25.9 C
Bengaluru
Wednesday, January 22, 2020

ನ್ಯಾಯಾಧೀಶರ ವಸತಿಗೃಹ ನಿರುಪಯುಕ್ತ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಸೌಕರ್ಯಗಳನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಹೇಗೆ ನಿರುಪಯುಕ್ತವಾಗುತ್ತದೆ ಎಂಬುದಕ್ಕೆ ಪುರಸಭೆಯ ಬಾವಿ ಹಾಗೂ ಹಿಂದೆ ನ್ಯಾಯಾಧೀಶರು ವಾಸ ಮಾಡುತ್ತಿದ್ದ ಮನೆ ಸಾಕ್ಷಿ ಹೇಳುತ್ತಿದೆ. ನೂರಾರು ಜನರ ದಾಹ ತಣಿಸಿದ ಬಾವಿ ನೀರು ಕಿಲುಬು ಹಿಡಿದರೆ, ಸುಸಜ್ಜಿತ ಮನೆ ಅವನತಿಯ ಹಾದಿ ಹಿಡಿದೆ. ಸೌಲಭ್ಯಗಳನ್ನು ಪಡೆಯುವುದೇ ಕಷ್ಟವಿರುವಾಗ ಕೊಟ್ಟದ್ದನ್ನು ಕಳೆದುಕೊಳ್ಳುವುದು ಸುಲಭ ಎಂಬುದಕ್ಕೆ ಇದು ಒಳ್ಳೆ ಉದಾಹರಣೆ. ಪುರಸಭೆ ಲಕ್ಷಾಂತರ ರೂ. ಸುರಿದು ದೊಡ್ಡ ಬಾವಿ ನಿರ್ಮಿಸಿತ್ತು. ಸಾಕಷ್ಟು ನೀರೂ ಬಾವಿಯಲ್ಲಿದ್ದು, ನೂರಾರು ಜನರ ದಾಹ ತಣಿಸಿತ್ತು. ಯಾವತ್ತು ಪುರಸಭೆಗೆ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಆರಂಭವಾಯಿತೋ ಅಂದಿನಿಂದ ಬಾವಿ ಅವನತಿ ಆರಂಭವಾಯಿತು. ಪ್ರಸಕ್ತ ಬಾವಿ ನೀರು ಕಿಲುಬು ಹಿಡಿದು ನೀರಿನ ಬಣ್ಣವೇ ಬದಲಾಗಿದೆ. ಅಳವಡಿಸಿದ್ದ ಕಬ್ಬಿಣದ ಗ್ಯಾಲರಿ ಬಾವಿಯೊಳಗೆ ಬಿದ್ದು ನೀರು ಕಿಲುಬೆದ್ದಿದೆ. ನ್ಯಾಯಾಧೀಶರು ವಾಸ ಮಾಡುತ್ತಿದ್ದ ಮನೆ ಭೂತ ಬಂಗಲೆಯಂತಾಗಿದ್ದು, ಕಾಂಪೌಂಡ್ ಒಳಗೆ ಹೋಗೋದಕ್ಕೂ ಭಯವಾಗುವಷ್ಟು ಗಬ್ಬೆದ್ದು ಹೋಗಿದೆ. ಮಾಡಿನ ಮೇಲೆ ಮರದ ಗೆಲ್ಲು ಕೊಂಬೆ ಬಿದ್ದು ಹೆಂಚು ಒಡೆದು ಮಳೆಗಾಲದ ನೀರು ಒಳಕ್ಕೆ ಇಳಿದು ಮರಮುಟ್ಟುಗಳನ್ನೂ ಹಾಳು ಮಾಡಿದೆ. ಆಲದ ಮರದ ಕೊಂಬೆ ಮಾಡಿಗೆ ಒರಗಿದ್ದರಿಂದ ಮಾಡು ಕುಸಿದರೂ ಅಚ್ಚರಿಯಿಲ್ಲ.
ಕಾಂಪೌಂಡ್ ಒಳಗಡೆ ತಿರುಗಲೂ ಭಯ

