ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಸೋಂಕಾಲ್ ಸುಭಾಷ್‌ನಗರದ ಮನೆಯೊಂದಕ್ಕೆ ನುಗ್ಗಿ ಐಫೋನ್, ಇಲೆಕ್ಟ್ರಾನಿಕ್ ಉಪಕರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ ವಿನೋದ್‌ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಬೇರೊಂದು ಕಳವು ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಬಂಧಿಸಿ, ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿದ್ದ ಅವರನ್ನು ಕುಂಬಳೆ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮಂಜೇಶ್ವರ ನಿವಾಸಿ ಮಹಮ್ಮದ್ ಶೀಹಾಬ್, ಮಂಗಳೂರು ಗಂಜಿಮಠ ನಿವಾಸಿಗಳಾದ ಮಹಮ್ಮದ್ ಸಪ್ವಾನ್, ಮಹಮ್ಮದ್ ಅರ್ಫಾಸ್ ಬಂಧಿತರು.
ಪ್ರಕರಣಕ್ಕೆ ಸಂಬಂಧಿಸಿ ಬಂದ್ಯೋಡು ಅಡ್ಕ ನಿವಾಸಿ ಅಶ್ರಫ್‌ಆಲಿ ಎಂಬಾತನನ್ನು ಈ ಹಿಂದೆ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದನು. 2024 ಜೂನ್ 4ರಂದು ಸೋಂಕಾಲ್ ಸುಭಾಷ್‌ನಗರ ನಿವಾಸಿ ಆಯಿಷಾಯೂಸುಫ್ ಅವರ ಮನೆಗೆ ನುಗ್ಗಿ 1.20ಲಕ್ಷ ರೂ. ಮೌಲ್ಯದ ಇಲೆಕ್ಟ್ರಾನಿಕ್ ಸಾಮಗ್ರಿ ಕಳವು ನಡೆಸಲಾಗಿತ್ತು.