ಬಾಗಲಕೋಟೆ: ಬಿವಿವಿ ಸಂಘದವು ತನ್ನ ಸಿಬ್ಬಂದಿಗಳ ಹಿತ ರಕ್ಷಣೆಗೆ ಜೊತೆಗೆ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿದೆ. ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಆಡಳಿತ ಕಚೇರಿಯಲ್ಲಿ ಶುಕ್ರವಾರ ಭಾರತಿ ಮಠ ಅವರಿಗೆ ಪಿಂಚಣಿ ಹಣದ ಚಕ್ ನೀಡಿ ಅವರು ಮಾತನಾಡಿದರು.
ಸಂಘದಲ್ಲಿ ಸೇವೆ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ನೌಕರರಿಗೆ ಸದಾಕಾಲ ಬೆನ್ನೆಲುಬಾಗಿ ನಿಲ್ಲುವುದರ ಜೊತೆಗೆ ಅವರ ಹಿತರಕ್ಷಣೆ ಹಾಗೂ ಅವರ ಕ್ಷೇಮಾಭಿವೃದ್ಧಿಗೆ ಸದಾಕಾಲ ಸಂಘ ಶ್ರಮಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಆಡಳಿತಾಽಕಾರಿ ವಿ.ಆರ್.ಶಿರೋಳ, ಬಿ.ವಿ.ವಿ.ಸಂಘದ ನೌಕರರ ಕ್ಷೇಮಾಭಿವೃದ್ಧಿ ಅಽಕಾರಿ ಎಚ್.ಎನ್.ಯಾದವಾಡ ಇದ್ದರು.
TAGGED:ಬಾಗಲಕೋಟೆ