ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ನಗರ ಟಕ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗುರುವಾರ ಗಾಂಧಿ ಚೌಕದಲ್ಲಿ ದೀಪದಿಂದ ದೀಪ ಬೆಳಗಿಸಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಿ ಎಂಬ ೂಷವಾಕ್ಯದೊಂದಿಗೆ ಹಣತೆ ವಿತರಣೆಯ ಮೂಲಕ ಪಟಾಕಿ ರಹಿತ ದೀಪಾವಳಿ ಆಚರಿಸಲಾಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ ಮಾತನಾಡಿ, ವಾಯುಮಾಲಿನ್ಯ, ಮಣ್ಣು ಮಾಲಿನ್ಯ, ಶಬ್ದ ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನ ಸುಡದೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ವಿಜಯಪುರ ನಗರ ಟಕ ಅಧ್ಯಕ್ಷ ಜೆ.ಎನ್.ಶ್ರೀನಿವಾಸ್ ಮಾತನಾಡಿ, ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಪಟಾಕಿಯಿಂದ ಸುಮಾರು 200 ರಿಂದ 300 ಜನ ಕಣ್ಣು ಕಳೆದುಕೊಳ್ಳುತ್ತಿದ್ದು, ಕಣ್ಣಾಸ್ಪತ್ರೆಗಳಲ್ಲಿ ಸೇರುತ್ತಿದ್ದಾರೆ. ಆದ್ದರಿಂದ ಪಟಾಕಿ ನಿಷೇಧಿಸುವ ಮೂಲಕ ದೀಪಾವಳಿ ಆಚರಿಸಿ ನಮ್ಮ ದೇಹದ ಪವಿತ್ರವಾದ ಅಂಗ ಕಣ್ಣನ್ನು ರಕ್ಷಣೆ ಮಾಡೋಣ ಎಂದರು.
ಗಾಂಧಿ ಚೌಕದಲ್ಲಿ ಎಲ್ಲರಿಗೂ ಮಣ್ಣಿನ ಹಣತೆ ವಿತರಿಸಲಾಯಿತು.
ಪುರಸಭಾ ಸದಸ್ಯ ಎಂ.ರಾಜಣ್ಣ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಚ್.ಚಂದ್ರಶೇಖರ್, ಎಂ ನಾರಾಯಣಸ್ವಾಮಿ, ಅಬ್ಸಲ್ ಪಾಶ, ಮುನಿನಾರಾಯಣಪ್ಪ, ಟಿ.ವಿ.ಎಸ್.ನಾರಾಯಣಸ್ವಾಮಿ, ಶಬ್ಬೀರ್, ಶ್ರೀನಿವಾಸ, ಆರ್.ಪ್ರಕಾಶ್ ಇದ್ದರು.