Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಪಟಾಕಿ ಸುಂದರಿ ಪ್ರಿಯಾಂಕಾ

Monday, 22.05.2017, 3:05 AM       No Comments

ಸ್ಯಾಂಡಲ್​ವುಡ್​ನಲ್ಲಿ ಮುಂದಿನ ಶುಕ್ರವಾರ ‘ಪಟಾಕಿ’ ಸಿಡಿಯಲಿದೆ! ಅರ್ಥಾತ್, ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ‘ಗೋಲ್ಡನ್ ಸ್ಟಾರ್’ ಗಣೇಶ್ ನಟಿಸಿರುವ ‘ಪಟಾಕಿ’ ಚಿತ್ರ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ನಟಿ ಪ್ರಿಯಾಂಕಾ ತಿಮ್ಮೇಶ್ ಕೂಡ ಅಭಿನಯಿಸಿದ್ದಾರೆ. 10 ವರ್ಷಗಳ ಹಿಂದೆ ‘ಮುಂಗಾರು ಮಳೆ’ ಸಿನಿಮಾ ನೋಡಿ ಗಣೇಶ್​ಗೆ ಪಕ್ಕಾ ಅಭಿಮಾನಿಯಾಗಿದ್ದ ಅವರು, ಇದೀಗ ನೆಚ್ಚಿನ ನಟನ ಜತೆ ತೆರೆ ಹಂಚಿಕೊಂಡು ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಈ ಎಲ್ಲ ಅನುಭವಗಳನ್ನು ‘ನಮಸ್ತೆ ಬೆಂಗಳೂರು’ ಜತೆ ಹಂಚಿಕೊಂಡಿದ್ದಾರೆ.

 | ಮಂಜು ಕೊಟಗುಣಸಿ, ಬೆಂಗಳೂರು

  • ನೀವು ‘ಪಟಾಕಿ’ ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ?

‘ಗಣಪ’ ಸಿನಿಮಾದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದಾಗ ‘ಪಟಾಕಿ’ ಸಿನಿಮಾ ಡೈರೆಕ್ಟರ್ ಮಂಜು ಸ್ವರಾಜ್ ನನ್ನನ್ನು ಗಮನಿಸಿದ್ದರು. ಜತೆಗೆ ಚಿತ್ರದಲ್ಲಿನ ನನ್ನ ನಟನೆಯನ್ನು ಇಷ್ಟಪಟ್ಟಿದ್ದರು. ಹೀಗಿರುವಾಗ ‘ಪಟಾಕಿ’ಯಲ್ಲಿ ಒಂದು ಪಾತ್ರ ಮಾಡುವಂತೆ ಕೋರಿದ್ದರು. ಚಿತ್ರದಲ್ಲಿ ‘ನಿಮ್ಮದು ಮೂಗಿ ಹಾಗೂ ಕಿವುಡಿಯ ಪಾತ್ರ’ ಎಂದು ಕಥೆ ಕೂಡ ವಿವರಿಸಿದ್ದರು. ತಡ ಮಾಡದೆ ಈ ಪಾತ್ರ ನಾನೇ ಆಗ್ತೀನಿ ಅಂದಿದ್ದೆ. ಇಂತಹ ಚಾನ್ಸ್ ಮಿಸ್ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಈ ರೀತಿಯ ಪಾತ್ರ ಬೇಕೆಂದರೂ ಸಿಗಲ್ಲ ಅಂದುಕೊಂಡು ಪಾತ್ರ ನಿರ್ವಹಿಸಿದ್ದೇನೆ.

  • ಈ ಚಿತ್ರ ನಿಮ್ಮ ಕರಿಯರ್​ಗೆ ಎಷ್ಟು ಮುಖ್ಯ?

