ನ್ಯಾಯಾಲಯ ದೇವಾಲಯ ಇದ್ದಂತೆ

ಹುಬ್ಬಳ್ಳಿ: ನ್ಯಾಯಾಲಯ ದೇವಾಲಯ ಇದ್ದಂತೆ. ನ್ಯಾಯಾಧೀಶ ಈಶ ಇದ್ದಂತೆ. ವಕೀಲರು ಪೂಜಾರಿಯಂತೆ ಎಂದು ಕಾರ್ವಿುಕ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಹೇಳಿದರು.

ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ಇಲ್ಲಿನ ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೂತನ ಹಾಗೂ ವರ್ಗಾವಣೆಯಾಗಿ ಹುಬ್ಬಳ್ಳಿಗೆ ಆಗಮಿಸಿದ ನ್ಯಾಯಾಧೀಶರ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲ್ಲಿ ನ್ಯಾಯಾಧೀಶರು ಹಾಗೂ ವಕೀಲರ ಪಾತ್ರ ಬಹಳ ಮುಖ್ಯವಾದದ್ದು. ವಕೀಲರು ಮಂತ್ರಕ್ಕಿಂತ ಉಗುಳು ಜಾಸ್ತಿ ಎಂಬಂತೆ ವರ್ತಿಸದೇ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದು ನಗೆ ಚಟಾಕಿ ಹಾರಿಸಿದರು. ವಕೀಲರ ವಾದ ಹೇಗಿರಬೇಕು ಎಂದರೆ ಎದುರಿನ ವಕೀಲರೂ ಹೌದೌದು ಎಂದು ತಲೆದೂಗುವಂತಿರಬೇಕು ಎಂದರು.

ಹುಬ್ಬಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ವ ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ನ್ಯಾಯಾಧೀಶ ಎಸ್.ಎಂ. ಕಲಾಲ, ಕಾರ್ವಿುಕ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ, 3ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಹಾಗೂ 3ನೇ ಜೆಎಂಎಫ್​ಸಿ ನೂತನ ನ್ಯಾಯಾಲಯದ ನ್ಯಾಯಾಧೀಶೆ ಪುಷ್ಪಾ ಜೋಗೋಜಿ, 5ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ಕಿರಿಯ ವಿಭಾಗದ ನ್ಯಾಯಾಧೀಶೆ ಅನುರಾಧ ಎಚ್.ಎಸ್. ಅವರನ್ನು ವಕೀಲರ ಸಂಘದಿಂದ ಸ್ವಾಗತಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಶಿವಾಜಿ ನಲವಡೆ, ಕೆ.ಎನ್. ಗಂಗಾಧರ, ಸುಮಂಗಲಾ ಬಸವಣ್ಣೂರ, ನಾಗರಾಜಪ್ಪ ಎ.ಕೆ., ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ ಸ್ವಾಗತಿಸಿದರು, ಯುವ ವಕೀಲೆ ರೇಖಾ ಮುತಗಿ ಸ್ವಾಗತಿಸಿದರು, ವಿಠಲ ಸೋಮನಕೊಪ್ಪ ವಂದಿಸಿದರು. ಬಿ.ವಿ. ಕೋರಿಮಠ ನಿರೂಪಿಸಿದರು.

Leave a Reply

Your email address will not be published. Required fields are marked *