಳಿದಿರುವ ತಮ್ಮ ಪತಿಯ ಗೆಲುವಿಗಾಗಿ ಮಹಿಳಾ ಮತದಾರರ ಮನವೊಲಿಕೆಗೆ ಪತ್ನಿಯರು ಸಹ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಒಂದೆಡೆ ಬಿಸಿಲಿನ ಕಾವು ಏರುತ್ತಿರುವ ಜೊತೆಗೆ ಲೋಕಸಭೆ ಚುನಾವಣೆಯ ಕಣವೂ ದಿನದಿಂದ ದಿನಕ್ಕೆ ರಂಗೇರಿದೆ. ಕಣದಲ್ಲಿರುವ ಪತಿಯ ಗೆಲುವಿಗೆ ಪತ್ನಿಯರು ಮತ ಪ್ರಚಾರಕ್ಕಾಗಿ ಕ್ಷೇತ್ರದಲ್ಲಿ ದಿನವಿಡೀ ಬೆವರು ಸುರಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಅಂತಿಮವಾಗಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ ಮಹಿಳಾ ಅಭ್ಯರ್ಥಿಗಳಾರು ಇಲ್ಲ. ಹೀಗಾಗಿ, ಕ್ಷೇತ್ರದಲ್ಲಿರುವ ಮಹಿಳಾ ಮತದಾರರ ಮನವೊಲಿಕೆ ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಅವರ ಪತ್ನಿ, ಮಕ್ಕಳು, ಸೊಸೆಯಂದಿರು ಮತಬೇಟೆಗೆ ಬಿರು ಬಿಸಿಲಿನಲ್ಲಿ ಕ್ಯಾಂಪೇನ್ ಆರಂಭಿಸಿದ್ದಾರೆ.
ಹಾವೇರಿಯಲ್ಲಿ ರೇವತಿ ಉದಾಸಿ: ಲೋಕಸಭೆ ಚುನಾವಣೆಯಲ್ಲಿ ಪತಿ ಶಿವಕುಮಾರ ಉದಾಸಿ ಪರ ಪ್ರಚಾರದಲ್ಲಿ ಮೂಲತಃ ಹಾವೇರಿ ನಗರದ ನಿವಾಸಿ, ಬಿಎಸ್​ಸಿ ಪದವೀಧರೆಯಾಗಿರುವ ರೇವತಿ ಶಿವಕುಮಾರ ಉದಾಸಿಯವರು ಪ್ರಚಾರದಲ್ಲಿ ಉಳಿದೆಲ್ಲ ಪಕ್ಷಗಳ ಅಭ್ಯರ್ಥಿಗಳ ಪತ್ನಿಯರಿಗಿಂತ ಮುಂದಿದ್ದಾರೆ. ಶಿವಕುಮಾರ ಉದಾಸಿ ನಾಮಪತ್ರ ಸಲ್ಲಿಸಿದ ನಂತರ ಹಾವೇರಿ, ಹಾನಗಲ್ಲನ ವಿವಿಧ ವಾರ್ಡ್​ಗಳಲ್ಲಿ ಮಹಿಳಾ ಕಾರ್ಯಕರ್ತರು, ಮುಖಂಡರೊಂದಿಗೆ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಪತಿ ಗೆಲುವಿಗಾಗಿ ಮತದಾರರ ಮನವೊಲಿಸುತ್ತಿದ್ದಾರೆ.
ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳು ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು, ರೇವತಿ ಉದಾಸಿಯವರು ಈಗಾಗಲೇ ಹಾವೇರಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮುಂದೆ ಗದಗ, ರಾಣೆಬೆನ್ನೂರ, ಬ್ಯಾಡಗಿ, ರೋಣ, ಹಾನಗಲ್ಲ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಯೋಜನೆ ರೂಪಿಸಿದ್ದಾರೆ. ರೇವತಿ ಅವರೊಂದಿಗೆ ಮಲ್ಲಿಕಾರ್ಜುನ ಹಂದ್ರಾಳ ಸೇರಿ ಅನೇಕ ಮಹಿಳಾ ಕಾರ್ಯಕರ್ತೆಯರು ಪ್ರಚಾರದಲ್ಲಿ ಸಾಥ್ ನೀಡಿದ್ದಾರೆ.
