ರಾಯಬಾಗ: ಸರ್ಕಾರ ದಶಕಗಳಿಂದ ಬಾಕಿ ಉಳಿದಿರುವ ಪೌರಸೇವಾ ನೌಕರರ ಬೇಡಿಕೆ ಶೀಘ್ರ ಈಡೇರಿಸಬೇಕೆಂದು ರಾಜ್ಯ ಪೌರ ನೌಕರರ ಸೇವಾ ಸಂಘದ ಅಧ್ಯಕ್ಷ ಎನ್. ಪ್ರಸಾದ ಆಗ್ರಹಿಸಿದರು.

ಪಟ್ಟಣದ ಡಾ.ಬಾಬು ಜಗಜೀವನರಾಮ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಪೌರ ಸೇವಾ ನೌಕರರ ರಾಜ್ಯ ಪರಿಷತ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ಬಾರಿ ಮುಖ್ಯಮಂತ್ರಿಗಳಿಗೆ, ಪೌರಾಡಳಿತ ಸಚಿವರಿಗೆ, ಸರ್ಕಾರದ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ್ದು, ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇರುವುದು ಖಂಡನೀಯ ಎಂದರು.
ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಇನ್ನು ೩೦ ದಿನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು. ಈ ಹೋರಾಟದಲ್ಲಿ ಎಲ್ಲ ಪಪಂ, ಪುರಸಭೆ ಮತ್ತು ನಗರಸಭೆಗಳ ಪೌರಕಾರ್ಮಿಕರು, ಮುಖ್ಯಾಧಿಕಾರಿಗಳು ಪಾಲ್ಗೊಳಬೇಕೆಂದು ಮನವಿ ಮಾಡಿಕೊಂಡರು.
ಮಹೇಂದ್ರ ತಿಮ್ಮಾನಿ, ಸಿದ್ದು ಹುಣಸಿಮರದ, ರಾಘವೇಂದ್ರ ಭರಮನ್ನವರ, ಪಿ.ಕೆ ಸತೀಶ, ಡಿ.ಬಿ.ನವಲೆ, ಎಸ್.ಎಂ.ಹಿರೇಮಠ, ಕುಮಾರೇಶ್, ರಮೇಶ ಬಳ್ಳಾರಿ, ವೆಂಕಟೇಶ ಬಳ್ಳಾರಿ, ಸಿದ್ದಪ್ಪ ಬಣಕಾರ, ವಸಂತ ಬೆಲ್ಲದ, ರಮೇಶ ಮಂಜುಕರ, ಮಹೇಶ ಹಡಪದ, ನಾಗರಾಜ ಬಳ್ಳಾರಿ, ಸಾಬಣ್ಣ ಪೂಜಾರಿ, ಗಣೇಶ ಬಳ್ಳಾರಿ, ಮೀನಾಕ್ಷಿ ಶಿರಗುಪ್ಪಿ ಇತರರು ಇದ್ದರು.