ಫೆರ‌್ರಿ ರಸ್ತೆಯಲ್ಲಿ ಇರುವ ಮನೆ ನ್ಯಾಯಾಲಯ ಸಮುಚ್ಚಯಕ್ಕೆ ಸೇರಿದ್ದು, ಮನೆ ನಿರ್ವಹಣೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಹಿಂದೆ ಇದೇ ಕ್ವಾಟ್ರಸ್‌ನಲ್ಲಿ ನ್ಯಾಯಾಧೀಶರು ವಾಸ ಮಾಡುತ್ತಿದ್ದರು ಎಂಬ ಕಲ್ಪನೆ ಮಾಡಲೂ ಆಗದಷ್ಟು ಅವ್ಯವಸ್ಥೆ ಇದೆ. ಮನೆ ಮಾಡಿನ ಮೇಲೆ ವಾಲಿದ ಆಲದ ಮರದ ರೆಂಬೆ ಕೊಂಬೆ, ಮನೆ ಆವರಣ ತರಗಲೆ ಹಾಗೂ ಇನ್ನಿತರ ಕಸಕಡ್ಡಿಗಳ ಅಡ್ಡೆಯಾಗಿದೆ. ಮನೆ ಕಾಂಪೌಂಡ್ ಒಳಗೆ ತಿರುಗಾಡುವುದಕ್ಕೂ ಭಯವಾಗುತ್ತದೆ. ನ್ಯಾಯಾಧೀಶರನ್ನು ಗೌರವಯುತವಾಗಿ ಕರೆದುಕೊಂಡು ಹೋಗುವುದಕ್ಕೆ ಹಾಗೂ ಬಿಡುವ ಸಮಯ ರಸ್ತೆಗೊಂದು ವಿಶೇಷ ಗೌರವ ಸಿಗುತ್ತಿತ್ತು. ನ್ಯಾಯಾಧೀಶರಲ್ಲದೆ ಪೊಲೀಸ್ ಅಧಿಕಾರಿಗಳ ವಸತಿಗೃಹ ಕೂಡ ಇದ್ದು, ಫೆರ‌್ರಿ ರಸ್ತೆಯಲ್ಲಿ ಖಾಕಿ ಖದರ್ ಇತ್ತು. ಈಗ ಅವೆಲ್ಲವೂ ಗತವೈಭವ. ಹಿಂದೆ ಪೊಲೀಸ್ ಅಧಿಕಾರಿಗಳು ಇದ್ದ ಮನೆ ಕೆಡವಿ ಪೊಲೀಸ್ ಸಮುಚ್ಚಯ ತಲೆ ಎತ್ತಿದೆ. ಈಗ ಉಳಿದಿದ್ದು ನ್ಯಾಯಾಧೀಶರ ಮನೆ ಮಾತ್ರ. ಅದನ್ನು ಉಳಿಸಿಕೊಳ್ಳುವ ಇರಾದೆ ಯಾರಿಗೂ ಇದ್ದಂತಿಲ್ಲ.

ಮಿನಿ ವಿಧಾನಸೌಧ ಪಕ್ಕದಲ್ಲಿರುವ ಕ್ವಾಟ್ರಸ್ ಸುಸಜ್ಜಿತವಾಗಿದ್ದು, ಕುಂದಾಪುರ ವೃತ್ತ ನಿರೀಕ್ಷಕರ ಕಚೇರಿಗೆ ಅನುಕೂಲ ಮಾಡಿಕೊಟ್ಟರೆ ಕಟ್ಟಡದ ನಿರ್ವಹಣೆ ಜತೆಗೆ ಸುಸಜ್ಜಿತ ಕಚೇರಿಯೂ ಆಗುತ್ತದೆ. ಸಂಚಾರಿ ಹಾಗೂ ಪೊಲೀಸ್ ಠಾಣೆ ಸನಿಹದಲ್ಲಿ ಕಟ್ಟಡ ಇರುವುದರಿಂದ ವೃತ್ತ ನಿರೀಕ್ಷಕರ ಕಚೇರಿಗೆ ಅನುಕೂಲಕರ ಸ್ಥಳವಾಗಿದೆ. ಕಟ್ಟಡ ಪೊಲೀಸ್ ಇಲಾಖೆಗೆ ಕೊಟ್ಟರೆ ಅದರ ಸದ್ವಿನಿಯೋಗ ಆಗುತ್ತದೆ.
ಮಂಜಪ್ಪ ಡಿ.ಬಿ., ಕುಂದಾಪುರ ವೃತ್ತ ನಿರೀಕ್ಷಕರ

ಫೆರ‌್ರಿ ರಸ್ತೆ ಪಕ್ಕದಲ್ಲಿರುವ ಬಾವಿಯಿಂದ ಫೆರ‌್ರಿ ಪಾರ್ಕಿಗೆ ನೀರು ಪೂರೈಕೆ ಮಾಡುತ್ತಿದ್ದು, ಅದಕ್ಕಾಗಿ ಮೋಟಾರ್ ಕೂಡ ಅಳವಡಿಸಲಾಗಿದೆ. ಕುಂದಾಪುರದಲ್ಲಿರುವ ಐದು ತೆರೆದ ಬಾವಿಗಳಿಗೆ ಮೋಟಾರ್ ಹಾಕಿದ್ದು, ಅದರಿಂದ ಟ್ಯಾಂಕರ್ ನೀರು ಪೂರೈಕೆ ಮಾಡುವವರಿಗೆ ನೀಡಲಾಗುತ್ತದೆ. ನೀರು ಪೂರೈಕೆ ಮಾಡುವವರು ಬಾವಿ ನಿರ್ವಹಣೆ ಜತೆ ವಿದ್ಯುತ್ ಬಿಲ್ ಪಾವತಿಸಬೇಕು. ಬಾವಿ ನೀರು ಶುದ್ಧೀಕರಿಸಲು ಪುರಸಭೆ ಅನುದಾನ ಕಾದಿರಿಸಿದ್ದು, ಬಾವಿ ನೀರು ಶುದ್ಧಿ ಮಾಡಿ ನೀರು ಪೂರೈಕೆ ಮಾಡುವ ಉದ್ದೇಶದಲ್ಲಿ ಪಂಪ್ ಅಳವಡಿಸಲಾಗಿದೆ. ಸ್ಥಳ ಸ್ವಚ್ಛಗೊಳಿಸಿ ಎಲೆಗಳು ಬಾವಿಗೆ ಬೀಳದಂತೆ ವ್ಯವಸ್ಥೆ ಮಾಡಲಾಗುತ್ತದೆ.
ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಕುಂದಾಪುರ ಪುರಸಭೆ

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...