ಪಕ್ಷಕ್ಕೆ ದ್ರೋಹ ಮಾಡಲ್ಲ

ಶಿವಮೊಗ್ಗ: ಸಚಿವ ಎಚ್.ಡಿ.ರೇವಣ್ಣ ಇಲ್ಲಿಗೆ ಬಂದು ರಾಘವೇಂದ್ರ ಅವರನ್ನು ಸೋಲಿಸಲು ಈಶ್ವರಪ್ಪ ಅವರೇ ಪ್ರಯತ್ನ ಮಾಡá-ತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ನಮಗೆ ತಾಯಿ ಸಮಾನ. ತಾಯಿಗೆ ದ್ರೋಹ ಮಾಡಿದರೆ ಪಕ್ಷಕ್ಕೆ ದ್ರೋಹ ಮಾಡಿದಂತೆ. ನಮಗೆ ಭಾರತಾಂಬೆಯೇ ತಾಯಿ ಇದ್ದಂತೆ. ರೇವಣ್ಣ ಅವರಿಗೆ ತಾಯಿನೂ ಗೊತ್ತಿಲ್ಲ, ಭಾರತಾಂಬೆಯೂ ಗೊತ್ತಿಲ್ಲ. ಅವರಿಗೆ ದೇವೇಗೌಡರೇ ಪ್ರಪಂಚ. ಸಚಿವ ರೇವಣ್ಣ ಅಲ್ಲ ಅವರು ರಾವಣ ಎಂದು ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಡಿಕೆಶಿ ದೊಡ್ಡ ಕಳ್ಳ: ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಏಕವಚನದಲ್ಲಿ ಟೀಕಾಪ್ರಹಾರ ನಡೆಸಿದ ಶಾಸಕ ಕೆ.ಎಸ್.ಈಶ್ವರಪ್ಪ, ಐಟಿ ದಾಳಿಯಲ್ಲಿ ಡಿ.ಕೆ.ಶಿವಕುಮಾರ್ ಅವರ 235 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅವರೊಬ್ಬ ದೊಡ್ಡ ಕಳ್ಳ ಎಂದು ಹರಿಹಾಯ್ದರು. ಶಿವಮೊಗ್ಗದಲ್ಲಿ ರೋಡ್ ಶೋ ಬಳಿಕ ಮಾತನಾಡಿದ ಅವರು, ಡಿ.ಕೆ.ಶಿವಕá-ಮಾರ್ ಇಲ್ಲಿ ಬಂದು ಯಡಿಯೂರಪ್ಪ, ಮೋದಿ ಹಾಗೂ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಡಿಕೆಶಿಯ ಇಡೀ ಸಂಸಾರ ಇ.ಡಿ. ಎದುರು ವಿಚಾರಣೆಗೆ ಹಾಜರಾಗá-ತ್ತಿದೆ. ಅವರು ಯಾವಾಗ ಜೈಲಿಗೆ ಹೋಗá-ತ್ತಾರೋ ಗೊತ್ತಿಲ್ಲ. ಇಲ್ಲಿಗೆ ಬಂದವರನ್ನು ಅತಿಥಿ ಎಂದು ಗೌರವಿಸá-ತ್ತೇವೆ. ಇನ್ನೊಮ್ಮೆ ನಮ್ಮ ಬಗ್ಗೆ ಮಾತನಾಡಿದರೆ ಕನಕಪುರಕ್ಕೇ ಹೋಗಿ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡá-ತ್ತೇನೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.