ನ. 1ರಿಂದ ‘ಚಿಗರಿ’ ಸಂಚಾರಕ್ಕೆ ಸೂಚನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್​ಟಿಎಸ್ ರಸ್ತೆ ನಿರ್ಮಾಣ ಪೂರ್ಣಗೊಳಿಸಲು ಸೆ. 15ರ ಗಡುವು ನೀಡಿರುವ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ನ. 1ರಿಂದ ಬಸ್ ಸಂಚಾರ ಪ್ರಾರಂಭಿಸುವಂತೆ ನಿರ್ದೇಶನ ನೀಡಿದ್ದಾರೆ.

ಬಿಆರ್​ಟಿಎಸ್ ಡಿಪೋಕ್ಕೆ ಬುಧವಾರ ಭೇಟಿ ನೀಡಿದ ಸಚಿವ ಖಾದರ್, ಶಾಸಕ ಪ್ರಸಾದ ಅಬ್ಬಯ್ಯ ಅವರು ಬಿಆರ್​ಟಿಎಸ್ ಹಾಗೂ ಕೆಆರ್​ಡಿಸಿಎಲ್ ಅಧಿಕಾರಿಗಳೊಂದಿಗೆ ‘ಚಿಗರಿ’ ಬಸ್ ಏರಿ ಹೊಸೂರು ವೃತ್ತದ ಬಳಿಯ ಟರ್ವಿುನಲ್​ಗೆ ತೆರಳಿದರು. ಅಲ್ಲಿಯ ಕಂಟ್ರೋಲ್ ರೂಮ್ೆ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಬಿಆರ್​ಟಿಎಸ್ ಬಸ್​ನಲ್ಲಿ ರಾಯಾಪುರವರೆಗೆ ಪ್ರಯಾಣಿಸಿ, ಬಸ್ ಶೆಲ್ಟರ್ ಪರೀಕ್ಷಿಸಿದರು.

ಇದಕ್ಕೂ ಮೊದಲು ತೋಳನಕೆರೆಗೆ ಭೇಟಿ ನೀಡಿದ ಸಚಿವರು, ಸ್ಮಾರ್ಟ್​ಸಿಟಿ ಯೋಜನೆಯಡಿ 39 ಎಕರೆಯ ತೋಳನಕೆರೆಯ ಅಭಿವೃದ್ಧಿಗೆ 16 ಕೋಟಿ ರೂ. ವೆಚ್ಚದಲ್ಲಿ ರೂಪಿಸಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಆ. 30ರೊಳಗೆ ಪ್ರಾರಂಭಿಸುವಂತೆ ಸೂಚಿಸಿದರು.

ಕೆರೆಯ ಸುತ್ತಲಿನ ಪ್ರದೇಶದಲ್ಲಿ ಮೆಶ್ (ಬಲೆ) ನಿರ್ವಿುಸಿ, ಕೆರೆಯಲ್ಲಿ ಕಸ, ಕಡ್ಡಿ ಎಸೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಿದರು. ಗೋಕುಲ ರಸ್ತೆಯಲ್ಲಿ ನಿರ್ವಣಗೊಳ್ಳುತ್ತಿರುವ ಸ್ಮಾರ್ಟ್ ರಸ್ತೆ ಪರಿಶೀಲಿಸಿ, ಪ್ರತ್ಯೇಕ ಸೈಕಲ್ ಮಾರ್ಗ ನಿರ್ಮಾಣ ಯೋಜನೆ ಕೈಬಿಡುವಂತೆ ಸೂಚಿಸಿದರು. ಪ್ರತ್ಯೇಕ ಸೈಕಲ್ ಮಾರ್ಗ ನಿರ್ವಿುಸಿದರೆ ಸಾರ್ವಜನಿಕರು ಮಲ್ಟಿನ್ಯಾಷನಲ್ ಕಂಪನಿಯ ಸೈಕಲ್​ಗಳನ್ನೇ ಈ ಮಾರ್ಗದಲ್ಲಿ ಬಳಸಬೇಕು. ಅದರ ಬದಲು ಬೈಕ್​ಗಳಿಗೆ ಪ್ರತ್ಯೇಕ ಮಾರ್ಗ ನಿರ್ವಿುಸುವಂತೆ ಸೂಚಿಸಿದರು.

ಒಳಚರಂಡಿ, ಬಿಎಸ್​ಎನ್​ಎಲ್ ಕೇಬಲ್, ಹೆಸ್ಕಾಂ ಕೇಬಲ್, ಕುಡಿಯುವ ನೀರಿನ ಪೈಪ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ರಸ್ತೆ ಬದಿ ಡಕ್ ನಿರ್ವಿುಸಿ, ಅದರಲ್ಲಿ ಅಳವಡಿಸಬೇಕು. ಬಸ್ ನಿಲ್ದಾಣ ಹಾಗೂ ಇನ್ನಿತರ ಜನನಿಬಿಡ ಪ್ರದೇಶದಲ್ಲಿ ಇ ಶೌಚಾಲಯಗಳನ್ನು ನಿರ್ವಿುಸಬೇಕು ಎಂದು ಹೇಳಿದರು.

ಅವಳಿ ನಗರದ ಯಾವುದೇ ಭಾಗದಲ್ಲಿ ಅಂಡರ್​ಪಾಸ್ ನಿರ್ವಣಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಹೆಚ್ಚು ವಾಹನ ಸಂಚಾರ ಇರುವ ರಸ್ತೆಯಲ್ಲಿ ಅಂಡರ್​ಪಾಸ್ ನಿರ್ವಿುಸಬೇಕು. ಅಂಗವಿಕಲರಿಗಾಗಿ ಗಾಲಿ ಕುರ್ಚಿಗಳನ್ನು ಇಡಬೇಕು ಎಂದರು.

ಕಪು್ಪಪಟ್ಟಿಗೆ ಗುತ್ತಿಗೆದಾರರು: ನ. 1ರಂದು ಬಿಆರ್​ಟಿಎಸ್ ಬಸ್ ಸಂಚರಿಸದಿದ್ದರೆ ಕೆಆರ್​ಡಿಸಿಎಲ್ ಮುಖ್ಯ ಅಭಿಯಂತರರನ್ನು ಸೇವೆಯಿಂದ ಅಮಾನತುಗೊಳಿಸುವ ಜೊತೆಗೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೆಚ್ಚುವರಿ ಕಾರ್ವಿುಕರಿಂದ ಕಾಮಗಾರಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಬಿಆರ್​ಟಿಎಸ್ ಡಿಜಿಎಂ ಬಸವರಾಜ ಕೇರಿ, ಸ್ಮಾರ್ಟ್​ಸಿಟಿ ಕಂಪನಿಯ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್ ಮತ್ತಿತರರು ಹಾಜರಿದ್ದರು.