ಗದಗನಲ್ಲಿ ಮತಬೇಟೆಗಿಳಿದ ಹುಲಕೋಟಿ ಗೌಡ್ತಿಯರು: ಹುಲಕೋಟಿ ಗೌಡರು ಎಂದೇ ಹೆಸರಿಸುವ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಪರವಾಗಿ ಪತ್ನಿ ಸುಮಿತ್ರಾ ಪಾಟೀಲ, ಸೊಸೆಯಂದಿರಾದ ಲಕ್ಷ್ಮೀ ಪಾಟೀಲ, ತೃಪ್ತಿ ಪಾಟೀಲ, ಅಮಿತಾ ಪಾಟೀಲ, ರಾಜೇಶ್ವರಿ ಪಾಟೀಲ, ಸಹೋದರಿ ಸುನಂದಾ ಗದಗ ಜಿಲ್ಲೆಯಲ್ಲಿ ಪ್ರಚಾರಕ್ಕಿಳಿದಿದ್ದಾರೆ.
ಮಹಿಳಾ ಮತದಾರರೇ ಟಾರ್ಗೆಟ್: ಪತಿಯ ಪರ ಪ್ರಚಾರದ ಅಖಾಡಕ್ಕಿಳಿದಿರುವ ಪತ್ನಿಯರು, ಮಕ್ಕಳು, ಸೊಸೆಯಂದಿರು ಹೆಚ್ಚಾಗಿ ಮಹಿಳಾ ಮತದಾರರ ಮನಸೆಳೆಯಲು ಟಾರ್ಗೆಟ್ ಹಾಕಿಕೊಂಡಿದ್ದಾರೆ.
ಅಭ್ಯರ್ಥಿಗಳು ನೇರವಾಗಿ ಮಹಿಳಾ ಮತದಾರರನ್ನು ಕಾಣಲು ಆಗದೇ ಇರುವ ಕಾರಣಕ್ಕೆ ಅಭ್ಯರ್ಥಿಗಳ ಪತ್ನಿಯರು, ಮಕ್ಕಳು, ಸಂಬಂಧಿಗಳು ನೇರವಾಗಿ ಮಹಿಳಾ ಮತದಾರರ ಮನೆಬಾಗಿಲು ತಟ್ಟುತ್ತಿದ್ದಾರೆ. ನಮ್ಮೆಜಮಾನ್ರಗೆ, ನಮ್ಮ ಮಾವಾರಿಗೆ, ನಮ್ಮ ಅಣ್ಣಾರಿಗೆ ಮತನೀಡಿ ಅಭಿವೃದಿಟಛಿಗೆ ಅವಕಾಶ ಕೊಡಿ ಎಂದು ವಿನಂತಿಸುತ್ತಿದ್ದಾರೆ. ಮಹಿಳಾ ಮತದಾರರ ಮನೆಮನೆಗೆ ಹೋಗಿ ಮತಯಾಚಿಸುವುದರ ಜೊತೆಗೆ ಸ್ವ-ಸಹಾಯ ಸಂಘ, ಸಿಣಉೕಶಕ್ತಿ ಸಂಘಗಳ ಮಹಿಳೆಯರನ್ನು ನೇರವಾಗಿ ಭೇಟಿ ಮಾಡಿ ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಬರುತ್ತಿದ್ದಾರೆ. ಅಭ್ಯರ್ಥಿಗಳ ಪ್ರಚಾರಕ್ಕೆ ಪುರುಷ ಕಾರ್ಯಕರ್ತರು ಸಾಥ್ ನೀಡಿದಂತೆ, ಅಭ್ಯರ್ಥಿಗಳ ಪತ್ನಿಯರೊಂದಿಗೆ ಹದಿನೈದು ಇಪ್ಪತ್ತು ಜನ ಮಹಿಳೆಯರು ಸಾಥ್ ನೀಡುತ್ತಿದ್ದಾರೆ.
