More

  ಪಂಜಾಬ್‌ನಲ್ಲಿ ಟನ್ ಕಬ್ಬಿಗೆ ಉತ್ತಮ ದರ

  ಮದ್ದೂರು: ರಾಜ್ಯದ ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ 1 ಟನ್ ಕಬ್ಬಿಗೆ 3,800 ರೂ. ನೀಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ರಾವ್ ತಿಳಿಸಿದರು.


  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬೆಳೆಯುವ ಕಬ್ಬು ಅಧಿಕ ಇಳುವರಿ ಬರುತ್ತದೆ. ಆದರೆ 1 ಟನ್ ಕಬ್ಬಿಗೆ 2,700 ರೂ. ಮಾತ್ರ ನೀಡಲಾಗುತ್ತದೆ. ಅದರ ಪ್ರಮಾಣವನ್ನು ಹೆಚ್ಚು ಮಾಡಬೇಕಾಗಿದೆ ಎಂದು ತಿಳಿಸಿದರು.


  ಪಂಜಾಬ್ ಸರ್ಕಾರ ನೀಡುತ್ತಿರುವ ಕಬ್ಬಿನ ಬೆಲೆಗೆ ಕರ್ನಾಟಕದಲ್ಲಿ ನೀಡುತ್ತಿರುವ ಕಬ್ಬಿನ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದರೆ ರಾಜ್ಯದಲ್ಲಿ ಬೆಳೆಯುತ್ತಿರುವ ಕಬ್ಬು ಅಧಿಕ ಇಳುವರಿ ದೊರೆಯುತ್ತದೆ. ಆದರೆ ಸರ್ಕಾರ ಕಬ್ಬಿನ ಬೆಲೆಯನ್ನು ಹೆಚ್ಚು ಮಾಡಬೇಕು ಎಂದು ಆಗ್ರಹಿಸಿದರು.
  ಎಲ್ಲ ಪಕ್ಷದವರೂ ಸಕ್ಕರೆ ಕಾರ್ಖಾನೆಗಳನ್ನು ಇಟ್ಟುಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದವರು ರೈತರನ್ನು ಮಾತ್ರ ಇಟ್ಟುಕೊಂಡಿದ್ದಾರೆ. ನಾವು ಯಾವುದೇ ಕಾರ್ಖಾನೆಗಳನ್ನು ಇಟ್ಟುಕೊಂಡಿಲ್ಲ. ಸದಾ ರೈತರ ಪರವಾಗಿ ನಮ್ಮ ಪಕ್ಷ ಇರುತ್ತದೆ ಎಂದು ತಿಳಿಸಿದರು.


  ಮದ್ದೂರು ವಿಧಾನಸಭಾ ಕ್ಷೇತ್ರದ ಸಂಯೋಜಕರಾದ ಸೌರ ಶಿವರಾಮ, ಹುಲಿಗೆರೆಪುರ ಚಂದ್ರಶೇಖರಯ್ಯ, ದರ್ಶನ್ ರಾಂಪುರ ಸೇರಿದಂತೆ ಇತರರು ಇದ್ದರು.

  See also  ಮದ್ದೂರಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts