Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಪಟಾಕಿ ಬಳಿಕ ಕುದುರಿದ ಲಕ್

Monday, 19.06.2017, 3:00 AM       No Comments

ಬೆಂಗಳೂರು: ‘ಗಣಪ’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ನೀಡಿದ್ದ ಪ್ರಿಯಾಂಕಾ, ‘ಪಟಾಕಿ’ ಸಿನಿಮಾ ನಂತರ ಜೋರಾಗಿಯೇ ಸೌಂಡ್ ಮಾಡುತ್ತಿದ್ದಾರೆ. ‘ಪಟಾಕಿ’ಯಲ್ಲಿನ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿದ್ದೇ ತಡ ಪ್ರಿಯಾಂಕಾಗೆ ಕನ್ನಡ ಸೇರಿ ಪರಭಾಷೆಯಿಂದಲೂ ಹಲವು ಸಿನಿಮಾ ಆಫರ್​ಗಳು ಬರಲಾರಂಭಿಸಿವೆಯಂತೆ.

ಪ್ರಿಯಾಂಕಾ ಪಾಲಿಗೆ ‘ಪಟಾಕಿ’ ಸಿನಿಮಾ ಒಂದು ಟರ್ನಿಂಗ್ ಪಾಯಿಂಟ್. ‘ಕನ್ನಡದಲ್ಲಿ ಈಗಾಗಲೇ ಆರಕ್ಕೂ ಅಧಿಕ ಕಥೆಗಳನ್ನು ಕೇಳಿದ್ದೇನೆ. ಅದೇ ರೀತಿ ತಮಿಳಿನಿಂದಲೂ ಹಲವು ಆಫರ್​ಗಳು ಬರುತ್ತಿವೆ. ಹೀಗಾಗಿ ಆತುರದಲ್ಲಿ ಯಾವುದನ್ನೂ ಆಯ್ಕೆ ಮಾಡಿಕೊಂಡಿಲ್ಲ. ಹಾಗಂತ ನಟಿಸುತ್ತಿಲ್ಲ ಎಂದಲ್ಲ. ಸದ್ಯಕ್ಕೆ ಕೈಯಲ್ಲಿರುವ ಮೂರು ಸಿನಿಮಾಗಳನ್ನು

ವರ್ಷಕ್ಕೆ ಹತ್ತು ಸಿನಿಮಾ ಮಾಡಲು ಇಚ್ಛಿಸುವವಳು ನಾನಲ್ಲ. ಕಥೆ ಆಯ್ಕೆಯಲ್ಲಿ ತುಂಬ ಚ್ಯೂಸಿಯಾಗಿದ್ದೇನೆ. ವರ್ಷಕ್ಕೆ ಒಂದು ಸಿನಿಮಾ ಮಾಡಿದರೂ ಎಲ್ಲರ ಮನಸ್ಸಿನಲ್ಲಿ ಆ ಸಿನಿಮಾದ ಪಾತ್ರ ನೆನಪಿನಲ್ಲಿ ಉಳಿಯಬೇಕು.

| ಪ್ರಿಯಾಂಕಾ ನಟಿ

ಪೂರ್ಣಗೊಳಿಸಿದ ಬಳಿಕವೇ ಮುಂದಿನ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಬಗ್ಗೆ ಯೋಚಿಸುತ್ತೇನೆ’ ಎಂಬ ನಿಲುವು ಪ್ರಿಯಾಂಕಾರದ್ದು. ಈಗಾಗಲೇ ಸಿಂಪಲ್ ಸುನಿ ನಿರ್ದೇಶನದ ‘ಜಾನ್​ಸೀನ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಸಿನಿಮಾದ ಹಾಡಿನ ಚಿತ್ರೀಕರಣವೊಂದು ಬಾಕಿ ಉಳಿದಿದೆ. ಗೋವಾದಲ್ಲಿ ಚಿತ್ರೀಕರಿಸಲು ಯೋಜನೆ ರೂಪಿಸಲಾಗಿತ್ತಾದರೂ ಮಳೆಯಿಂದ ಶೂಟಿಂಗ್ ಮುಂದೂಡಲಾಗಿದೆ. ಇನ್ನು, ತಮಿಳಿನಲ್ಲಿ ನಟಿಸಿರುವ ‘ತೇರಡಿ’ ಹಾಗೂ ‘ಉತ್ತರ ಮಹಾರಾಜ’ ಸಿನಿಮಾಗಳ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳುನಡೆಯುತ್ತಿವೆ. ಈ ಎರಡು ಸಿನಿಮಾಗಳಲ್ಲಿ ಯಾವುದಾದರೂ ಒಂದು ಸಿನಿಮಾ ಬಿಡುಗಡೆಯಾದ ಬಳಿಕವಷ್ಟೇ ತಮಿಳು ಆಫರ್​ಗಳನ್ನು ಸ್ವೀಕರಿಸಲಿದ್ದಾರಂತೆ ಪ್ರಿಯಾಂಕಾ.

 

 

Leave a Reply

Your email address will not be published. Required fields are marked *

Back To Top