ಭಾರತೀಯ ಪರಂಪರೆಯಂತೆ ಅರಿಷಿಣ, ಕುಂಕುಮದ ಸ್ವಾಗತ: ಅಭ್ಯರ್ಥಿಗಳ ಪತ್ನಿಯರು ಮತ ಯಾಚಿಸಲು ಮನೆಗೆ ಬಂದಾಗ ಕೆಲವರು ಭಾರತೀಯ ಸಂಸ್ಕೃತಿ, ಪರಂಪರೆಯಂತೆ ಅವರಿಗೆ ಕೆಲವರು ಅರಿಷಿಣ, ಕುಂಕುಮ ನೀಡಿ ಹರಸುತ್ತಿದ್ದಾರೆ. ಇದುವರೆಗೆ ಮನೆಯಲ್ಲಿಯೇ ಇರುತ್ತಿದ್ದ ಅನೇಕ ರಾಜಕೀಯ ನಾಯಕರ ಪತ್ನಿಯರು ಪ್ರಥಮ ಬಾರಿಗೆ ಮನೆಯಿಂದ ಪ್ರಚಾರಕ್ಕೆ ಹೊರಬಂದಿರುವುದರಿಂದ ಬಿಸಿಲಿನ ತಾಪಕ್ಕೆ ಕೆಲವೊಮ್ಮೆ ಬೆಚ್ಚಿ ಬೀಳುತ್ತಿದ್ದಾರೆ.
ಹಾವೇರಿ ಲೋಕಸಭೆ ಕ್ಷೇತ್ರದಲ್ಲಿರುವವಿಧಾನಸಭೆ ಕ್ಷೇತ್ರ ಮಹಿಳಾ ಮತದಾರರು: ಶಿರಹಟ್ಟಿ (ಎಸ್​ಸಿ) 1,06,954 ಗದಗ 1,10,208 ರೋಣ 1,13,328 ಹಾನಗಲ್ಲ 93,812 ಹಾವೇರಿ(ಎಸ್​ಸಿ) 1,08,015 ಬ್ಯಾಡಗಿ 98,370 ಹಿರೇಕೆರೂರ 88,554 ರಾಣೆಬೆನ್ನೂರ 1,14,076 ಒಟ್ಟು 8,33,317
“ನನ್ನ ಪತಿ ಶಿವಕುಮಾರ ಉದಾಸಿಯವರನ್ನು ಕಳೆದ 2 ಅವಧಿಯಿಂದ ಆಯ್ಕೆಗೊಳಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. 10 ವರ್ಷಗಳ ಅವಧಿಯಲ್ಲಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಸಂಸತ್​ನಲ್ಲಿ ಅತಿಹೆಚ್ಚು ಹಾಜರಾತಿ, ಪ್ರಶ್ನೆ ಕೇಳಿದ ಹಾಗೂ ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸಿ ಹಾವೇರಿಯ ಕೀರ್ತಿಯನ್ನು ದೆಹಲಿಯಲ್ಲಿ ಬೆಳಗುವಂತಹ ಸಾಧನೆ ಮಾಡಿದ್ದಾರೆ. ಪ್ರಚಾರಕ್ಕೆ ಹೋದಲೆಲ್ಲ ಮಹಿಳೆಯರು ಉತ್ತಮ ಬೆಂಬಲ ನೀಡುತ್ತಿದ್ದಾರೆ. ಹಿಂದಿನ 2 ಚುನಾವಣೆಗಳಿಗಿಂತ ಈ ಸಾರಿ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ.”
ರೇವತಿ ಉದಾಸಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪತ್ನಿ

Stay connected

278,749FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...