ಯಾವುದೇ ನಟ ಅಥವಾ ನಟಿ ಇರಲಿ ಸಿನಿಮಾ ವಿಷಯದಲ್ಲಿ ಒಂದೊಂದು ಚಿತ್ರವೂ ಅವರ ಇಮೇಜ್​ಗೆ ಹೊಸ ದಾರಿ ತೋರಿಸುತ್ತದೆ. ಅವಕಾಶಗಳ ವಿಷಯದಲ್ಲಿರಬಹುದು.. ಬದಲಾವಣೆಯಲ್ಲಿರಬಹುದು. ಅದೇ ರೀತಿ ‘ಪಟಾಕಿ’ ಸಿನಿಮಾ ಕೂಡ ನನ್ನ ಸಿನಿ ಕರಿಯರ್​ಗೆ ಅತ್ಯವಶ್ಯಕ. ಒಂದೊಳ್ಳೆಯ ಟರ್ನಿಂಗ್ ಪಾಯಿಂಟ್ ಅಂತಲೂ ಹೇಳಬಹುದು. ಚಿತ್ರದಲ್ಲಿನ ಪಾತ್ರವೇ ಪ್ರೇಕ್ಷಕರನ್ನು ಸೆಳೆದುಕೊಳ್ಳಲಿದೆ. ಮುಂದಿನ ನನ್ನ ಸಿನಿ ಜರ್ನಿಗೆ ‘ಪಟಾಕಿ’ ಬಿಗ್ ಸ್ಟೆಪ್ ಅನ್ನಲೂಬಹುದು.

  • ಗಣೇಶ್ ಮತ್ತು ಮಂಜು ಸ್ವರಾಜ್​ರೊಂದಿಗೆ ಕೆಲಸ ಮಾಡಿದ ಅನುಭವ?

‘ಮುಂಗಾರು ಮಳೆ’ ಸಿನಿಮಾ ನೋಡಿದ ಮೇಲೆ ಗಣೇಶ್ ನನ್ನ ಫೇವರಿಟ್ ನಟರಲ್ಲಿ ಒಬ್ಬರಾದರು. ಆದರೆ ನಾನು ಗಣೇಶ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ. ಇದೀಗ ಅವರೊಂದಿಗೆ ನಟಿಸಿದ್ದೇನೆ. ತುಂಬ ಖುಷಿಯಾಗುತ್ತದೆ. ಅದೇ ರೀತಿ ಮಂಜು ಸ್ವರಾಜ್ ನಿರ್ದೇಶನದ ‘ಶ್ರಾವಣಿ ಸುಬ್ರಮಣ್ಯ’ ಸಿನಿಮಾದಲ್ಲೂ ನಿರ್ದೇಶಕರ ಕ್ರಿಯೆಟಿವಿಟಿ ಅರಿತಿದ್ದೇನೆ. ನಟನೆ ವಿಷಯದಲ್ಲಿ ಗಣೇಶ್ ಹಾಗೂ ಮಂಜು ಸರ್ ತುಂಬ ಸಲಹೆ ನೀಡಿದ್ದಾರೆ. ಈ ಇಬ್ಬರು ಸ್ಟಾರ್​ಗಳಿಂದ ಸಾಕಷ್ಟು ಕಲಿತಿದ್ದೇನೆ.

  • ಚಿತ್ರದಲ್ಲಿ ನಿಮ್ಮ ಪಾತ್ರವೂ ವಿಚಿತ್ರವಾಗಿದೆಯಲ್ಲ..?

