19.5 C
Bangalore
Wednesday, December 11, 2019

ಪಠ್ಯದಲ್ಲಿ ಕೃಷಿ ವಿಷಯ ಅಳವಡಿಸಲಿ

Latest News

ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಬುಲಾವ್​!

ಬೆಂಗಳೂರು: ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರವನ್ನು ಸುಭದ್ರ ಮಾಡಿಕೊಂಡಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಮಂಡ್ಯದ ಕೆ.ಆರ್​.ಪೇಟೆ...

ಮೂರು ಸಮುದಾಯದಿಂದ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಬ್ಯಾನ್​: ನಿಯಮ ಉಲ್ಲಂಘಿಸಿದರೆ ಬಹಿಷ್ಕಾರ ಬೆದರಿಕೆ

ಭೋಪಾಲ್​: ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಕ್ಕೂ ಮುನ್ನಾ ನಡೆಯುವ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ವಿವಾಹ ಬಂಧಕ್ಕೂ ಮುನ್ನ ಭಾವಿ...

ಮಗಳ ಅತ್ಯಾಚಾರ ನಡೆಸಿದವನಿಗೆ ತಂದೆಯಿಂದ ಕ್ರೂರ ಹಿಂಸೆ ಎಂಬ ವೈರಲ್​ ಪೋಸ್ಟ್​ ನಕಲಿ: ಫ್ಯಾಕ್ಟ್​ಚೆಕ್​ನಲ್ಲಿ ಬಯಲು

ನವದೆಹಲಿ: ತಂದೆಯೊಬ್ಬ ತನ್ನ ಮೂರು ವರ್ಷದ ಮಗಳನ್ನು ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಆತನಿಗೆ ಕ್ರೂರ ಹಿಂಸೆ ನೀಡಿದ್ದಾನೆ ಎನ್ನುವ ಫೋಸ್ಟ್​...

ಹುಲಿ ಸಾವು

ಚಾಮರಾಜನಗರ: ಎರಡು ಹುಲಿಗಳ ನಡುವಿನ ಕಾದಾಟದಲ್ಲಿ 7 ವರ್ಷದ ಗಂಡು ಹುಲಿ ಸಾವಪ್ಪಿರುವ ಘಟನೆ ಬಂಡೀಪುರ ಅಭಯ್ಯಾರಣ ವ್ಯಾಪ್ತಿಯ ಎನ್‌.ಬೇಗೂರು ವಲಯದ ಕಳಸೂರು ಬೀಟ್ ನಲ್ಲಿ...

FACT CHECK| ಪ್ರಖ್ಯಾತ ಉದ್ಯಮಿ ಜಾಕ್​ ಮಾ ಬಾಲ್ಯದ ಫೋಟೋ ಎನ್ನಲಾದ ಈ ವೈರಲ್​ ಫೋಟೋ ಹಿಂದಿನ ವಾಸ್ತವವೇ ಬೇರೆ!

ನವದೆಹಲಿ: ಚೀನಾದ ವಿಶ್ವ ಪ್ರಖ್ಯಾತ ಉದ್ಯಮಿ ಹಾಗೂ ಆಲಿಬಾಬಾ ಗ್ರೂಪ್​ನ ಸಂಸ್ಥಾಪಕರಾಗಿರುವ ಜಾಕ್​ ಮಾ ಅವರದ್ದು ಎನ್ನಲಾದ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ...

ಶಿರಸಿ: ಯುವಜನತೆಯಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಮತ್ತು ಜ್ಞಾನ ಮೂಡಿಸುವ ಸಲುವಾಗಿ ಪಠ್ಯದಲ್ಲಿ ಕೃಷಿ ವಿಷಯ ಅಳವಡಿಸುವ ಅಗತ್ಯವಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ನಡೆದ ಎರಡು ದಿನಗಳ ಕೃಷಿ ಜಯಂತಿಯ ಸಮಾರೋಪದಲ್ಲಿ ಅವರು ಮಾತನಾಡಿದರು. ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬುದು ನಿಜ. ಆದರೆ, ಅವರು ಏಕೆ ವಿಮುಖರಾಗಿದ್ದಾರೆ ಎಂಬ ಬಗ್ಗೆಯೂ ನಾವು ಆಲೋಚಿಸಬೇಕಾಗಿದೆ. ಯುವಜನತೆಯಲ್ಲಿ ಕೃಷಿ ಅಭಿರುಚಿ ಮೂಡಿಸುವ ಕಾರ್ಯ ನಮ್ಮಿಂದಾಗುತ್ತಿಲ್ಲ. ಶಿಕ್ಷಣದ ರೂಪದಲ್ಲಿ ಈ ಮಾಹಿತಿಗಳು ಅವರಿಗೆ ಸಿಗಬೇಕು ಎಂದರು.

ಮಲೆನಾಡಿನಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕೀಟನಾಶಕದ ಅತಿಬಳಕೆಯಾಗುತ್ತಿದೆ. ತನಗೆ ಬೇಡವಾದ ಕೀಟಗಳನ್ನು ನಾಶ ಮಾಡುವ ಗುರಿಯೊಂದಿಗೆ ಕೀಟನಾಶಕ ಸಿಂಪಡಿಸಿದಾಗ ಕೃಷಿ ಪೂರಕ ಕೀಟಗಳೂ ಸಾವಿಗೀಡಾಗುತ್ತಿವೆ. ಭೂಮಿಯಲ್ಲಿ ಈ ವಿಷಕಾರಿ ಅಂಶ ಸೇರಿಕೊಂಡು ಮನುಷ್ಯನಲ್ಲಿ ಕ್ಯಾನ್ಸರ್​ನಂತಹ ಮಾರಕ ರೋಗಕ್ಕೆ ಕಾರಣವಾಗುತ್ತಿದೆ. ಕೀಟನಾಶಕ ಬಳಕೆಯ ದುಷ್ಪರಿಣಾಮಗಳ ಅರಿವು ರೈತರಿಗಿರುವುದಿಲ್ಲ. ಈ ಔಷಧಗಳನ್ನು ಮಾರಾಟ ಮಾಡುವ ಸಂಘ ಸಂಸ್ಥೆಗಳು ರೈತರಿಗೆ ಮಾಹಿತಿ ನೀಡಬೇಕಲ್ಲದೇ ಇದರ ಬಳಕೆಯ ಪ್ರಮಾಣ ತಗ್ಗಿಸಲು ಕಾಳಜಿ ವಹಿಸಬೇಕು ಎಂದು ಹೇಳಿದರು.

ನೃಸಿಂಹ ಜಯಂತಿಯನ್ನು ಕೃಷಿ ಜಯಂತಿಯಾಗಿ ಆಚರಿಸುತ್ತಿದ್ದೇವೆ. ಕೃಷಿಯೂ ನಮ್ಮ ದೇವರು ಎಂಬ ಅರ್ಥದೊಂದಿಗೆ ಈ ಹಬ್ಬ ಆಚರಿಸುತ್ತಿದ್ದೇವೆ. ಕೃಷಿಯಲ್ಲಿ ಸರಳ ಉಪಾಯಗಳನ್ನು ಬಳಸಿದರೆ ಲಕ್ಷ್ಮಿಯ ಅನುಗೃಹ ಸಿಗಲು ಸಾಧ್ಯ ಎಂದು ತಿಳಿಸಿದರು.

ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶಚಂದ್ರ ಮಾತನಾಡಿ, ‘ಅಡಕೆ ಬೆಳೆಗಾರರು ದರ ಕುಸಿತದ ಸಂಕಷ್ಟ ಕಾಲದಲ್ಲಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಬೆಳೆ ಬೆಳೆಯುವ ಮೂಲಕ ಆದಾಯ ಜಾಸ್ತಿಗೊಳಿಸಿಕೊಳ್ಳಬೇಕಾದ ಸ್ಥಿತಿ ಇದೆ. ಕೃಷಿಕನ ಬಾಳು ಹಸನಾಗಿಸಲು ಸ್ವರ್ಣವಲ್ಲೀ ಶ್ರೀಗಳು ನಡೆಸಿರುವ ಕೃಷಿ ಜಯಂತಿ ಯತ್ನ ಮಾದರಿಯಾಗಿದೆ. ಋಷಿ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿ ನಮ್ಮದಾದರೆ ಖುಷಿಯ ಸಂಸ್ಕೃತಿಯೂ ನಮ್ಮದಾಗುತ್ತದೆ. ಸಹಕಾರ ಕ್ಷೇತ್ರ, ಸರ್ಕಾರ ಮಾಡಬೇಕಾದ ಕಾರ್ಯವನ್ನು ಸ್ವರ್ಣವಲ್ಲೀ ಶ್ರೀಗಳು ನಡೆಸಿರುವುದು ಸಂತಸದ ವಿಷಯ ಎಂದರು.

ದೇಶದ ಶಕ್ತಿ ಅಧ್ಯಾತ್ಮದ ಮೇಲೆ ನಿಂತಿದೆ. ಶತಮಾನದ ಹಿಂದೆ ಭಿಕ್ಷುಕರ, ಹಾವಾಡಿಗರ ದೇಶ ಎಂದು ಗುರುತಿಸಿಕೊಂಡಿದ್ದ ಭಾರತ ಇಂದು ಶಕ್ತಿಯುತ ರಾಷ್ಟ್ರವಾಗಿ ಮಾರ್ಪಾಟಾಗಿರುವ ಹಿಂದೆ ಆಧ್ಯಾತ್ಮಿಕ ಶಕ್ತಿ ಇದೆ. ಭಾರತೀಯ ಪುರಾತನ ಮೌಲ್ಯಗಳಿಗೆ ಜಗತ್ತು ಮತ್ತೆ ಅಧ್ಯಾತ್ಮದ ಮೂಲಕ ತೆರೆದುಕೊಳ್ಳುತ್ತಿದೆ ಎಂದರು.

ಪ್ರಗತಿಪರ ಕೃಷಿಕ ಶಂಕರ ಭಟ್ ಬದನಾಜೆ, ಸಿಬಿಐ ನಿವೃತ್ತ ಅಧಿಕಾರಿ ಶಿವಾನಂದ ದೀಕ್ಷಿತ, ಮಠದ ಅಧ್ಯಕ್ಷ ವಿ. ಎನ್. ಹೆಗಡೆ, ಆರ್. ಎನ್. ಹೆಗಡೆ ಉಳ್ಳಿಕೊಪ್ಪ ಇತರರಿದ್ದರು.

ವಿವಿಧ ಸ್ಪರ್ಧೆಗಳ ವಿಜೇತರ ಯಾದಿ: ಕೃಷಿ ಜಯಂತಿ ಅಂಗವಾಗಿ ಸ್ವರ್ಣವಲ್ಲೀಯಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ಯಾದಿ ಇಂತಿದೆ. ಏಕ್ ಮಿನಿಟ್- ವಾಣಿ ಶೇಟ್ ಹುಲೇಕಲ್ (ಪ್ರಥಮ), ಮಂಗಳಾ ಶಾಸ್ತ್ರಿ ಕೋಣೇಸರ (ದ್ವಿತೀಯ), ಗಂಗಾ ಭಟ್ಟ ಸ್ವರ್ಣವಲ್ಲೀ (ತೃತೀಯ).ಆರತಿ ತಾಟಿನ ಸ್ಪರ್ಧೆ- ವರದಾ ಹೆಗಡೆ ಜೋಗಿನಮನೆ (ಪ್ರಥಮ), ತನುಜಾ ಹೆಗಡೆ ಕಾನಗೋಡ (ದ್ವಿತೀಯ), ವಾಣಿ ಶೇಟ್ (ತೃತೀಯ). ಜಿಲ್ಲಾಮಟ್ಟದ ಕೃಷಿ ರಸಪ್ರಶ್ನೆ – ಹೆಗಡೆಕಟ್ಟಾ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ, ಯಲ್ಲಾಪುರದ ವಿಶ್ವದರ್ಶನ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ದ್ವಿತೀಯ, ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿಗಳು ತೃತೀಯ ಪಡೆದಿದ್ದಾರೆ.

