ಪಂಕಜ್ ಆಡ್ವಾಣಿ ಶುಭಾರಂಭ

ಬೆಂಗಳೂರು: ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸಿದ್ಧಾರ್ಥ್ ಪಾರಿಖ್ ಹಾಗೂ ಹಾಲಿ ಚಾಂಪಿಯನ್ ಹಾಗೂ 15 ಬಾರಿಯ ಚಾಂಪಿಯನ್ ಪಂಕಜ್ ಆಡ್ವಾಣಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ಆರಂಭಗೊಂಡ ಲಾಂಗ್ ಫಾರ್ವ್ಯಾಟ್ ವಿಭಾಗದ ಸ್ಪರ್ಧೆಯಲ್ಲಿ ಕಠಿಣ ಹೋರಾಟ ತೋರಿದ ಸಿದ್ಧಾರ್ಥ್ ಮಾಜಿ ಚಾಂಪಿಯನ್ ಪೀಟರ್ ಗಿಲ್ಕ್ರಿಸ್ಟ್

ರನ್ನು 500-483ರಿಂದ ಸೋಲಿಸಿ ಮುನ್ನಡೆದರು. ಪೀಟರ್ ಆರಂಭದಲ್ಲಿ ಮೇಲುಗೈ ಸಾಧಿಸಿದರೂ ಕೊನೇ ಕ್ಷಣದಲ್ಲಿ ದಿಟ್ಟ ನಿರ್ವಹಣೆ ತೋರಿದ ಸಿದ್ಧಾರ್ಥ್ 17 ಪಾಯಿಂಟ್ ಮುನ್ನಡೆಯೊಂದಿಗೆ ಗೆಲುವಿನ ನಗೆ ಬೀರಿದರು.

ಪಂಕಜ್ ದೇಶಬಾಂಧವ ಎಸ್ ಶಂಕರ್ ರಾವ್ರನ್ನು 390 ಪಾಯಿಂಟ್ಗಳಿಂದ ಮಣಿಸಿ ಮುನ್ನಡೆದರು. ದೋಹಾದಲ್ಲಿ ಇತ್ತೀಚೆಗೆ ನಡೆದ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ 31 ವರ್ಷದ ಪಂಕಜ್, ಮೊದಲ ವಿರಾಮದ ವೇಳೆ 208 ಅಂಕ ಸಂಪಾದಿಸಿ ಆರಂಭದಿಂದಲೇ ಏಕಪಕ್ಷೀಯ ಮೇಲುಗೈ ಕಂಡರು.

ದಿನದ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ನ ರಾಬರ್ಟ್ ಹಾಲ್ 500-287 ರಿಂದ ಬಿ ಭಾಸ್ಕರ್ರನ್ನು ಸೋಲಿಸಿದರು. ಗಮನಾರ್ಹ ನಿರ್ವಹಣೆ ತೋರಿದ ರಾಷ್ಟ್ರೀಯ ಚಾಂಪಿಯನ್ ಸೌರವ್ ಕೊಠಾರಿ 502-364ರಿಂದ ಮ್ಯಾನ್ಮರ್ನ ಆಂಗ್ ಟೇಯ್ರನ್ನು ಸುಲಭವಾಗಿ ಮಣಿಸಿ ಮುನ್ನಡೆದರು.

Leave a Reply

Your email address will not be published. Required fields are marked *