ಯಾದಗಿರಿ: ಮಹಿಳಾ ಸಬಲೀಕರಣ ಮತ್ತು ಯುವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಶೇ.೯೬ ಗುರಿ ಸಾಧಿಸಿದ್ದು, ಬರುವ ದಿನಗಳಲ್ಲಿ ಶೇ.೧೦೦ ಗುರಿ ಮುಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಮೆಹರೋಜ್ ಖಾನ್ ತಿಳಿಸಿದರು.
ಇಲ್ಲಿನ ಜಿಪಂ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ ನೇತೃತ್ವದ ರಾಜ್ಯ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ವಾರ್ಷಿಕ ೫೩ ಸಾವಿರ ಕೋಟಿ ರೂ.ಗಳಲ್ಲಿ ಪಂಚ ಗ್ಯಾರಂಟಿ ರಾಜ್ಯದ ಸುಮಾರು ೪.೨೦ ಕೋಟಿ ಜನರಿಗೆ ನೀಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದರು.
ಸಾಮಾಜಿಕ ಚಿಂತನೆಯೊAದಿಗೆ ಈ ಯೋಜನೆ ಸರ್ಕಾರ ರೂಪಿಸಿದ್ದು, ಸಂಬAಧ ಪಟ್ಟ ಅಧಿಕಾರಿಗಳು ಪಂಚ ಗ್ಯಾರಂಟಿ ಯೋಜನೆಯಡಿ ಶೇ.೧೦೦ ಪ್ರಗತಿ ಸಾಧಿಸಲು ವಿಶೇಷ ಗಮನ ಹರಿಸುವಂತೆ ಸೂಚಿಸಿದರು.
ಯಾದಗಿರಿ ಜಿ¯್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷಿö್ಮÃ ಯೋಜನೆಯಡಿ ಶೇ. ೯೭ ಪ್ರಗತಿ ಸಾಧಿಸಿರುವುದಕ್ಕೆ ಅಧಿಕಾರಿಗಳಿಗೆ ಅಭಿನಂದಿಸಿದ ಅವರು ಯುವನಿಧಿ ಯೋಜನೆಯಡಿ ಕೆಲ ತೊಡಕುಗಳನ್ನು ನಿವಾರಿಸಿಕೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿ¯್ಲÉಯ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಭೆಗಳನ್ನು ನಡೆಸುವುದರ ಜತೆಗೆ ಸಂಬAಧಿಸಿದ ಪಂಚ ಗ್ಯಾರಂಟಿ ಯೋಜನೆಗಳಡಿ ಸೌಲಭ್ಯದ ಬಗ್ಗೆ ಸಂವಾದ ನಡೆಸಿ ಸೂಕ್ತ ಅರಿವು ಮೂಡಿಸುವಂತೆ ಅವರು ತಿಳಿಸಿದರು.
ಜಿ¯್ಲÁಧಿಕಾರಿ ಡಾ.ಸುಶೀಲಾ, ಜಿ¯್ಲÁ ಪಂಚಾಯಿತಿ ಸಿಇಒ ಲವೀಶ ಓರ್ಡಿಯಾ, ಗ್ಯಾರಂಟಿ ಯೋಜನೆಗಳ ಜಿ¯್ಲÁ ಅನುಷ್ಠಾನ ಸಮಿತಿ ಅಧ್ಯP್ಷÀ ಶ್ರೇಣಿಕ ಕುಮಾರ ದೋಖಾ, ಉಪಾಧ್ಯಕ್ಷ ಬಸವರಾಜ ಬಿಳ್ಹಾರ ಹಾಗೂ ರಮೇಶ ದೊರೆ, ಹಳ್ಳೆಪ್ಪ ಹವಾಲ್ದಾರ್, ಸಂಜೀವಕುಮಾರ ಕಾವಲಿ, ವಿಜಯಕುಮಾರ ಇತರರಿದ್ದರು.