ನಿರ್ಣಯಗಳು: * ಬಿದಿರು ಬೆಳೆಯನ್ನು ಉತ್ತೇಜಿಸಲು ಅಂಗಾಂಶ ಕಸಿಯಿಂದ ತಯಾರಾದ ಉತ್ತಮ ಸಸಿಗಳನ್ನು ಸುಲಭ ದರದಲ್ಲಿ ಅರಣ್ಯ ಇಲಾಖೆ ಒದಗಿಸಬೇಕು.* ಮಾರುಕಟ್ಟೆಯಲ್ಲಿ ದೊರೆಯುವ ಸಾವಯವ ಗೊಬ್ಬರಗಳ ಗುಣಮಟ್ಟ ಕಾಪಾಡಲು ಬಿಗಿಯಾದ ಕ್ರಮ ಕೈಗೊಳ್ಳಬೇಕು.* ಬೇಸಿಗೆಯ ಬಿಸಿಲಿನಿಂದ ಬೆಳೆ ಕಾಪಾಡಲು ಮಲೆನಾಡಿನಲ್ಲಿ ಹರಿಯುವ ಸಣ್ಣ ಸಣ್ಣ ಹಳ್ಳಗಳಿಂದ ಏತ ನೀರಾವರಿ ಯೋಜನೆ ಕೈಗೊಳ್ಳಬೇಕು.* ಕೃಷಿಕರಿಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳು ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಸಿಗುವಂತಾಗಬೇಕು. * ಕೃಷಿಕರ ವಾಸ್ತವ್ಯ ಸ್ಥಳವಾದ ಬೆಟ್ಟ, ಹಾಡಿ, ಗಾಂವಠಾಣಾ ಮುಂತಾದ ಜಾಗವನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವುದು ಕಷ್ಟದ ಸಂಗತಿ. ಇದರಿಂದಾಗಿ ಕೃಷಿಕರಿಗೆ ಅಗತ್ಯ ಗೃಹ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಕೃಷಿಕರ ಗೃಹ ನಿರ್ಮಾಣ ಸಂಬಂಧಿಸಿ ಕಾನೂನು ಸಡಿಲಗೊಳಿಸಿ ಸುಲಭವಾಗಿ ಸಾಲ ದೊರಕುವಂತೆ ಮಾಡಬೇಕು. *ನಮ್ಮಲ್ಲಿ ಬ್ರಿಟಿಷ್ ವಸಹಾತು ಅರಣ್ಯ ನೀತಿ ಜಾರಿಯಲ್ಲಿದೆ. ರೈತ ಬೆಳೆದ ಅರಣ್ಯ ಉತ್ಪನ್ನ, ಮರ ಮಟ್ಟುಗಳನ್ನು ಮಾರಲು ಅರಣ್ಯ ಇಲಾಖೆಯ ಶೋಷಣೆ ಎದುರಿಸುವಂತಾಗಿದೆ. ಕಾನೂನು ಬದಲಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರವಾನಗಿ ದೊರಕುವಂತಾಗಬೇಕು. * ಕೃಷಿ ಮತ್ತು ತೋಟಗಾರಿಕೆ ವ್ಯವಸಾಯ ಕ್ರಮವನ್ನು ಪ್ರೌಢಶಾಲೆ ಪಠ್ಯಕ್ರಮದಲ್ಲಿ ಅಳವಡಿಸಿ ಅದರ ಪ್ರಾಯೋಗಿಕ ಶಿಕ್ಷಣ ಕಡ್ಡಾಯಗೊಳಿಸಬೇಕು. *ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿಯೊಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಳೆಕೊಯ್ಲು ಮತ್ತು ಇಂಗುಗುಂಡಿ ನಿರ್ವಿುಸಲು ಸರ್ಕಾರ ಪ್ರೋತ್ಸಾಹ ಧನ ನೀಡಬೇಕು.

ನೃಸಿಂಹ ದೇವರ ರಥ ಕಟ್ಟುವ ಮುಸ್ಲಿಂ ಕುಟುಂಬ: ಸ್ವರ್ಣವಲ್ಲೀಯಲ್ಲಿ ಶುಕ್ರವಾರ ನಡೆದ ನೃಸಿಂಹ ದೇವರ ರಥೋತ್ಸವದಲ್ಲಿ ಸೋಂದಾದ ಮುಸ್ಲಿಂ ಕುಟುಂಬ ಪ್ರತಿ ವರ್ಷದಂತೆ ಈ ವರ್ಷವೂ ಪಾಲ್ಗೊಂಡಿದೆ.

ಬಾಬು ಸಾಬ್ ಮತ್ತು ಅವರ ಕುಟುಂಬದವರಾದ ಹಸನ್​ಸಾಬ್, ಅಬ್ದುಲ್ ಸಲಾಂ ಅಬ್ದುಲ್ ರಜಾಕ್, ಅಬ್ದುಲ್ ಸಲೀಂ ಹಾಗೂ ಇತರರು ಶುಕ್ರವಾರ ಬೆಳಗ್ಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಮಾಧ್ಯಮದೊಂದಿಗೆ ಮಾತನಾಡಿದ ಅಬ್ದುಲ್ ಸಲಾಂ ಅಬ್ದುಲ್ ರಜಾಕ್,‘ಸ್ವರ್ಣವಲ್ಲೀಯಲ್ಲಿ ರಥ ಕಟ್ಟುವ ಕಾರ್ಯವನ್ನು ನಮ್ಮ ಮೂರು ತಲೆಮಾರಿನಿಂದಲೂ ನಡೆಸಿಕೊಂಡು ಬರಲಾಗಿದೆ. ಹಿರಿಯರು ನಡೆಸಿಕೊಂಡು ಬಂದಂತೆ ನಾವೂ ರಥ ಕಟ್ಟುತ್ತಿದ್ದೇವೆ. ನಾಲ್ಕು ದಿನಗಳ ಕಾಲ ರಥ ಕಟ್ಟುವಿಕೆ ಮತ್ತು ರಥೋತ್ಸವದ ಬಳಿಕ ನಾಲ್ಕು ದಿನಗಳ ಕಾಲ ರಥ ಬಿಚ್ಚಿ ಸರಿಯಾಗಿ ಇಡುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ’ ಎಂದರು.

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...