‘ಪಟಾಕಿ’ ತೆಲುಗಿನ ‘ಪಟಾಸ್’ ಸಿನಿಮಾದ ರಿಮೇಕ್ ಆದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಅದರಲ್ಲೂ ನನ್ನ ಪಾತ್ರದಲ್ಲಿ ನಿರ್ದೇಶಕರು ಬಹಳ ಬದಲಾವಣೆ ಮಾಡಿ, ಮುತುವರ್ಜಿ ವಹಿಸಿದ್ದಾರೆ. ಈ ಹಿಂದೆ ‘ಗಣಪ’ ಸಿನಿಮಾದಲ್ಲಿ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ. ಇದೀಗ ‘ಪಟಾಕಿ’ಯಲ್ಲಿ ಗಣೇಶ್ ಅವರಿಗೆ ತಂಗಿಯ ಪಾತ್ರ ನಿರ್ವಹಿಸಿದ್ದೇನೆ. ವಿಶೇಷ ಎಂದರೆ ಇಲ್ಲಿ ನನ್ನದು ಮಾತಿಲ್ಲ ಕಥೆಯಿಲ್ಲ. ಏಕೆಂದರೆ ಚಿತ್ರದಲ್ಲಿ ನನ್ನದೂ ಮೂಗಿ ಹಾಗೂ ಕಿವುಡಿಯ ಪಾತ್ರ.

  • ಸಿನಿಮಾಕ್ಕೆ ಆಗಮಿಸಲು ರಂಗಭೂಮಿ ನಂಟಿದೆಯಾ?

10ನೇ ತರಗತಿಯಲ್ಲಿದ್ದಾಗಲೇ ‘ಪ್ರೀತಿಯಿಂದ’ ಧಾರಾವಾಹಿಯಲ್ಲಿ ಕಾಶ್ಮೀರಿ ಹುಡುಗಿಯ ಪಾತ್ರ ಮಾಡುವಂತೆ ಆಫರ್ ಬಂದಿತ್ತು. ಮನೆಯಲ್ಲೂ ಆಕ್ಟಿಂಗ್ ಮಾಡುವಂತೆ ಹುರಿದುಂಬಿಸಿದ್ದರು. ಅದರಂತೆ ಸರಿಸುಮಾರು 500 ಸಂಚಿಕೆಗಳಲ್ಲಿ ನಟಿಸಿ ಧಾರಾವಾಹಿ ಪೂರ್ಣಗೊಳಿಸಿದ್ದೆ. ಹಾಗಂತ ಈ ಹಿಂದೆ ನಟನೆ ಕುರಿತು ಎಲ್ಲಿಯೂ ತರಬೇತಿ ಪಡೆದಿಲ್ಲ. ರಂಗಭೂಮಿ ಮೆಟ್ಟಿಲು ಸಹ ಏರಿಲ್ಲ. ಧಾರಾವಾಹಿಯೇ ನನ್ನ ಸಿನಿಮಾ ಕರಿಯರ್​ಗೆ ಜೀವ ತುಂಬಿದ್ದು.

  • ಸಿನಿಮಾ ನಿರ್ದೇಶಕರಿಂದ ಆಫರ್​ಗಳು ಬಂದಿವೆಯಾ?

ಹೌದು.. ಸುನಿ ಅವರ ನಿರ್ದೇಶನದಲ್ಲಿ ‘ಜಾನ್​ಸೀನಾ’ ಸಿನಿಮಾದಲ್ಲಿ ನಟಿಸಿದ್ದೇನೆ. ‘ಜಾನ್​ಸೀನಾ’ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಇದನ್ನು ಹೊರತುಪಡಿಸಿದರೆ ತಮಿಳಿನಲ್ಲಿ ಈಗಾಗಲೇ ‘ತೇರಡಿ’ ಹಾಗೂ ‘ಉತ್ತರ ಮಹಾರಾಜ’ ಸಿನಿಮಾಗಳು ಪೂರ್ಣಗೊಂಡಿವೆ. ಬಿಡುಗಡೆ ಹಂತಕ್ಕೂ ಬಂದಿದೆ. ಹೀಗಾಗಿ ‘ಪಟಾಕಿ’ ಸಿನಿಮಾ ಬಿಡುಗಡೆಗೊಂಡ ಬಳಿಕ ಮುಂದಿನ ಸಿನಿಮಾಗಳ ಬಗ್ಗೆ ಗಮನಹರಿ ಸಲಿದ್ದೇನೆ.

Leave a Reply

Your email address will not be published. Required fields are marked *

Back To Top