ರಾಯಚೂರು: ಸರ್ಕಾರ ಕ್ರಮವನ್ನು ಖಂಡಿಸಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಿಬೂಬ ಪಾಷಾ ಮೂಲಿಮನಿ ಅಮಾನತ್ತುಗೊಳಿಸಲಾಗಿದೆ.
ರಾಯಚೂರು ಪಶು ಇಲಾಖೆಯ ಜಾನುವಾರು ಅಧಿಕಾರಿ ಮಹೆಬೂಬ್ ಪಾಷಾ ಮೂಲಿಮನಿ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶವನ್ನು ಹಾಕಿದ್ದರು.
ಈ ಬಗ್ಗೆ ಸಚಿವರಿಗೆ ದಾಖಲೆ ಸಮೇತ ದೂರು ಸಲ್ಲಿಕೆಯಾಗಿತ್ತು. ಸರ್ಕಾರದ ನಿಯಮಗಳ ವಿರುದ್ಧ ಸಂದೇಶ ರವಾನೆಯ ಆರೋಪ ಮೇಲ್ನೋಟಕ್ಕೆ ಸಾಬೀತು ಹಿನ್ನೆಲೆಯಲ್ಲಿ ಪಶು ಸಂಗೋಪನೆ ಇಲಾಖೆಯ ಆಯುಕ್ತರು ಅಮಾನತು ಆದೇಶ ಹೊರಡಿಸಿದ್ದಾರೆ.