ಚಿಕ್ಕಮಗಳೂರು: ಸಿಐಡಿ ತನಿಖೆ ಮಾಡುವುದಾದರರೇ ಹಾಲಿ ನ್ಯಾಯಾಧೀಶರ ನೇತೃತ್ವ ಹಾಗೂ ನಿರ್ದೇಶನದಲ್ಲಿ ತನಿಖೆ ನಡೆಯಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಒತ್ತಡ ಇಲ್ಲದೆ ತನಿಖೆ ಮಾಡುವುದಾದರೆ ಕಾನ್ಸ್ಟೇಬಲ್ ಕೂಡ ತನಿಖೆ ಮಾಡಬಹುದು ಎಂದರು.
ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ವಿಷಯಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಈಗ ಪ್ರಕರಣ ತನಿಖೆ ಹಂತದಲ್ಲಿದೆ. ಪೊಲೀಸ್ ಕೇಸ್ ಆದ ಮೇಲೆ ಎಲ್ಲವೂ ಅಪ್ರಸ್ತುತ. ಕೇಸ್ ಆಗುವ ಮೊದಲು ಅಣೆ ಪ್ರಮಾಣದ ಬಗ್ಗೆ ಮಾತನಾಡಬಹುದಾಗಿತ್ತು ಎಂದರು.
ನಿನ್ನ ಮನೆಗೆ ಹಿರಿಯರೊಬ್ಬರು ಬಂದಿದ್ದರು. ಅವರು ಮಾತನಾಡುವಾಗ ಕೆಸರು ನಿನ್ನ ಮೇಲೆ ಬಿದ್ದರೂ ಕೆಸರಿನಲ್ಲಿ ನೀನು ಬಿದ್ದರೂ ನೀನೇ ಸ್ನಾನ ಮಾಡಬೇಕು ಎಂದು ಹೇಳಿದರು. ಜೊತೆಗೆ ಕೆಸರಿನಿಂದ ದೂರ ಇರು ಎಂದೂ ಹೇಳಿದರು ಅದಕ್ಕೆ ಸುಮ್ಮನಿz್ದೆÃನೆ ಎಂದು ಹೇಳಿದರು.
ನನ್ನ ಮೂಲಭೂತ ಹಕ್ಕನ್ನು ದಮನ ಮಾಡಿದ್ದಾರೆ. ಮಾನವ ಹಕ್ಕುಗಳನ್ನು ದಮನ ಮಾಡಿ ಅಮಾನವೀಯವಾಗಿ ನಡೆಸಿಕೊಂಡರು. ನಾನು ಯಾರನ್ನು ಕೊಲೆ ಮಾಡಿz್ದÉÃನೆ. ಅವರು ಕೊಲೆ ಗಡುಕ ಎಂದು ಹೇಳಿz್ದÉÃನೆ ಎಂದು ಒಪ್ಪಿಕೊಂಡಿದ್ದಾರೆ. ಅವರು ಕ್ಷಮೆಯಾಚಿಸಬೇಕು ಎಂದರು.
ಪ್ರಕರಣದ ಬಗ್ಗೆ ಸಿ.ಟಿ. ರವಿ ಮತ್ತೊಂದು ದೂರು
ಸದನದ ಕಲಾಪವನ್ನು ಮುಂದೂಡಿದ ಬಳಿಕ ವಿಧಾನಪರಿಷತ್‌ನಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದ್ದು, ನಂತರದಲ್ಲಿ ಪೊಲೀಸರು ಇಡೀ ರಾತ್ರಿ ತಮ್ಮನ್ನು ವಾಹನದಲ್ಲಿ ಸುತ್ತಾಡಿಸಿ ನಡೆದುಕೊಂಡ ರೀತಿಯ ವಿವರ ಸಹಿತ ಮತ್ತೊಂದು ದೂರವನ್ನು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ವಿಧಾನಪರಿಷತ್ ಸಭಾಪತಿಗಳಿಗೆ ಸಲ್ಲಿಸಿದ್ದಾರೆ.
೭ ಪುಟಗಳ ವಿವರವಾದ ದೂರನ್ನು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಪೊಲೀಸ್ ಮಹಾ ನೀರಿಕ್ಷಕರಿಗೆ ಮಂಗಳವಾರ ಸಲ್ಲಿಸಿದ್ದಾರೆ.
ಡಿ. ೧೯ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನಪರಿಷತ್‌ನಲ್ಲಿ ನಾನು ಅಸಂವಿಧಾನಿಕ ಪದ ಬಳಕೆ ಮಾಡಿz್ದÉÃನೆ ಎಂದು ಸಭಾಪತಿಗಳಿಗೆ ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬAಧಿಸಿದAತೆ ಸಭಾಪತಿಗಳು ನನ್ನಿಂದ ಸಮಾಜಾಯಿಷಿ ಪಡೆದು, ದಾಖಲೆಗಳನ್ನು ಪರಿಶೀಲಿಸಿ ನಂತರ ಆದೇಶ ನೀಡಿದ್ದಾರೆ.
ಕಲಾಪ ಮುಂದೂಡಿದ ನಂತರ ಸದನದೊಳಗೆ ಹಾಗೂ ಹೊರಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಬೋಸರಾಜು, ವಿಧಾನಪರಿಷತ್ ಸದಸ್ಯರಾದ ನಜೀರ್ ಅಹ್ಮದ್, ಬಸವನಗೌಡ ಬಾದರ್ಲಿ, ಚೆನ್ನರಾಜ ಹಟ್ಟಿಹೊಳೆ ಅವರು ಅವಾಚ್ಯ ಶಬ್ಧಗಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ನಿಂದಿರಿಸುವುದರ ಜತೆಗೆ ಹೊರಗೆ ಬಾ ನಿನಗೆ ಗತಿ ಕಾಣಿಸುತ್ತೇವೆಂದು ಜೀವ ಬೆದರಿಕೆ ಹಾಕಿದ್ದಾರೆ. ಅವರ ಬೆಂಬಲಿಗರು ಕೂಡ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರಿಂದ ನನ್ನ ಹಕ್ಕು ಚ್ಯುತಿಯಾಗಿದೆ. ಜೀವ ಬೆದರಿಕೆ, ಮಾನಹಾನಿಯಾಗಿದೆ. ಸಚಿವರ ಬೆಂಬಲಿಗರಿAದ ಹಲ್ಲೆ ಯತ್ನ ನಡೆದಿದೆ ಎಂದು ಸಭಾಪತಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.