ಪಗಾರಕ್ಕಾಗಿ ಪೌರ ಕಾರ್ವಿುಕರ ಪ್ರತಿಭಟನೆ

ಗದಗ: ಆರು ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿ ಪೌರ ಕಾರ್ವಿುಕರು ಅರೆಬೆತ್ತಲೆಯಾಗಿ ನಗರಸಭೆ ಪೌರಾಯುಕ್ತರ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಪೌರ ಕಾರ್ವಿುಕರ ಮಹಾಸಂಘ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪೌರಾಯುಕ್ತರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಕಚೇರಿ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಕಾರ್ವಿುಕರ ಸಮಸ್ಯೆ ಕೇಳುತ್ತಿಲ್ಲ. ಇದೇ ವರ್ತನೆ ಮುಂದುವರಿದರೆ ನಗರಸಭೆ ಮುಂಭಾಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ವೇಳೆ, ‘ನಾಲ್ಕಾರು ಮುಖಂಡರು ಕಚೇರಿ ಒಳಗೆ ಬಂದು ಮಾತನಾಡಬಹುದು’ ಎಂದು ಸಿಬ್ಬಂದಿ ತಿಳಿಸಿದರಾದರೂ ಪ್ರತಿಭಟನಾಕಾರರು ಒಪ್ಪಲಿಲ್ಲ. ಪೌರಾಯುಕ್ತರೇ ನಮ್ಮ ಬಳಿ ಬಂದು ಸಮಸ್ಯೆ ಆಲಿಸಬೇಕು ಎಂದು ಪಟ್ಟು ಹಿಡಿದರು.

ನಂತರ ಪೌರಾಯುಕ್ತ ದೀಪಕ್ ಹರದಿ ಆಗಮಿಸಿ, ಪೌರಕಾರ್ವಿುಕರ ವೇತನಕ್ಕೆ ಸಂಬಂಧಿಸಿದ ಕಡತಕ್ಕೆ ಸಿಬ್ಬಂದಿ ಸಹಿ ಮಾಡಿಸಿರಲಿಲ್ಲ. ಹೀಗಾಗಿ ವಿಳಂಬವಾಗಿದೆ. ಇನ್ನೆರಡು ದಿನಗಳಲ್ಲಿ 4 ತಿಂಗಳ ವೇತನ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *