ಕುಡಚಿ: ಅಕ್ಷರ ಜ್ಞಾನದಿಂದ ಬುದ್ಧಿಶಕ್ತಿ ಹೆಚ್ಚಿದರೆ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ಸದೃಢವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದಷ್ಟೇ ಮಹತ್ವವನ್ನು ಕ್ರೀಡೆಗೂ ನೀಡಬೇಕು ಎಂದು ಡಾ. ಬಾಬಾಸಾಹೇಬ ಅಂಬೇಡ್ಕರ್ ಶಿಕ್ಷಣ ಸಂಸ್ಥೆ ನಿರ್ದೇಶಕಿ ರಕ್ಷಿತಾ ಘಾಟಗೆ ಹೇಳಿದರು.
ಪಟ್ಟಣದ ಡಾ. ಬಾಬಾಸಾಹೇಬ ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಅಜಿತ ಬಾನೆ ಪ್ರಾಥಮಿಕ ಮತ್ತು ಹೊಸ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 7 ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಬಹಳ ಮಹತ್ವವಾದದ್ದು. ಸಮಯ ವ್ಯರ್ಥ ಮಾಡದೆ ಜೀವನ ರೂಪಿಸಿಕೊಳ್ಳಬೇಕು. ಪಾಲಕರನ್ನು ಹಾಗೂ ಗುರುಗಳನ್ನು ಸ್ಮರಿಸುತ್ತ ಗುರಿ ತಲುಪಬೇಕು ಎಂದರು. ಸಂಸ್ಥೆ ನಿರ್ದೇಶಕ ಸಾಗರ ಘಾಟಗೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಕಾರ್ಯದರ್ಶಿ ಎಸ್.ಆರ್.ಕುಸನಾಳೆ, ಪ್ರಾಚಾರ್ಯ ಎಂ.ಎನ್.ದಾನಣ್ಣವರ, ಮಕ್ಕಳ ಸಾಹಿತಿ ಡಾ. ಎಲ್.ಎಸ್.ಚೌರಿ, ಎ.ಎಸ್.ಟೊಣ್ಣೆ, ಬಾಬಾಲಾಲ ಪಿನ್ನಿತೋಡ, ಆಶಾ ಗಾಡಿವಡ್ಡರ, ಪ್ರಕಾಶ ವಟಗೂಡೆ, ಬಸವರಾಜ ಭಜಂತ್ರಿ ಇತರರಿದ್ದರು.