More

  ಪಂಢರಪುರ ಮಾದರಿ ಗಾಣಗಾಪುರ ಅಭಿವೃದ್ಧಿ

  ಕಲಬುರಗಿ: ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲಗಾಣಗಾಪುರದ ದತ್ತಾತ್ರೇಯ ದೇವಾಸ್ಥಾನ ಅಭಿವೃದ್ಧಿಯನ್ನು ಪಂಢರಪುರ, ತುಳಜಾಪುರ ಮಾದರಿಯಲ್ಲಿ ಹಂತಹAತವಾಗಿ ಮಾಡುವುದಾಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
  ಡಿಸಿ ಕಚೇರಿ ಸಭಾಂಗಣದಲ್ಲಿ ಶ್ರೀ ದತ್ತಾತ್ತೇಯ ದೇವಸ್ಥಾನ ಹಾಗೂ ದೇವಸ್ಥಾನದ ವ್ಯಾಪ್ತಿ ಪ್ರದೇಶ ಅಭಿವೃದ್ಧಿಗೆ ಸಿದ್ಧಪಡಿಸಿದ ಮಾಸ್ಟರ್ ಪ್ಲಾÈನ್‌ಗೆ ಮಂಜೂರಾತಿ ನೀಡುವ ಕುರಿತು ಸಂಬAಧಿಸಿದ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿ ಚರ್ಚಿಸಿದ ಅವರು, ದೇವಲಗಾಣಗಾಪುರ ಈ ಭಾಗದ ದೊಡ್ಡ ಕ್ಷೇತ್ರ. ನಿತ್ಯ ಸಾವಿರಾರು ಭಕ್ತರು ದರ್ಶನ ಪಡೆಯಲು ಆಗಮಿಸುತ್ತಾರೆ. ಹೀಗಾಗಿ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.
  ದೇವಸ್ಥಾನಕ್ಕೆ ಬೇಕಾಗುವ ಎಲ್ಲ ರೀತಿಯ ಪ್ರಗತಿಪರ ಕೆಲಸಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಡಿಸಿ, ತಾಪಡೆ ಧರ್ಮಶಾಲೆ ಹತ್ತಿರದ ಪಂಚಾಯಿತಿ ಜಾಗದಲ್ಲಿ ಭಕ್ತರಿಗಾಗಿ ಶೌಚಗೃಹ ನಿರ್ಮಿಸಬೇಕು. ದತ್ತಾತ್ರೇಯ ದೇವಸ್ಥಾನದಲ್ಲಿ ದರ್ಶನ ಕಿಂಡಿ ಕಿರಿದಾಗಿದ್ದು, ಭಕ್ತರಿಗೆ ದೇವರು ಕಾಣುವಂತೆ ದೊಡ್ಡದಾಗಿ ಮಾರ್ಪಡಿಸಲು ಅರ್ಚಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
  ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ಪ್ರಸಾದ ಯೋಜನೆ ಅಡಿ ಪ್ರಸ್ತಾವನೆಯನ್ನು ಆದ್ಯತೆ ಮೇರೆಗೆ ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಬೇಕು. ಎಲ್ಲ ಅಧಿಕಾರಿಗಳು ತಮಗೆ ವಹಿಸಿ ಕೆಲಸ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಸೂಚಿಸಿದರು.
  ದೇವಸ್ಥಾನ ವ್ಯಾಪ್ತಿಯ ಸಂಗಮ, ಕಲ್ಲೇಶ್ವರ ಹಾಗೂ ಚಿದಾನಂದ ದೇವಸ್ಥಾನಗಳ ಭದ್ರತಾ ಹಿತದೃಷ್ಟಿಯಿಂದ ಪ್ರತ್ಯೇಕ ಪೊಲೀಸ್ ಸಿಬ್ಬಂದಿಯನ್ನು ಪಂಢರಪುರ, ತುಳಜಾಪುರ ಮಾದರಿಯಲ್ಲಿ ನಿಯೋಜಿಸಬೇಕು ಎಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಸಲಹೆ ನೀಡಿದರು.
  ಪ್ರತಿ ಹುಣ್ಣಿಮೆಗೆ ನಾನಾ ರಾಜ್ಯಗಳಿಂದ ಬರುವ ಭಕ್ತರು ಭಕ್ತಿ ಸೇವೆಯನ್ನು ಹಣದ ಮೂಲಕ ಸಂದಾಯ ಮಾಡುತ್ತಿರುವುದರಿಂದ ಧಾರ್ಮಿಕ ದತ್ತಿ ಇಲಾಖೆಗೆ ಸರಿಯಾಗಿ ಪಾವತಿ ಆಗುತ್ತಿಲ್ಲ. ಈ ಬಗ್ಗೆ ಗಮನಹರಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹೆಚ್ಚಿನ Äಲ್ಲಿ ಪೊಲೀಸರನ್ನು ನಿಯೋಜಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
  ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಆಫ್ರೀನ್ ಇತರರಿದ್ದರು.

  See also  ಭಾರತದ ಈ ಪುರುಷರಿಂದ ಗರ್ಭಧರಿಸಲು ಮಹಿಳೆಯರು ವಿದೇಶದಿಂದಲೂ ಬರ್ತಾರೆ! ನಂಬದಿದ್ರೂ ಇದೇ ಸತ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts